Breaking News

ಸತೀಶ ಜಾರಕಿಹೊಳಿ ಕೇಂದ್ರ ಸಚಿವ ಪ್ರಹ್ಲಾದ  ಜೋಶಿ ಹೇಳಿಕೆಗೆ ತಿರುಗೇಟುಬಿಜೆಪಿಯಲ್ಲಿ ಯಾರೂ ದುಡ್ಡು ಮಾಡಿಲ್ಲವಾ? ಡಿಕೆಶಿ ಒಬ್ಬರೇ ಟಾರ್ಗೆಟ್ ಯಾಕೆ?

Spread the love

ಬೆಳಗಾವಿ: ಬಿಜೆಪಿಯಲ್ಲಿ ಯಾರೂ  ದುಡ್ಡು ಮಾಡಿಲ್ಲವಾ?  ಕಾಂಗ್ರೆಸ್ ನವರೇ ಟಾರ್ಗೆಟ್ ಯಾಕೆ ?  ಎಂದು ಖಾರವಾಗಿ ಪ್ರಶ್ನಿಸಿರುವ ಕೆಪಿಸಿಸಿ ಕರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಕೇಂದ್ರ ಸಚಿವ ಪ್ರಹ್ಲಾದ  ಜೋಶಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು,  ರಾಜಕೀಯದಲ್ಲಿ ಯಾರೂ ಹರಿಶ್ಚಂದ್ರ ಇರುವುದಿಲ್ಲ, ಆದ್ರೆ  ಎಲ್ಲದಕ್ಕೂ ಇತಿ ಮೀತಿ ಇರಬೇಕು. ಪ್ರಹ್ಲಾದ ಜೋಶಿ ತಮ್ಮ ಸರ್ಕಾರದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಮುಚ್ಚಿಟ್ಟಿದ್ದಾರೆ. ನಮ್ಮ ಸರ್ಕಾರವನ್ನು 10 ಪರ್ಸೆಂಟೆಜ್ ಸರ್ಕಾರ ಎಂದು ಪ್ರಧಾನಿ ಮೋದಿ ಅವರು ಟೀಕಿಸಿದ್ದರು. ಈಗ ಅವರದೇ ಸರ್ಕಾರ 30 ಪರ್ಸೆಂಟೆಜ್ ಸರ್ಕಾರವಾಗಿದೆ ಎಂದು ವ್ಯಂಗ್ಯವಾಡಿದರು.

ಎಲ್ಲರಿಗೂ ಒಂದೇ ನ್ಯಾಯ ಇರಬೇಕು. ತನಿಖೆ ಆಗುವುದಾದರೇ ಎಲ್ಲರ ಮೇಲೆ ಆಗಲಿ. ಕಾಂಗ್ರೆಸ್ ನವರೇ ಟಾರ್ಗೆಟ್ ಏಕೆ? ಡಿಕೆಶಿ ಒಬ್ಬರನೇ ಟಾರ್ಗೆಟ್ ಮಾಡುವುದು ಯಾಕೆ ?ಬಿಜೆಪಿಯಲ್ಲಿ ಯಾರೂ ದುಡ್ಡು ಮಾಡಿಲ್ಲವಾ? ಎಂದ ಅವರು ಇದೊಂದು ರಾಜಕೀಯ ಪ್ರೆರಿತ ದಾಳಿಯಾಗಿದೆ ಎಂದು ಆರೋಪಿಸಿದರು. 


Spread the love

About Laxminews 24x7

Check Also

ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನದ ಪೂರ್ವಭಾವಿ ಸಭೆ

Spread the loveಬೆಳಗಾವಿ: ನವದೆಹಲಿಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನಕ್ಕಾಗಿ ಬೆಳಗಾವಿ ಜಿಲ್ಲೆಯನ್ನು ಪ್ರಾಯೋಗಿಕವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ