Breaking News

ಜಾಲಿ ರೈಡ್‌ಗೆ ಬಂದಿದ್ದ ನಾಲ್ಕು ದುರಂತ ಅಂತ್ಯ

Spread the love

ಚಿಕ್ಕಬಳ್ಳಾಪುರ: ಕಾರು ಹಾಗೂ ಬೊಲೆರೋ ಗೂಡ್ಸ್ ವಾಹನ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಜಾಲಿ ರೈಡ್‌ಗೆ ಬಂದಿದ್ದ ನಾಲ್ಕು ಜನ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ  ನಂದಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ನಡೆದಿದೆ.

ಮೃತ ಯುವಕರನ್ನು ಯಲಹಂಕದ ಕೊಂಡಪ್ಪ ಬಡಾವಣೆ ನಿವಾಸಿಗಳಾದ ವೈಷ್ಣವ್, ಸಿದ್ದಾರ್ಥ್, ಶ್ರೇಯಸ್ ಹಾಗೂ ಯಶವಂತ್ ಎಂದು ಗುರುತಿಸಲಾಗಿದೆ. ಗಾಯಾಳು ದಿನೇಶ್‌ನನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಬೆಟ್ಟ ಹಲಸೂರು ಬಳಿ ಬಂಡೆಯಲ್ಲಿ ಈಜಾಡಿ ನಂತರ ಜಾಲಿ ರೈಡ್‌ಗಾಗಿ ಕೆಎ 04 ಎಂಎ 4680 ಫೋರ್ಡ್ ಕಾರಿನಲ್ಲಿ ಚಿಕ್ಕಬಳ್ಳಾಪುರದ ಕಡೆಗೆ ತೆರಳುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ 44ರಲ್ಲಿ ತೆರಳುವಾಗ ಒಂದು ಬದಿಯಿಂದ ಕಾರು ತೆರಳುತ್ತಿತ್ತು. ಇದೇ ವೇಳೆ ಇನ್ನೊಂದು ಬದಿಯಲ್ಲಿ ಬೊಲೆರೋ ಗೂಡ್ಸ್ ವಾಹನಕ್ಕೆ ಹೊರಡಿದ್ದು, ಎರಡು ವಾಹನ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಗುಗುಜ್ಜಾಗಿದೆ.

ಅಪಘಾತದ ವೇಳೆ ಗೂಡ್ಸ್ ವಾಹನದ ಚಾಲಕನಿಗೆ ಕೂಡ ಕಾಲು ಮುರಿದಿದೆ.


Spread the love

About Laxminews 24x7

Check Also

ಪ್ರದೀಪ್ ಈಶ್ವರ್ ಕುಟುಂಬಕ್ಕೆ ಮಹಾಲಕ್ಷ್ಮಿಯ ಆಗಮನ – ತಂದೆಯಾದ ಸಂಭ್ರಮದಲ್ಲಿ ಶಾಸಕ

Spread the loveಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಅವರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಶಾಸಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ