Breaking News

ಪತಿ ಕೊಂದು ಎಮ್ಮೆ ಸತ್ತಿದೆ ಅಂತ ಹೂತು ಹಾಕಿದ್ದ ಕೇಸ್; ನಾಲ್ವರು ಆರೋಪಿಗಳ ಬಂಧನ

Spread the love

ಚಿಕ್ಕೋಡಿ: ಪತಿಯನ್ನು ಕೊಂದು ಎಮ್ಮೆ ಸತ್ತಿದೆ ಅಂತಾ ಹೊಲದಲ್ಲಿ ಹೂತು ಹಾಕಿದ್ದ ಆರೋಪದ ಮೇಲೆ ಪತ್ನಿ ಸೇರಿದಂತೆ ಆಕೆಯ ಸಂಬಂಧಿಕರನ್ನು ನಿಪ್ಪಾಣಿ ಪೊಲೀಸರು ಬಂಧಿಸಿದ್ದಾರೆ. ಮೃತ ಸಚಿನ್ ಪತ್ನಿ ಅನಿತಾ, ಕೃಷ್ಣಾ ಅಲಿಯಾಸ್ ಪಿಂಟು ರಾಜಾರಾಮ್ ಘಾಟಗೆ (26), ವನಿತಾ ಚವ್ಹಾಣ್​(29), ಗಣೇಶ ರೇಡೇಕರ(21),ಬಂಧಿತ ಆರೋಪಿಗಳು.

ಅನಿತಾ ತಮ್ಮ ಪತಿಯನ್ನು ಹತ್ಯೆ ಮಾಡಿ ಸಹೋದರ, ಸಹೋದರಿಯ ಸಹಾಯದಿಂದ ಹೊಲದಲ್ಲಿ ಜೆಸಿಬಿಯಲ್ಲಿ ಗುಂಡಿತೋಡಿಸಿದ್ದ ಜಾಗದಲ್ಲಿ ಹೂತು ಪರಾರಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಘಟನೆ ಕುರಿತು ಸಂಶಯ ವ್ಯಕ್ತಪಡಿಸದ್ದ ಜೆಸಿಬಿ ಡ್ರೈವರ್​ ಹಾಗೂ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಮಾಹಿತಿ ಮೇರೆಗೆ ಪ್ರಕರಣ ಕೈಗೆತ್ತಿಕೊಂಡ, ಡಿವೈಎಸ್ಪಿ ಮನೋಜ್ ಕುಮಾರ ನೇತೃತ್ವದ ತಂಡ ಒಂದೇ ದಿನದಲ್ಲಿ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣದ ಬಗ್ಗೆ ಮಾತನಾಡಿದ ಡಿವೈಎಸ್ಪಿ ಮನೋಜ್ ಕುಮಾರ್ ಕೊಲೆ ಮಾಡಿ ಪರಾರಿಯಾಗಿದ್ದ ನಾಲ್ಕು ಜನ ಆರೋಪಿಗಳನ್ನು ಕಾರ್ಯಚರಣೆ ನಡೆಸಿ ಒಂದೇ ದಿನದಲ್ಲಿ ಬಂಧಿಸಿದ್ದೇವೆ. ಇಂದು ಸಂಜೆಯೊಳಗೆ ನಿಪ್ಪಾಣಿಗೆ ಕರೆತಂದು ತನಿಖೆ ಮುಂದುವರಿಸಲಿದ್ದೇವೆ ಎಂದು ತಿಳಿಸಿದ್ದಾರೆ.


Spread the love

About Laxminews 24x7

Check Also

ಕೆಪಿಎ ಆಸರೆ ಯೋಜನೆಗೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಚಾಲನೆ

Spread the loveಗೋಕಾಕ: ಅವಿಸ್ಮರಣೀಯ ನೆನಪು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದು ಸದಾ ನೆನಪಿನಲ್ಲಿರುವಂತೆ ಮಾಡುವ ಛಾಯಾಗ್ರಾಹಕರಿಗೆ ಕೆಪಿಎ ಆಸರೆ ಯೋಜನೆ ಉಪಯುಕ್ತವಾಗಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ