Breaking News

ವಿಶ್ವದ ಅತಿ ಎತ್ತರದ ಗಗನಚುಂಬಿ ಕಟ್ಟಡವಾಗಿರುವ ಬುರ್ಜ್​ ಖಲೀಫಾ

Spread the love

ಮರಳುಗಾಡಿನ ಮಧ್ಯೆ ವಿಶ್ವದ ಪ್ರಮುಖ ವಾಣಿಜ್ಯ ಕೇಂದ್ರವಾಗಿ ಪರಿಣಮಿಸಿರುವ ನಗರವೆಂದರೆ ಅದು ದುಬೈ. ವಿಶ್ವದ ಅತಿ ಎತ್ತರದ ಗಗನಚುಂಬಿ ಕಟ್ಟಡವಾಗಿರುವ ಬುರ್ಜ್​ ಖಲೀಫಾವನ್ನು ಹೊಂದಿರುವ ಖ್ಯಾತಿ ಸಹ ದುಬೈ ಪಡೆದಿದೆ.

ಇದೀಗ, ಇದೇ ದುಬೈ ನಗರ ಮತ್ತೊಂದು ದಾಖಲೆ ಸೃಷ್ಟಿಸಲು ಮುಂದಾಗಿದೆ. ಹೌದು, ಇದೇ ಅಕ್ಟೋಬರ್​ 22ರಂದು ದುಬೈ ಪ್ರಪಂಚದ ಅತಿದೊಡ್ಡ ಕಾರಂಜಿಯನ್ನು ಲೋಕಾರ್ಪಣೆ ಮಾಡಲಿದೆ. ಈ ಮೂಲಕ ಪ್ರಪಂಚದ ಅತಿದೊಡ್ಡ ಕಾರಂಜಿ ಎಂಬ ಗಿನ್ನಿಸ್​ ದಾಖಲೆ ರಚಿಸಲು ಮುಂದಾಗಿದೆ.

ಸರಿಸುಮಾರು 14 ಸಾವಿರ ಚದರಡಿ ವಿಸ್ತೀರ್ಣ ಹೊಂದಿರುವ ಈ ಕಾರಂಜಿಗೆ ಪಾಮ್​​ ಫೌಂಟೆನ್​ ಎಂದು ಹೆಸರಿಡಲಾಗಿದೆ. ಸಾಗರದ ಉಪ್ಪು ನೀರನ್ನು ಈ ಕಾರಂಜಿಯಲ್ಲಿ ಬಳಸಲಾಗುತ್ತಿದ್ದು ಜೊತೆಗೆ ಕಾರಂಜಿಯ ನೀರನ್ನು 105 ಮೀಟರ್ ಎತ್ತರದ ವರೆಗೆ ಚಿಮ್ಮಿಸುವ ಸಾಮರ್ಥ್ಯವಿರುವ ಸೂಪರ್​ ಶೂಟರ್​ ಚಿಲುಮೆ ಸಹ ಹೊಂದಿದೆ. ಅಷ್ಟೇ ಅಲ್ಲ, ಪಾಮ್​ ಫೌಂಟೆನ್​ ದೀಪಾಲಂಕಾರಕ್ಕೆ 3 ಸಾವಿರ LEDಗಳನ್ನು ಸಹ ಬಳಸಲಾಗಿದೆ.


Spread the love

About Laxminews 24x7

Check Also

ಕುಟುಂಬ ಸಮೇತರಾಗಿ ಬೆಳ್ಳಂಬೆಳಗ್ಗೆ ತಿರುಪತಿ ವೆಂಕಟೇಶ್ವರ ಸ್ವಾಮಿ ದರ್ಶನ ಪಡೆದ ಡಿಕೆಶಿ

Spread the love ಬೆಂಗಳೂರು: ಮೊದಲಿನಿಂದಲೂ ದೇವರಲ್ಲಿ ಅಪಾರ ಭಕ್ತಿ, ನಂಬಿಕೆ ಹೊಂದಿರುವ ಸಿಎಂ ಡಿ.ಕೆ ಶಿವಕುಮಾರ್‌  ಅವರು ರಾಜ್ಯದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ