Breaking News

ಕೊರೋನಾ ವೈರಸ್‌ ಸೋಂಕಿನಿಂದ ಸಚಿವರ ಪರಿಸ್ಥಿತಿ ಚಿಂತಾಜನಕ

Spread the love

ಚೆನ್ನೈ: ಕೊರೋನಾ ವೈರಸ್‌ ತಗುಲಿರುವುದರಿಂದ ಗೆ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಕೃಷಿ ಸಚಿವ ಆರ್ ದೊರೈಕಣ್ಣಾ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಜೀವ ರಕ್ಷಕ ಅಳವಡಿಸಲಾಗಿದೆ ಎಂದು ಕಾವೇರಿ ಆಸ್ಪತ್ರೆ ಶನಿವಾರ ತಿಳಿಸಿದೆ.

ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 72 ವರ್ಷದ ದೊರೈಕಣ್ಣಾ ಅವರು ಅಕ್ಟೋಬರ್ 13ರಂದು ಕೋವಿಡ್-19 ಪರೀಕ್ಷೆ ಮಾಡಿಸಿದ್ದರು. ವರದಿ ಪಾಸಿಟಿವ್ ಬಂದಿದ್ದರಿಂದ ಚಿಕಿತ್ಸೆಗಾಗಿ ನಗರದ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದರು.

ಗರಿಷ್ಠ ಜೀವ ರಕ್ಷಕದ ಹೊರತಾಗಿಯೂ ಸಚಿವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದು, ಐಸಿಯು ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕಾವೇರಿ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಅರವಿಂದನ್ ಸೆಲ್ವರಾಜ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

About Laxminews 24x7

Check Also

ಪಂಚಮಸಾಲಿ ಪೀಠದಲ್ಲಿ ಸಭೆ, ಸಮಾರಂಭ ಮಾಡದಂತೆ ಒಂದು ತಿಂಗಳ ಕಾಲ ನಿಷೇಧಾಜ್ಞೆ ಜಾರಿ

Spread the loveದಾವಣಗೆರೆ: ಹರಿಹರ ಪಂಚಮಸಾಲಿ ಪೀಠದಲ್ಲಿ  ದಿನ ಕಳೆದಂತೆ ಸ್ವಾಮೀಜಿ  ಬೆಂಬಲಿಗರು ಹಾಗೂ ಟ್ರಸ್ಟಿಗಳ ನಡುವಿನ ಗಲಾಟೆ ಜೋರಾಗುತ್ತಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ