ದಾವಣಗೆರೆ: ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಸುತ್ತಮುತ್ತ ಕರಡಿಗಳ (Bears) ಹಾವಳಿ ಹೆಚ್ಚಾಗಿದೆ. ಇದರಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿದೆ.
ಸಂತೇಬೆನ್ನೂರು, ಕುಳೇನೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಹೊಲ ಗದ್ದೆಗಳಲ್ಲಿ ಕರಡಿಗಳು ನಿರಂತರವಾಗಿ ಸಂಚಾರ ಮಾಡುತ್ತಿವೆ. ಮೆಕ್ಕೆಜೋಳದ ಹೊಲಗಳಲ್ಲಿ ಕರಡಿಗಳ ಓಡಾಟ ಕಂಡು ರೈತರು ಬೆಚ್ಚಿ ಬಿದ್ದಿದ್ದಾರೆ. ಮುಂಜಾನೆ ಹೊಲಕ್ಕೆ ತೆರಳಿದ್ದ ರೈತರಿಗೆ (Farmers) ಕರಡಿಗಳ ದರ್ಶನವಾಗಿದ್ದು, ಈ ದೃಶ್ಯವನ್ನು ಗ್ರಾಮಸ್ಥರು ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ.
ಅಡಿಕೆ ತೋಟಗಳ ಡ್ರಿಪ್ ಪೈಪ್ ಹಾಗೂ ಗೇಟ್ಗಳನ್ನು ಕರಡಿಗಳು ಕಿತ್ತುಹಾಕುತ್ತಿವೆ. ನಿರಂತರ ಕರಡಿಗಳ ಸಂಚಾರದಿಂದ ತೋಟಗಳಿಗೆ ತೆರಳಲು ರೈತರು ಹಿಂದೇಟು ಹಾಕುತ್ತಿದ್ದಾರೆ. ಕರಡಿಗಳ ಹಾವಳಿ ಬಗ್ಗೆ ಹಲವು ಬಾರಿ ಮಾಹಿತಿ ನೀಡಿದರೂ ಅರಣ್ಯ ಇಲಾಖೆ (Forest Department) ನಿರ್ಲಕ್ಷ್ಯ ವಹಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕರಡಿಗಳನ್ನು ಸೆರೆಹಿಡಿದು ಸುರಕ್ಷಿತವಾಗಿ ಕಾಡಿಗೆ ಸ್ಥಳಾಂತರಿಸುವಂತೆ ಗ್ರಾಮಸ್ಥರ ಆಗ್ರಹಿಸಿದ್ದಾರೆ.
Laxmi News 24×7