Breaking News

ನಮ್ಮ ಹೀರೋ ಮಾಡಿದ, ಹೀರೊಯಿನ್ ಮಾಡಿದ್ರು ಅಂತ ಮುಂದೆ ಫಾಲೋ ಮಾಡಿದ್ರೆ ಗತಿಯೇನು: ನಟಿ, ರಾಜಕಾರಣಿ ತಾರಾ

Spread the love

ಬೆಂಗಳೂರು: ನಮ್ಮನ್ನ ಅನುಸರಿಸುವವರು ಇದ್ದಾರೆ. ಹೀಗಾಗಿ ನಮ್ಮ ಹೀರೋ ಮಾಡಿದ, ಹೀರೊಯಿನ್ ಮಾಡಿದ್ರು ಅಂತ ಮುಂದೆ ಫಾಲೋ ಮಾಡಿದ್ರೆ ಗತಿಯೇನು ಎಂದು ನಟಿ, ರಾಜಕಾರಣಿ ತಾರಾ ಪ್ರಶ್ನಿಸಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸ್ಯಾಂಡಲ್ ವುಡ್ ಡ್ರಗ್ಸ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಕನ್ನಡ ಚಿತ್ರರಂಗಕ್ಕೆ ಯಾವುದೇ ದುರ್ನಾತ ಬಡಿಯದಿರಲಿ ಅಂತ ದೇವರಿಗೆ ನಮಸ್ಕಾರ ಮಾಡಿದೆ. ನಾನು ಸಿಎಂಗೆ ಇಂದು ಸಲಹೆ ನೀಡುವೆ. ನಾವೆಲ್ಲರೂ ಎಲ್ಲ ಬೆಳವಣಿಗೆ ವೀಕ್ಷಿಸುತ್ತಿದ್ದೀವಿ ಎಂದರು.

ಡ್ರಗ್ಸ್ ವಿಚಾರ ನಮ್ಮ ರಂಗಕ್ಕೆ ಅಂಟಿಕೊಂಡಿದೆ. ನನ್ನ ಗಮನಕ್ಕೆ ಈ ರೀತಿಯ ಡ್ರಗ್ಸ್ ವಿಚಾರ ಗೊತ್ತಿಲ್ಲ. ಓದಿ, ಟಿವಿ ನೋಡಿ ಮಾತ್ರ ಡ್ರಗ್ಸ್ ವಿಚಾರ ತಿಳಿದಿದೆ. ಕುಟುಂಬದ ಒಬ್ಬ ಸದಸ್ಯ ತಪ್ಪು ಮಾಡಿದರೆ ಎಲ್ಲರಿಗೂ ತಪ್ಪಾಗುತ್ತದೆ. ಈ ರೀತಿ ತಪ್ಪು ಮಾಡಿದರೆ ಕೆಟ್ಟ ಹೆಸರು ಬರಲಿದೆ. ಲಾಕ್ ಡೌನ್ ವೇಳೆ ರಂಗ ನೆಲಕಚ್ಚಿದೆ. ಇದು ಆತಂಕಕಾರಿ ವಿಚಾರವಾಗಿದೆ. ಇದು ಒಳ್ಳೆಯ ವಿಚಾರ ಅಲ್ಲ. ಎಂದು ತಿಳಿಸಿದರು.


Spread the love

About Laxminews 24x7

Check Also

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Spread the loveಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ