ಬೆಂಗಳೂರು: ಅಕ್ರಮ ವಲಸಿಗರ ಸರ್ವೆ ವೇಳೆ ಅಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದೆ. ಹೊರ ದೇಶದವರೇ ನಮ್ಮಲ್ಲಿ ಲಕ್ಷ ಲಕ್ಷ ಜನ ಇರುವ ಬಗ್ಗೆ ಮಾಹಿತಿ ಸಿಕ್ಕಿದೆ.
ಹೌದು. ರಾಜ್ಯದಲ್ಲಿ ಸರಿಸುಮಾರು 15 ರಿಂದ 18 ಲಕ್ಷ ವಲಸಿಗರು ಅನಧಿಕೃತವಾಗಿ ವಾಸವಾಗಿರುವ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಸದ್ಯ 274 ಮಂದಿ ಮಾತ್ರ ಡಿಪೋರ್ಟ್ (ಗಡೀಪಾರು) ಮಾಡಲು ಸಾಧ್ಯವಾಗಿದ್ದು, ಕಟ್ಟಡ ನಿರ್ಮಾಣ, ತೋಟ, ಗುಜರಿಗಳಲ್ಲಿ ಹೆಚ್ಚಾಗಿ ಕೆಲಸ ಮಾಡ್ತಿದ್ದಾರೆ.
ಇಂತಹವರನ್ನೆಲ್ಲಾ ಹುಡುಕಾಡಿ, ತಡಕಾಡಿ ಭಾರತದಿಂದ ಗಡೀಪಾರು ಮಾಡಿದ್ರೂ ಅಲ್ಲಿಯೂ ನೆಲೆ ಇಲ್ಲದಂತಾಗಿದೆ. ಬಾಂಗ್ಲಾ ಸುಪ್ರೀಂ ಕೋರ್ಟ್ ಇವರು ಭಾರತೀಯರು ಎಂದು ಗಡಿಪಾರಿಗೆ ಆದೇಶ ನೀಡಿದ್ದು, ಇದ್ರಿಂದ ಇವರನ್ನ ಗಡಿಪಾರಿಗೂ ಕಷ್ಟವಾಗಿದೆ. ಈಗ ಅಲ್ಲಿಯೂ ನೆಲೆ ಇಲ್ಲದೇ ಬಾಂಗ್ಲಾ ವಲಸಿಗರು ಅತಿಯಾಗಿ ಭಾರತದತ್ತ ಬರುತ್ತಿದ್ದಾರೆ. ಇದು ಭಾರತಕ್ಕೆ ಕಾಟವಾಗಿ ಪರಿಣಮಿಸಿದೆ.
Laxmi News 24×7