Breaking News

ಒಂದೇ ಕೊಠಡಿಯಲ್ಲಿ ನಟಿ ರಾಗಿಣಿ ಮತ್ತು ಸಂಜನಾ………………

Spread the love

ಬೆಂಗಳೂರು: ಮಹಿಳಾ ಸಾಂತ್ವನ ಕೇಂದ್ರದ ಒಂದೇ ಕೊಠಡಿಯಲ್ಲಿ ನಟಿ ರಾಗಿಣಿ ಮತ್ತು ಸಂಜನಾ ಮಂಗಳವಾರ ರಾತ್ರಿಯನ್ನು ಕಳೆದಿದ್ದಾರೆ.

5 ಹಾಸಿಗೆಗಳ ಪೈಕಿ ಮೊದಲ ಮತ್ತು ಕೊನೆಯ ಹಾಸಿಗೆಯನ್ನು ಇಬ್ಬರಿಗೆ ನೀಡಿದ್ದರೆ ಮಧ್ಯದಲ್ಲಿರುವ ಮೂರು ಬೆಡ್‌ಗಳನ್ನು ಭದ್ರತೆಗೆ ನಿಯೋಜನೆಗೊಂಡಿದ್ದ ಮಹಿಳಾ ಪೊಲೀಸರಿಗೆ ನೀಡಲಾಗಿತ್ತು.

ರಾಗಿಣಿ ನೋಡಿ ನಟಿ ಸಂಜನಾ ಈಗ ಸಮಾಧಾನ ಆಯ್ತಾ ಕೇಳಿದ್ದಾರೆ. ರಾತ್ರಿ ಊಟ ಬೇಡ ಎಂದು ಹೇಳಿದ್ದ ಸಂಜನಾ ಕಣ್ಣೀರು ಹಾಕುತ್ತಾ ಕುಳಿತಿದ್ದರು. ಕೆಪಿಎಲ್‌ ವಿಚಾರದಲ್ಲಿ ಇಬ್ಬರು ನಟಿಯ ನಡುವೆ ಭಿನ್ನಾಭಿಪ್ರಾಯ ಬಂದ ಹಿನ್ನೆಲೆಯಲ್ಲಿ ಮೊದಲೇ ಮಾತುಕತೆ ಕಡಿಮೆ ಇತ್ತು. ಹೀಗಾಗಿ ಮಂಗಳವಾರ ರಾತ್ರಿ ಇಬ್ಬರ ಮಧ್ಯೆ ಯಾವುದೇ ಜಾಸ್ತಿ ಮಾತುಕತೆ ನಡೆದಿಲ್ಲ ಎಂದು ಮೂಲಗಳು ತಿಳಿಸಿವೆ.

ಇಂದು ಬೆಳಗ್ಗೆ ಬೆಳಗ್ಗೆ 10 ಗಂಟೆ ಬಳಿಕ ಸಂಜನಾ ಗಲ್ರಾನಿಯನ್ನ ಸಿಸಿಬಿ ಪೊಲೀಸರು ಮಡಿವಾಳದ ಎಫ್ ಎಸ್ ಎಲ್ ಕಚೇರಿಗೆ ಕರೆದುಕೊಂಡು ಹೋಗುವ ಸಾಧ್ಯತೆಯಿದೆ. ಇಲ್ಲಿ ಇನ್ಸ್‌ಪೆಕ್ಟರ್‌ ಅಂಜುಮಾಲ ಅವರು ಸಂಜನಾರನ್ನು ವಿಚಾರಣೆ ನಡೆಸಲಿದ್ದಾರೆ.

ಮಹಿಳಾ ಕೇಂದ್ರದಲ್ಲೇ ನಟಿ ರಾಗಿಣಿಯನ್ನು ಇನ್ಸ್‌ಪೆಕ್ಟರ್‌ ಕಾತ್ಯಾಯಿಣಿ ವಿಚಾರಣೆ ನಡೆಸುವ ಸಾಧ್ಯತೆಯಿದೆ. ರಾಹುಲ್ ಕೊಟ್ಟ ಹೇಳಿಕೆಗಳು ಮತ್ತು ಈಗಾಗ್ಲೇ ಸಿಕ್ಕಿದೆ ಎನ್ನಲಾದ ಟೆಕ್ನಿಕಲ್ ಸಾಕ್ಷ್ಯದ ಆಧಾರದ ಮೇಲೆ ವಿಚಾರಣೆ ನಡೆಯಲಿದೆ.


Spread the love

About Laxminews 24x7

Check Also

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Spread the loveಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ