Breaking News

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣ ಹೊಸ ತಿರುವು

Spread the love

ಮುಂಬೈ: 34 ವರ್ಷದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇದೀಗ ಸುಶಾಂತ್ ಮಾಜಿ ಗೆಳತಿ ನಟಿ ಅಂಕಿತಾ ಲೋಖಂಡೆ, ನನ್ನನ್ನು ಯಾರೂ ಖರೀದಿಸಲು ಸಾಧ್ಯವಿಲ್ಲ ಎಂದು ಇನ್‍ಸ್ಟಾಗ್ರಾಂನಲ್ಲಿ ಫೋಟೋ ಪೋಸ್ಟ್ ಮಾಡಿಕೊಂಡಿದ್ದಾರೆ.

ಸುಶಾಂತ್ ನಿಧನದ ಒಂದು ತಿಂಗಳ ಬಳಿಕ ಅಂಕಿತಾ ತಮ್ಮ ಅಭಿಪ್ರಾಯಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಳ್ಳುತ್ತಿದ್ದಾರೆ. ಸುಶಾಂತ್ ಜೊತೆಗಿನ ಸ್ನೇಹ, ಒಡನಾಟ, ನಿಗೂಢ ಸಾವಿನ ಬಗ್ಗೆ ಹಲವು ವಿಷಯಗಳನ್ನು ಅಂಕಿತಾ ಶೇರ್ ಮಾಡಿಕೊಂಡಿದ್ದಾರೆ. ಇಂದು ಇನ್‍ಸ್ಟಾಗ್ರಾಂನಲ್ಲಿ ಎಆರ್‍ಎ ಸಾಲುಗಳ ಫೋಟೋ ಶೇರ್ ಮಾಡಿಕೊಂಡಿರುವ ಬಗ್ಗೆ ಚರ್ಚೆಗಳು ಆರಂಭಗೊಂಡಿವೆ.

ಈ ಜೀವನದಲ್ಲಿ ಹಲವು ವಸ್ತುಗಳನ್ನು ಅವರು ಬಯಸುತ್ತಿರಬಹುದು. ಅಂತವರಿಗೆ ನೇರವಾಗಿ ನಾನು ಉತ್ತರ ನೀಡಲು ಬಯಸುತ್ತೇನೆ. ಈ ಜಗತ್ತಿನಲ್ಲಿ ಲಕ್ಷಾಂತರ ವಿಷಯಗಳಲ್ಲಿ ನಾನು ಮರೆಯಾಗಿ, ಶರಣಾಗಲಿ ಎಂದು ಬಯಸುತ್ತಿದ್ದಾರೆ. ಆದ್ರೆ ನಾನು ಸಂತರ ಹಾದಿಯಲ್ಲಿ ಪಯಣಿಸುತ್ತಿದ್ದು, ನನ್ನನ್ನು ಅವರ ಮೋಸದಾಟದಲ್ಲಿ ಸಿಲುಕಿಕೊಳ್ಳಲ್ಲ. ನಾನು ಹೃದಯದ ಮಾತು ಕೇಳಿ ಮನಸ್ಸಿನಿಂದ ಮಾತನಾಡುತ್ತೇನೆ. ನಾನು ಖರೀದಿಸಲು ಆಗಲ್ಲ ಮತ್ತು ಮಾರಾಟವಾಗುವ ವಸ್ತು ಸಹ ನಾನಲ್ಲ ಎಂದು ಅಂಕಿತಾ ಲೋಖಂಡೆ ಬರೆದುಕೊಂಡಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ