Breaking News

ಕನ್ನಡ ಕಿರುತೆರೆಯ ಖ್ಯಾತ ನಟ ಚಂದು ಬಿ ಗೌಡ ಬಹುಕಾಲದ ಗೆಳತಿ ಶಾಲಿನಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ

Spread the love

ಬೆಂಗಳೂರು : ಚಿತ್ರರಂಗದಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಸ್ಯಾಂಡಲ್ ವುಡ್ ಸೇರಿದಂತೆ ಬೇರೆ ಬೇರೆ ಭಾಷೆಯಲ್ಲಿ ಅನೇಕ ಕಲಾವಿದರು ಹಸೆಮಣೆ ಏರುತ್ತಿದ್ದಾರೆ. ಇದೀಗ ಕನ್ನಡ ಕಿರುತೆರೆಯ ಖ್ಯಾತ ನಟ ಚಂದು ಬಿ ಗೌಡ ಬಹುಕಾಲದ ಗೆಳತಿ ಶಾಲಿನಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ

ಗುರುವಾರ (ಅ.29) ನಡೆದ ಮದುವೆ ಸಮಾರಂಭದಲ್ಲಿ ನಟ ಚಂದು ಗೆಳತಿ ಶಾಲಿನಿ ಕೊರಳಿಗೆ ಮಾಂಗಲ್ಯಧಾರಣೆ ಮಾಡಿದ್ದಾರೆ. ಚಂದು ಮತ್ತು ಶಾಲಿನಿ ಸರಳವಾಗಿ, ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದಾರೆ. ಇಬ್ಬರ ಮದುವೆ ಸಮಾರಂಭಕ್ಕೆ ಕುಟುಂಬದವರು, ಸ್ನೇಹಿತರು ಮತ್ತು ತೀರಾ ಆಪ್ತರು ಮಾತ್ರ ಹಾಜರಾಗಿ ನವಜೋಡಿಗೆ ಶುಭಹಾರೈಸಿದ್ದಾರೆ.ಕೊರೊನಾ ವೈರಸ್ ಹಿನ್ನಲೆ ಸರಳವಾಗಿ ಚಂದು ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ. ಚಂದು ಶಾಲಿನಿ ಮದುವೆಯ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.


Spread the love

About Laxminews 24x7

Check Also

ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆಶಿ 6 ವರ್ಷ – ಕಾಂಗ್ರೆಸ್ ಶಾಸಕರಿಗೆ ಡಿನ್ನರ್ ಪಾರ್ಟಿ

Spread the loveಬೆಂಗಳೂರು: ಡಿ.ಕೆ.ಶಿವಕುಮಾರ್  ಕೆಪಿಸಿಸಿ ಅಧ್ಯಕ್ಷರಾಗಿ ಇಂದಿಗೆ 6 ವರ್ಷ ತುಂಬಿದೆ. ಈ ಹಿನ್ನೆಲೆಯಲ್ಲಿ ಇಂದು ರಾತ್ರಿ ಪಕ್ಷದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ