Breaking News

ಐಪಿಎಲ್2020: 2ನೇ ಸ್ಥಾನ ಯಾರಿಗೆ?ಇವತ್ತು ಆರ್‌ಸಿಬಿಗೆ ಮಾಡು ಇಲ್ಲವೇ ಮಡಿ ಪಂದ್ಯ.

Spread the love

ಬೆಂಗಳೂರು: 2020ರ ಐಪಿಎಲ್ ಟೂರ್ನಿಯಲ್ಲಿ 45 ದಿನಗಳಲ್ಲಿ 54 ತಂಡಗಳು ಪೂರ್ಣಗೊಂಡರೂ ಪ್ಲೇ ಆಫ್ ರೇಸ್ ಅಂತ್ಯವಾಗಿಲ್ಲ. ಇವತ್ತು ಆರ್‌ಸಿಬಿಗೆ ಮಾಡು ಇಲ್ಲವೇ ಮಡಿ ಪಂದ್ಯ. ಇವತ್ತು ದೆಹಲಿ ಮತ್ತು ಬೆಂಗಳೂರು ನಡುವೆ ಐಪಿಎಲ್ ಮ್ಯಾಚ್ ನಡೆಯಲಿದೆ.

ಇಂದಿನ ಮ್ಯಾಚ್‍ನಲ್ಲಿ ಆರ್‌ಸಿಬಿ ಗೆಲ್ಲಲೇಬೇಕಾಗಿದೆ. ಗೆದ್ದರಷ್ಟೇ ಪ್ಲೇ ಆಫ್‍ಗೆ ಆರ್ ಸಿಬಿಗೆ ಎಂಟ್ರಿ ಸಿಗುತ್ತೆ. ಅಪ್ಪಿತಪ್ಪಿ ಸೋತರೆ ಆಗ ಬೆಂಗಳೂರು ತಂಡದ ಭವಿಷ್ಯ ಹೈದ್ರಾಬಾದ್-ಮುಂಬೈ ನಡುವಿನ ಪಂದ್ಯದ ಮೇಲೆ ಅವಲಂಬಿತ ಆಗಿರುತ್ತೆ. ಮುಂಬೈ ಎದುರು ಹೈದ್ರಾಬಾದ್ ಸೋತರಷ್ಟೇ ಆರ್ ಸಿಬಿ ಆಸೆ ಜೀವಂತವಾಗಿರಲಿದೆ.ಆವೃತ್ತಿಯ ಮೊದಲ ಪಂದ್ಯದಲ್ಲಿ ಡೆಲ್ಲಿ, ಬೆಂಗಳೂರು ತಂಡವನ್ನು 59 ರನ್ ಗಳ ಅಂತರದಿಂದ ಸೋಲುಣಿಸಿತ್ತು. ಈ ಸೋಲಿಗೆ ಕೊಹ್ಲಿ ಸೇನೆ ಪ್ರತಿಕಾರ ತೀರಿಸಿಕೊಳ್ಳಬೇಕಿದೆ. ಸದ್ಯ 13 ಪಂದ್ಯಗಳಲ್ಲಿ 7 ರಲ್ಲಿ ಗೆದ್ದು 14 ಅಂಕಗಳೊಂದಿಗೆ ಬೆಂಗಳೂರು, ಡೆಲ್ಲಿ ತಂಡಗಳು ಕ್ರಮವಾಗಿ 2ನೇ ಮತ್ತು 3ನೇ ಸ್ಥಾನದಲ್ಲಿವೆ. ಆರ್ ಸಿಬಿ ಸದ್ಯ -0.145 ರನ್ ರೇಟ್ ಹೊಂದಿದ್ದು, ಡೆಲ್ಲಿ -0.159 ರನ್ ರೇಟ್ ಹೊಂದಿದೆ. ಈ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಪ್ಲೇ ಆಫ್ ಸ್ಥಾನ ಖಚಿತವಾಗುತ್ತದೆ. ಆದರೆ ಸೋತ ತಂಡದ ಭವಿಷ್ಯ ಹೈದರಾಬಾದ್-ಮುಂಬೈ ಪಂದ್ಯಗಳ ಫಲಿತಾಂಶದ ಮೇಲೆ ನಿರ್ಧಾರವಾಗುತ್ತದೆ.


Spread the love

About Laxminews 24x7

Check Also

ನಮ್ಮದು ಸಣ್ಣ ಪಕ್ಷ, ನಾವ್ಯಾಕೆ ಕಾಂಗ್ರೆಸ್ ಶಾಸಕರನ್ನ ಆಪರೇಷನ್ ಮಾಡೋಣ: ಹೆಚ್‌ಡಿಕೆ

Spread the loveಬೆಂಗಳೂರು: ನಮ್ಮದು ಸಣ್ಣ ಪಕ್ಷ ನಾವ್ಯಾಕೆ ಕಾಂಗ್ರೆಸ್  ಶಾಸಕರನ್ನ ಆಪರೇಷನ್ ಮಾಡೋಣ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ  …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ