Breaking News

ನಟಿ ಕಾಜಲ್ ಅಗರ್ವಾಲ್ ಇದೇ ಅಕ್ಟೋಬರ್ 30ರಂದು ಸಾಂಸಾರಿಕ ಜೀವನಕ್ಕೆ ಕಾಲಿಡಲಿದ್ದಾರೆ.

Spread the love

ಹೈದರಾಬಾದ್: ನಟಿ ಕಾಜಲ್ ಅಗರ್ವಾಲ್ ಇದೇ ಅಕ್ಟೋಬರ್ 30ರಂದು ಸಾಂಸಾರಿಕ ಜೀವನಕ್ಕೆ ಕಾಲಿಡಲಿದ್ದಾರೆ. ಇನ್‍ಸ್ಟಾಗ್ರಾಂನಲ್ಲಿ ಮದ್ವೆಯ ಮಾಹಿತಿಯನ್ನ ಕಾಜಲ್ ಹಂಚಿಕೊಂಡಿದ್ದಾರೆ.

ನಾನು ಇದೇ ಅಕ್ಟೋಬರ್ 30ರಂದು ಗೌತಮ್ ಕಿಟ್ಚು ಅವರನ್ನು ಮುಂಬೈನಲ್ಲಿ ಮದುವೆ ಆಗುತ್ತಿದ್ದೇನೆ. ಮದುವೆಗೆ ಕೇವಲ ಕುಟುಂಬಸ್ಥರು ಮತ್ತು ಆಪ್ತರನ್ನ ಮಾತ್ರ ಆಹ್ವಾನಿಸಲಾಗಿದೆ. ಹೊಸ ಜೀವನಕ್ಕೆ ಕಾಲಿಡಲು ನಾನು ಥ್ರಿಲ್ ಆಗಿದ್ದೇನೆ. ಇಷ್ಟು ದಿನ ನೀವು ತೋರಿಸಿದ ಅನಿಯಮಿತ ಪ್ರೀತಿಗೆ ಅಭಾರಿಯಾಗಿದ್ದು, ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲಿರಲಿ. ಹೊಸ ಬದುಕಿಗೆ ಎಂಟ್ರಿ ಕೊಡಲು ಉತ್ಸುಕಳಾಗಿದ್ದೇನೆ. ಮುಂದೆಯೂ ನಾನು ಸಿನಿಮಾಗಳಲ್ಲಿ ನಟಿಸುವ ಮೂಲಕ ನಿಮ್ಮನನ್ನ ರಂಜಿಸುತ್ತೇನೆ. ನಿಮ್ಮ ಪ್ರೀತಿ, ಬೆಂಬಲಕ್ಕೆ ಧನ್ಯವಾದಗಳು ಎಂದು ಕಾಜಲ್ ಬರೆದುಕೊಂಡಿದ್ದಾರೆ.

ಯಾರು ಈ ಗೌತಮ್?
ಕಾಜಲ್ ಅಗರ್ವಾಲ್ ಮದುವೆ ಆಗುತ್ತಿರುವ ಗೌತಮ್ ಕಿಟ್ಜು, ಡಿಸರ್ನ್ ಲಿವಿಂಗ್ ಸಂಸ್ಥೆಯ ಸ್ಥಾಪಕರು. ಇನ್ನು ಗೌತಮ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ತಾವು ಓರ್ವ ಇಂಟಿರೀಯರ್ ಡಿಸೈನರ್, ಡಿಸರ್ನ್ ಲಿವಿಂಗ್ ಸ್ಥಾಪಕ ಎಂದು ಹೇಳಿಕೊಂಡಿದ್ದಾರೆ.

 

ಸೋಮವಾರ ಕಾಜಲ್ ಅಗರ್ವಾಲ್ ಹಾರ್ಟ್ ಸಿಂಬಾಲ್ ಹಾಕಿ ಮದುವೆ ಸುಳಿವು ನೀಡಿದ್ದರು. ಇಂದು ಅಧಿಕೃತವಾಗಿ ಮದುವೆಯ ವಿಚಾರವನ್ನ ಕಾಜಲ್ ಅಭಿಮಾನಿಗಳ ಜೊತೆ ಶೇರ್ ಮಾಡಿಕೊಂಡಿದ್ದು, ಫ್ಯಾನ್ಸ್ ಸೇರಿದಂತೆ ಚಿತ್ರರಂಗದ ಗಣ್ಯರು ಶುಭಾಶಯ ತಿಳಿಸುತ್ತಿದ್ದಾರೆ.


Spread the love

About Laxminews 24x7

Check Also

ಔತಣ ಕೂಟದಲ್ಲಿ ಪಾಲ್ಗೊಂಡು, ಡಿಕೆಶಿಗೆ ಅಭಿನಂದಿಸಿದ ಹೆಬ್ಬಾಳಕರ್, ಹಟ್ಟಿಹೊಳಿ

Spread the loveಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಹೊಟೇಲ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ