Breaking News

ಲಾಂಗ್ ಹಿಡಿದು ದಾರಿ ಹೋಕರಿಗೆ ಬೆದರಿಕೆ ಹಾಕಿದ್ದು ಅಲ್ಲದೇ ಬಾರ್ ಮಾಲೀಕನಿಗೆ ಬಿಯರ್ ನೀಡುವಂತೆ ಒತ್ತಾಯ

Spread the love

 

 

ಕೋಲಾರ: ಕೆಜಿಎಫ್‍ನಲ್ಲಿ ರೌಡಿಶೀಟರ್ ಓರ್ವ ಸಿನಿಮಾ ಸ್ಟೈಲ್ ನಲ್ಲಿ ಲಾಂಗ್ ಹಿಡಿದು ಬೆದರಿಕೆ ಹಾಕಿರುವ ಘಟನೆ ವರದಿಯಾಗಿದೆ. ಕುಡಿದ ಅಮಲಿನಲ್ಲಿ ಲಾಂಗ್ ಹಿಡಿದು ದಾರಿ ಹೋಕರಿಗೆ ಬೆದರಿಕೆ ಹಾಕಿದ್ದು ಅಲ್ಲದೇ ಬಾರ್ ಮಾಲೀಕನಿಗೆ ಬಿಯರ್ ನೀಡುವಂತೆ ತಮಿಳಿನಲ್ಲಿ ಒತ್ತಾಯ ಮಾಡಿದ್ದಾನೆ.

ಕೋಲಾರ ಜಿಲ್ಲೆಯ ಕೆಜಿಎಫ್‍ನಗರದ ಸಲ್ಡಾನಾ ಸರ್ಕಲ್‍ನ ಬಾರ್ ಮುಂದೆ ಎರಡು ದಿನದ ಹಿಂದೆ ಈ ನಡೆದಿದೆ ಎನ್ನಲಾಗಿದೆ. ಸೂಸೈ ಪಾಳ್ಯ ನಿವಾಸಿ ರೌಡಿಶೀಟರ್ ಎಡ್ವಿನ್ ಕುಡಿದ ಅಮಲಿನಲ್ಲಿ ಲಾಂಗ್ ಹಿಡಿದು ರಸ್ತೆಯಲ್ಲಿ ಓಡಾಡುವವರಿಗೆ ಸಿನಿಮಾ ಸ್ಟೈಲ್ ನಲ್ಲಿ ಲಾಂಗ್ ತೋರಿಸಿ ಬೆದರಿಕೆ ಹಾಕಿದ್ದಾನೆ. 2 ದಿನದ ಹಿಂದೆ ಆರ್.ಎಂ. ವೈನ್ಸ್ ಮುಂದೆ ಕುಡಿದು ರಂಪಾಟ ಮಾಡಿದ್ದ ಎಡ್ವಿನ್ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

ಎಡ್ವಿನ್ ಇದೆ ತಿಂಗಳ 27 ರಂದು ಕೆಜಿಎಫ್‍ನಲ್ಲಿ ಕೊಲೆಯಾದ ಸ್ಟಾಲಿನ್ ಅಣ್ಣಾ ಎನ್ನಲಾಗುತ್ತಿದೆ. ತಮ್ಮನ ಅಂತ್ಯಸಂಸ್ಕಾರ ಮಾಡಿದ ಬಳಿಕ ಹುಚ್ಚಾಟವಾಡಿದ್ದಾನೆ. ಎಡ್ವಿನ್ ನನ್ನು ರಾಬರ್ಟ್ ಸನ್ ಪೇಟೆ ಪೊಲೀಸರು ಈಗಾಗಲೇ ಬಂಧಿಸಿ ವಿಚಾರಣೆ ನಡೆಸಿದ್ದಾರೆ.


Spread the love

About Laxminews 24x7

Check Also

ಸಿದ್ದರಾಮಯ್ಯಗೆ ಒಂದು ಮತವನ್ನೂ ಹಾಕಲ್ಲ; ಇಡೀ ಗ್ರಾಮದಿಂದ ವರ್ತೂರು ಪ್ರಕಾಶ್‌ಗೆ ಭರವಸೆ

Spread the loveಕೋಲಾರ: ತಾಲೂಕಿನ ವೇಮಗಲ್‌ ಹೋಬಳಿಯ ಕುರುಬರಹಳ್ಳಿ ಗ್ರಾಮಕ್ಕೆ ಇತ್ತೀಚೆಗಷ್ಟೇ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಚುನಾವಣೆಯಲ್ಲಿ ಬೆಂಬಲಿಸುವಂತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ