Breaking News

ಸಿಸಿಬಿ ತನಿಖೆ ಬಳಿಕ ಅನುಶ್ರೀಗೆ ಕಾಡ್ತಿದೆ ಡೋಪಿಂಗ್ ಟೆಸ್ಟ್ ಭಯ

Spread the love

ಮಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣ ದಿನದಿನೇ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಈಗಾಗಲೇ ನಟಿ ಕಂ ಆ್ಯಂಕರ್ ಅನುಶ್ರೀ ಅವರನ್ನು ಸಿಸಿಬಿ ವಿಚಾರಣೆ ನಡೆಸಿದೆ. ಈ ಬೆನ್ನಲ್ಲೇ ನಿರೂಪಕಿಗೆ ಮತ್ತೊಂದು ಭಯ ಶುರುವಾಗಿದೆ.ಹೌದು. ಸಿಸಿಬಿ ಬಳಿಕ ಇದೀಗ ಅನುಶ್ರೀಗೆ ಡೋಪಿಂಗ್ ಟೆಸ್ಟ್ ಭಯ ಕಾಡುತ್ತಿದೆ. ಸಿಸಿಬಿ ತನಿಖೆ ಮುಗಿದ ಬಳಿಕ ಅನುಶ್ರೀ ಖುಷಿಯಾಗಿದ್ದರು. ಆದರೆ ಕಮಿಷನರ್ ಹೇಳಿಕೆ ಬಳಿಕ ನಟಿ ಚಿಂತಕ್ರಾಂತರಾಗಿದ್ದಾರೆ

ಡ್ರಗ್ಸ್ ಟೆಸ್ಟ್ ಮಾಡಿಸಲು ಸಿದ್ಧತೆ ನಡೆಸಲಾಗಿದೆ ಎಂದು ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ಹೇಳಿದ್ದಾರೆ. ಇದರಿಂದಾಗಿ ಅನುಶ್ರೀಗೆ ಚಿಂತೆ ಕಾಡಲು ಆರಂಭವಾಗಿದೆ. ಈ ಮಧ್ಯೆ ಡೋಪಿಂಗ್ ಟೆಸ್ಟ್ ಮಾಡಿಸದಂತೆ ಪ್ರಭಾವಿಯೊಬ್ಬರು ಒತ್ತಡ ಹೇರುತ್ತಿದ್ದಾರೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ. ಇತ್ತ ಡ್ರಗ್ಸ್ ಪ್ರಕರಣ ಸಂಬಂಧ ಓರ್ವ ಪ್ರಮುಖ ಡ್ರಗ್ ಪೆಡ್ಲರ್‍ನನ್ನು ಸಿಸಿಬಿ ಬಂಧಿಸಿದೆ. ಮಹಮ್ಮದ್ ಶಾಕೀರ್ ಬಂಧಿತ ಆರೋಪಿಯಾಗಿದ್ದು, ಡ್ಯಾನ್ಸರ್ ಕಿಶೋರ್, ಕೋರಿಯೋಗ್ರಫರ್ ತರುಣ್ ರಾಜ್ ಮಾಹಿತಿ ಮೇರೆಗೆ ಈತನನ್ನು ಬಂಧಿಸಲಾಗಿದೆ. ಈ ಎಲ್ಲರಿಗೂ ಶಾಕೀರ್ ಡ್ರಗ್ಸ್ ಲಿಂಕ್ ಕೊಡಿಸಿದ್ದ ಎಂಬ ಮಾಹಿತಿ ದೊರೆತಿದ್ದು, ಶಾಕೀರ್ ವಿಚಾರಣೆ ವೇಳೆ ಹಲವು ಹೆಸರುಗಳ ಪ್ರಸ್ತಾಪವಾಗುವ ಸಾಧ್ಯತೆಗಳಿವೆ.


Spread the love

About Laxminews 24x7

Check Also

ಮೂರು ಮಕ್ಕಳ ತಾಯಿಯನ್ನು ಕತ್ತು ಸೀಳಿ ಕೊಂದ ಪ್ರಿಯಕರ

Spread the loveದಾವಣಗೆರೆ: ವ್ಯಕ್ತಿಯೊಬ್ಬ ಪ್ರಿಯತಮೆಯ ಕತ್ತು ಸೀಳಿ ಹತ್ಯೆಗೈದ  ಘಟನೆ ದಾವಣಗೆರೆಯ  ಶೇಖರಪ್ಪ ನಗರದಲ್ಲಿ ನಡೆದಿದೆ. ನಾಗರತ್ನ (45) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ