Breaking News

ಬೆಂಗಳೂರು: ಆನೇಕಲ್ ತಾಲೂಕಿನ ಹುಸ್ಕೂರು ರಸ್ತೆಯ ಪಕ್ಕದಲ್ಲಿ ನೂರಾರು ಲೀಟರ್ ಹಾಲಿನ ಪ್ಯಾಕೆಟ್‍ಗಳು ಪತ್ತೆ

Spread the love

ಬೆಂಗಳೂರು: ಆನೇಕಲ್ ತಾಲೂಕಿನ ಹುಸ್ಕೂರು ರಸ್ತೆಯ ಪಕ್ಕದಲ್ಲಿ ನೂರಾರು ಲೀಟರ್ ಹಾಲಿನ ಪ್ಯಾಕೆಟ್‍ಗಳು ಪತ್ತೆಯಾಗಿದೆ.

ಹಾಲಿನ ಪ್ಯಾಕೆಟ್ ಜೊತೆಗೆ ಮೂಟೆಯಲ್ಲಿ ಪಿಪಿಇ ಕಿಟ್‍ಗಳು ಕೂಡ ಪತ್ತೆಯಾಗಿವೆ. ಆನೇಕಲ್ ತಾಲೂಕಿನ ಹುಸ್ಕೂರು ಆರ್‌ಟಿಒ ಕಚೇರಿ ಮುಂದೆ ಹಾಲಿನ ಪಾಕೆಟ್‍ಗಳು ಪತ್ತೆಯಾಗಿವೆ. ನಂದಿನಿ, ಅಕ್ಷಯಕಲ್ಪ ಕಂಪನಿಯ ಹಾಲಿನ ಪ್ಯಾಕೆಟ್‍ಗಳು ಬಿದ್ದಿವೆ. ರಸ್ತೆಯ ಪಕ್ಕದಲ್ಲಿ ಬಿದ್ದಿರುವುದರಿಂದ ವಾಸನೆ ಬರುತ್ತಿದ್ದು, ಸಾರ್ವಜನಿಕರಿಗೆ ಓಡಾಡಲು ಪರದಾಡುತ್ತಿದ್ದಾರೆ.

ಹಾಲಿನ ಪ್ಯಾಕೆಟ್‍ಗಳ ಮೇಲೆ 9ನೇ ಡೇಟ್ ಇದೆ. ಆದರೆ ಇಷ್ಟೊಂದು ಹಾಲಿನ ಪ್ಯಾಕೆಟ್‍ಗಳು ಎಲ್ಲಿಂದ ಬಂದವು ಎನ್ನುವುದೇ ಪ್ರಶ್ನೆಯಾಗಿದೆ. ಅಲ್ಲದೇ ಎರಡು ದಿನದಿಂದ ರಸ್ತೆಯ ಪಕ್ಕದಲ್ಲೇ ಹಾಲಿನ ಪ್ಯಾಕೆಟ್‍ಗಳು ಬಿದ್ದಿವೆ. ಆದರೂ ಬಿಬಿಎಂಪಿ ಸಿಬ್ಬಂದಿ ಮಾತ್ರ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ.

ಪಿಪಿಇ ಕಿಟ್ ಜೊತೆಗೆ ಹಾಲಿನ ಪ್ಯಾಕೆಟ್‍ಗಳು ಎಲ್ಲಿಂದ ಬಂದವು. ನೂರಾರು ಲೀಟರ್ ಹಾಲನ್ನು ಈ ರೀತಿ ಬಿಡಸಾಡಲು ಕಾರಣ ಏನು ಎಂಬುದು ತಿಳಿದುಬಂದಿದೆ.


Spread the love

About Laxminews 24x7

Check Also

ಮುಡಾ ಹಗರಣ ಕೇಸ್‌ – ಸಿದ್ದರಾಮಯ್ಯ, ಪತ್ನಿ ಪಾರ್ವತಿಗೆ ಹೈಕೋರ್ಟ್‌ ತುರ್ತು ನೋಟಿಸ್‌

Spread the loveಬೆಂಗಳೂರು: ಮುಡಾ ಸೈಟು ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಹಾಗೂ ಪತ್ನಿ ಪಾರ್ವತಿ ಅವರಿಗೆ ಕರ್ನಾಟಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ