Breaking News

‘ಕ್ಷೇತ್ರದಲ್ಲಿ ಹಿಂದೆ ಅನುದಾನದ ಸದುಪಯೋಗವೇ ಆಗಿಲ್ಲ’

Spread the love

ಬೆಳಗಾವಿ: ‘ಕ್ಷೇತ್ರದಲ್ಲಿ ಈ ಹಿಂದೆ ಅನುದಾನ ಸದುಪಯೋಗವೇ ಆಗಿಲ್ಲ’ ಎಂದು ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ದೂರಿದರು.

ಕ್ಷೇತ್ರದ ಹೌಸಿಂಗ್ ಬೋರ್ಡ್‌ ಕಾಲೊನಿಯಲ್ಲಿ ₹ 1.40 ಕೋಟಿ ವೆಚ್ಚದಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಕ್ಷೇತ್ರವನ್ನು ಸುತ್ತು ಹಾಕಿ ಗಮನಿಸಿದರೆ ಈವರೆಗೂ ಏಕೆ ಜನಪ್ರತಿನಿಧಿಗಳು ಜನರ ಸಮಸ್ಯೆಗೆ ಸ್ಪಂದಿಸಲಿಲ್ಲ ಎನ್ನುವುದೇ ಅರ್ಥವಾಗುತ್ತಿಲ್ಲ. ಸರ್ಕಾರದ ಅನುದಾನವಿರುವಾಗ ಅದನ್ನು ಸದುಪಯೋಗಪಡಿಸಿಕೊಳ್ಳುವ ಪ್ರಯತ್ನವೇ ಆಗಲಿಲ್ಲ. ನಾನು ಶಾಸಕಿಯಾಗಿ ಆಯ್ಕೆಯಾದ ನಂತರ ಯಾವ ಯೋಜನೆಗಳಲ್ಲಿ ಅನುದಾನ ತರಲು ಸಾಧ್ಯವಿದೆಯೇ ಅದ್ಯಾವುದನ್ನೂ ಬಿಡುತ್ತಿಲ್ಲ. ಮೊದಲ ಬಾರಿಗೆ ಶಾಸಕಿಯಾದರೂ ಹಿರಿಯ ಶಾಸಕರು ಕೂಡ ತರದಷ್ಟು ಅನುದಾನವನ್ನು ತಂದಿದ್ದೇನೆ’ ಎಂದರು.

ನಿವಾಸಿಗಳು, ಅವಿನಾಶ್ ಬೆಲ್ಲದ, ಭೂಪಾಲಿ, ಗುತ್ತಿಗೆದಾರರು ಹಾಗೂ ಕಾರ್ಯಕರ್ತರು ಇದ್ದರು.


Spread the love

About Laxminews 24x7

Check Also

ಮನ್ಮುಲ್ ನಂದಿನಿ ಹಾಲಿನ ಪುಡಿ ಕಲಬೆರಕೆ ಪ್ರಕರಣ – ಮತ್ತೆ ಮೂವರ ಬಂಧನ, 11ಕ್ಕೇರಿದ ಆರೋಪಿಗಳ ಸಂಖ್ಯೆ

Spread the loveಮಂಡ್ಯ: ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘ  ನಂದಿನಿ ಹಾಲಿನ ಪುಡಿ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ