Breaking News

ಮಾರುವೇಷದಲ್ಲಿ ಮೈಸೂರು ಸುತ್ತಿದ್ದಾರೆ. ಹಲವು ನಟ, ನಟಿಯರು

Spread the love

ಮೈಸೂರು: ಸ್ಟಾರ್ ನಟ ಎಂದರೆ ಸಾಮಾನ್ಯ ದಿನಗಳಲ್ಲೇ ಜನ ಮುಗಿ ಬೀಳುತ್ತಾರೆ. ಇನ್ನೂ ದಸರಾ ಸಂದರ್ಭದಲ್ಲಿ ಕೇಳ್ತೀರಾ ಇರುವೆ ತರ ಮುತ್ತಿಕೊಳ್ಳುತ್ತಾರೆ. ಇದರಿಂದಾಗಿಯೇ ಹಲವು ನಟ, ನಟಿಯರು ಮಾರುವೇಷದಲ್ಲಿ ಸುತ್ತಾಡುತ್ತಾರೆ. ಅದೇ ರೀತಿ ದಸರಾ ನೋಡಲು ನಟ ನೀನಾಸಂ ಸತೀಶ್ ಮಾರುವೇಷದಲ್ಲಿ ಮೈಸೂರು ಸುತ್ತಿದ್ದಾರೆ.

ಹೌದು ಮೈಸೂರು ದಸರಾ ನೋಡುವ ಆಸೆ ಯಾರಿಗಿರಲ್ಲ ಹೇಳಿ, ಅದರೆ ಜನಪ್ರಿಯ ನಟರು ಜನಸಾಮಾನ್ಯರಂತೆ ಜಾಲಿಯಾಗಿ ನಿಂತು ದಸರಾ ವೀಕ್ಷಿಸಲು ಸಾಧ್ಯವಿಲ್ಲ. ಹೀಗೆ ಮಾಡಿದರೆ ಅಭಿಮಾನಿಗಳು ಅವರನ್ನು ನೋಡಲು ಮುಗಿ ಬೀಳುತ್ತಾರೆ. ಇದಕ್ಕಾಗಿ ನಟ ನಿನಾಸಂ ಸತೀಶ್ ಭರ್ಜರಿ ಪ್ಲಾನ್ ಮಾಡಿ ಫುಲ್ ಪ್ಯಾಕಪ್ ಆಗಿ ದಸರಾ ವೀಕ್ಷಿಸಿದ್ದಾರೆ. ಅಲ್ಲದೆ ತಮ್ಮ ಸ್ನೇಹಿತರೊಂದಿಗೆ ಸಖತ್ ಎಂಜಾಯ್ ಮಾಡಿದ್ದಾರೆ.

ದಸರಾ ಸಂದರ್ಭದಲ್ಲಿ ತಾವು ಮೈಸೂರಿನಲ್ಲಿ ಕಳೆದ ದಿನಗಳ ಕುರಿತು ನಿನಾಸಂ ಸತೀಶ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಪೆಟ್ರೊಮ್ಯಾಕ್ಸ್ ಸಿನಿಮಾದ ಶೂಟಿಂಗ್‍ಗಾಗಿ ನಿನಾಸಂ ಸತೀಶ್ ಮೈಸೂರಿನಲ್ಲಿಯೇ ಬೀಡು ಬಿಟ್ಟಿದ್ದು, ಇದೇ ವೇಳೆ ದಸರಾ ಸಹ ಆಗಮಿಸಿದೆ. ಹೀಗಾಗಿ ದಸರಾ ಸಮಯವನ್ನೂ ಎಂಜಾಯ್ ಮಾಡುತ್ತಿದ್ದಾರೆ. ಹಗಲೆಲ್ಲ ಸಿನಿಮಾ ಶೂಟಿಂಗ್ ನಡೆಸಿದರೆ, ರಾತ್ರಿ ವೇಳೆ ತಮ್ಮ ಸ್ನೇಹಿತರೊಂದಿಗೆ ದಸರಾ ವೀಕ್ಷಿಸಿದ್ದಾರೆ. ಅರಮನೆ ಸೇರಿದಂತೆ ಮೈಸೂರಿನ ವಿವಿಧ ಪ್ರಸಿದ್ಧ ಸ್ಥಳಗಳಿಗೆ ಭೇಟಿ ನೀಡಿ, ಆನಂದಿಸಿದ್ದಾರೆ.

ಈ ಕುರಿತು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಅವರು, ಮೊದಲು ವಿಡಿಯೋ ಪೋಸ್ಟ್ ಮಾಡಿ, ವಿಜಯದಶಮಿಯ ಶುಭಾಶಯಗಳು ಎಂದು ಬರೆದು ಮೈಸೂರಿನ ಲೈಟಿಂಗ್ ಸೊಬಗನ್ನು ತೋರಿಸಿದ್ದಾರೆ. ಅಲ್ಲದೆ ಸ್ನೇಹಿತರೊಂದಿಗೆ ನಡೆದು ಬಹುತೇಕ ಪ್ರಸಿದ್ಧ ಸ್ಥಳಗಳಿಗೆ ಭೇಟಿ ನೀಡಿರುವುದನ್ನು ಸೆರೆ ಹಿಡಿದಿದ್ದಾರೆ. ಇಷ್ಟೆಲ್ಲ ಸುತ್ತಾಡಿದರೂ ಯಾರಿಗೂ ಸುಳಿವು ಸಿಕ್ಕಿಲ್ಲ. ಅಲ್ಲದೆ ಅವರ ಅಭಿಮಾನಿಗಳು ಕಮೆಂಟ್ ಮಾಡಿ ಆಶ್ಚರ್ಯ ವ್ಯಕ್ತಪಡಿಸಿದ್ದು, ನಮ್ಮ ಮೈಸೂರಿಗೆ ಬಂದಿದ್ದಿರಾ? ಗೊತ್ತೇ ಆಗಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ