Breaking News

ಸಂಜನಾ ಅವರೊಂದಿಗೆ ಕೊಲಂಬೋಗೆ ಹೋಗಿದ್ದು ಸಾಬೀತಾದರೆ ನನ್ನ ಆಸ್ತಿಯೆಲ್ಲ ಸರ್ಕಾರಕ್ಕೆ ಬರೆದುಕೊಡುತ್ತೇನೆ

Spread the love

ಬೆಂಗಳೂರು: ಡ್ರಗ್ಸ್ ಮಾಫಿಯಾದಲ್ಲಿ ಸಿಸಿಬಿ ಪೊಲೀಸರು ಬಂಧಿಸಿರುವ ನಟಿ ಸಂಜನಾ ಅವರೊಂದಿಗೆ ನಾನು ಕೊಲಂಬೋಗೆ ಹೋಗಿದ್ದು ಸಾಬೀತಾದರೆ ನನ್ನ ಆಸ್ತಿಯೆಲ್ಲ ಸರ್ಕಾರಕ್ಕೆ ಬರೆದುಕೊಡುತ್ತೇನೆ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಸವಾಲು ಎಸೆದಿದ್ದಾರೆ. ನಟಿ ಸಂಜನಾ ಅವರ ವಿಚಾರದಲ್ಲಿ ತಮ್ಮ ವಿರುದ್ಧ ಕೇಳಿ ಬಂದ ಆರೋಪಗಳ ಕುರಿತು ಕೊನೆಗೂ ಮೌನ ಮುರಿದ ಜಮೀರ್ ಅವರು, ಸಂಜನಾ ಹಾಗೂ ನಾನು ಕೊಲಂಬೋಗೆ ಹೋಗಿರುವ ಬಗ್ಗೆ ಖುದ್ದು ಸಿಎಂ ತನಿಖೆ ಮಾಡಲಿ ಎಂದು ಮನವಿ ಮಾಡುತ್ತೇನೆ. ನಾನು ತನಿಖೆ ಎದುರಿಸಲು ತಯಾರಿದ್ದೇನೆ. ಈಗ ಸಂಜನಾ ಪೊಲೀಸ್ ಕಸ್ಟಡಿಯಲ್ಲೇ ಇದು, ಅಲ್ಲಿಯೇ ತನಿಖೆ ಮಾಡಲು ಎಂದರು. 

ನಾನು ಆಕೆ ಒಂದೇ ಹೋಟೆಲ್ ನಲ್ಲಿ ಉಳಿದುಕೊಂಡಿದ್ದರೆ ಅಲ್ಲಿ ಪಾಸ್‍ಪೋರ್ಟ್ ಕೊಡಬೇಕಾಗುತ್ತೆ. ಅದನ್ನು ಪರಿಶೀಲಿಸಲಿ. ನಾನು ಸಂಜನಾ ಕೊಲಂಬೋಗೆ ಹೋದರೆ ಒಂದೇ ವಿಮಾನದಲ್ಲಿ ತಾನೇ ಹೋಗಬೇಕು. ಆ ಕುರಿತಾದ ಫ್ಲೈಟ್ ಮಾಹಿತಿಗಳನ್ನು ಪರಿಶೀಲನೆ ನಡೆಸಲಿ. ವಿದೇಶಗಳ ಹೋಟೆಲ್‍ಗಳಲ್ಲಿ ಹೋಟೆಲ್ ಸಿಸಿ ಕ್ಯಾಮರಾ ದೃಶ್ಯಗಳನ್ನು 10 ವರ್ಷ ಇಡಬೇಕು. ಅದನ್ನೂ ಚೆಕ್ ಮಾಡಲಿ ಎಂದು ತಿಳಿಸಿದರು.

ಅಲ್ಲಿರುವ ಸಿಸಿಟಿವಿ ಪರಿಶೀಲನೆ ಮಾಡಿದರೆ ನಾನು ಸಂಜನಾ ಅವರೊಂದಿಗೆ ಉಳಿದುಕೊಂಡಿದ್ದರೇ ಖಂಡಿತ ಗೊತ್ತಾಗುತ್ತೆ. ಈ ನಮ್ಮ ಸರ್ಕಾರ ಇಲ್ಲ. ಬಿಜೆಪಿ ಸರ್ಕಾರನೇ ಇರುವುದರಿಂದ ಅವರೇ ಎಲ್ಲವನ್ನೂ ಪರಿಶೀಲನೆ ಮಾಡಲಿ. ಒಂದೊಮ್ಮೆ ನನ್ನ ಮೇಲಿನ ಆರೋಪ ಸಾಬೀತು ಆದರೆ ನನ್ನ ಆಸ್ತಿಯನ್ನು ಸರ್ಕಾರಕ್ಕೆ ಬರೆದುಕೊಡುತ್ತೇನೆ. ಆದರೆ ಆರೋಪ ಸುಳ್ಳಾದರೇ ಪ್ರಶಾಂತ್ ಸಂಬರಗಿ ಏನು ಮಾಡುತ್ತೀರಾ ನೀವೇ ಹೇಳಿ ಎಂದು ಸರ್ಕಾರಕ್ಕೆ ಸವಾಲು ಹೆಸರು.


Spread the love

About Laxminews 24x7

Check Also

GBA ಚುನಾವಣೆ: ಐದು ನಗರ ಪಾಲಿಕೆಗಳ ವಾರ್ಡ್ ವಾರು ಪರಿಷ್ಕೃತ ಕರಡು ಮತದಾರರ ಪಟ್ಟಿ ಬಿಡುಗಡೆ, ಆಕ್ಷೇಪಣೆ ಸಲ್ಲಿಕೆಗೆ ಅವಕಾಶ

Spread the loveಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ನಗರ ಪಾಲಿಕೆಗಳ ವಾರ್ಡ್ ವಾರು ಕರಡು ಮತದಾರರ ಪಟ್ಟಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ