Breaking News

ರ‍್ಯಾಪಿಡ್ ಆಂಟಿಜನ್ ಟೆಸ್ಟ್ ವರದಿಪಾಸಿಟಿವ್ ಆರ್ಟಿಪಿಸಿಆರ್ ನಲ್ಲಿ ನೆಗೆಟಿವ್ : ಶಾಸಕ ಎಸ್.ಎ ರವೀಂದ್ರನಾಥ್ ಅವರ ರ‍್ಯಾಪಿಡ್ ಆಂಟಿಜನ್ ಟೆಸ್ಟ್

Spread the love

ದಾವಣಗೆರೆ: ಬಿಜೆಪಿ ಶಾಸಕರ ಕೊರೊನಾ ವೈರಸ್ ಟೆಸ್ಟ್ ವರದಿಯಲ್ಲಿ ಗೊಂದಲ ಉಂಟಾದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ದಾವಣಗೆರೆಯ ಉತ್ತರ ಕ್ಷೇತ್ರದ ಶಾಸಕ ಎಸ್.ಎ ರವೀಂದ್ರನಾಥ್ ಅವರ ರ‍್ಯಾಪಿಡ್ ಆಂಟಿಜನ್ ಟೆಸ್ಟ್ ನಲ್ಲಿ ಪಾಸಿಟಿವ್ ಎಂದು ಬಂದಿತ್ತು. ಆದರೆ ಮರುದಿನವೇ ಆರ್ಟಿಪಿಸಿಆರ್ ಟೆಸ್ಟ್ ನಲ್ಲಿ ನೆಗೆಟಿವ್ ಎಂದು ವರದಿ ಬಂದಿದೆ. ಈ ಮೂಲಕ ಶಾಸಕರ ಕೋವಿಡ್ ಟೆಸ್ಟ್ ವರದಿಯಲ್ಲಿಯೇ ಗೊಂದಲ ಮೂಡಿದೆ.

ರಾಜ್ಯ ಬುಲೆಟಿನ್ ನಲ್ಲಿ ಕೂಡ ಶಾಸಕರ ಪೇಷಂಟ್ ನಂಬರ್ ನಮೂದಾಗಿತ್ತು. ಈಗ ಆರ್ಟಿಪಿಸಿಆರ್ ನಲ್ಲಿ ನೆಗೆಟಿವ್ ಬಂದಿದ್ದು ಗೊಂದಲಕ್ಕೆ ಕಾರಣವಾಗಿದೆ. ಆರ್ಟಿಪಿಸಿಆರ್ ಟೆಸ್ಟ್ ವರದಿ ಸರಿ ಎಂದು ವೈದ್ಯರು ಕೂಡ ಹೇಳಿದ್ದಾರೆ. ಹಾಗಾದ್ರೆ ರ‍್ಯಾಪಿಡ್ ಆಂಟಿಜನ್ ಟೆಸ್ಟ್ ವರದಿ ತಪ್ಪಾಗಿ ಬರುತ್ತಾ ಎಂಬ ಅನುಮಾನ ಮೂಡಿದೆ.


Spread the love

About Laxminews 24x7

Check Also

ʻಕೈʼ ಮುಖಂಡನ ಪುತ್ರರಿಂದ ಪೊಲೀಸರ ಮೇಲೆ ಹಲ್ಲೆ ಕೇಸ್ – ಕಾನೂನು ಎಲ್ಲರಿಗೂ ಒಂದೇ, ಶಿಕ್ಷೆ ಆಗುತ್ತೆ: ನಾಗಲಕ್ಷ್ಮೀ ಚೌಧರಿ

Spread the loveದಾವಣಗೆರೆ: ಚಿಗಟೀರಿ ಜಿಲ್ಲಾಸ್ಪತ್ರೆ ಬಳಿ ನಡೆದಿದ್ದ ಪೊಲೀಸರ ಮೇಲಿನ ಹಲ್ಲೆ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ತನಿಖೆ ನಡೆಯುತ್ತಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ