ಬೆಂಗಳೂರು: ಪ್ರಧಾನಿ ಮೋದಿ ಪಿಂಕ್ ಲೈನ್‌ನ ಎತ್ತರಿಸಿದ ಮಾರ್ಗಗಳಿಗೆ ಕಳೆದ 13ರಂದು ಚಾಲನೆ ನೀಡಿದರು. ಈ ಬೆನ್ನಲ್ಲೇ ಬಿಎಂಆರ್‌ಸಿಎಲ್ ಬನ್ನೇರುಘಟ್ಟ ಭಾಗದ ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಗುಡ್‌ನ್ಯೂಸ್ ಸಿಕ್ಕಿದ್ದು, ಮುಂದಿನ ಆರೇಳು ತಿಂಗಳಲ್ಲಿ ಗುಲಾಬಿ ಮಾರ್ಗದ ಅಂಡರ್ ಗ್ರೌಂಡ್ ಮೆಟ್ರೋ ಜನರಿಗೆ ಲಭ್ಯವಾಗಲಿದೆ.
ಬೆಂಗಳೂರಿನ ಬನ್ನೇರುಘಟ್ಟ ಭಾಗದ ಜನರ ಟ್ರಾಫಿಕ್‌ಗೆ ರಾಮಬಾಣವೆಂದ್ರೇ ಅದು ನಮ್ಮ ಮೆಟ್ರೋದ ಪಿಂಕ್ ಲೈನ್. ಒಟ್ಟು 21.26 ಕಿ.ಮೀ ಉದ್ದವಿರೋ ಈ ಮಾರ್ಗದ ಎತ್ತರಿಸಿದ ಅಥವಾ ಎಲಿವೇಟೆಡ್ ಮಾರ್ಗವನ್ನು ಕಳೆದ ಶುಕ್ರವಾರ ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಿದರು. ಈ ಮಾರ್ಗದಲ್ಲಿ 13.76 ಕಿ.ಮೀ ಉದ್ದದ ಸುರಂಗ ಮಾರ್ಗವಿದೆ. ಈ ಸುರಂಗ ಮಾರ್ಗವು ಡೈರಿ ಸರ್ಕಲ್‌ನಿಂದ ನಾಗಾವರದವರೆಗೆ ಒಟ್ಟು 12 ಅಂಡರ್‌ಗ್ರೌಂಡ್ ನಿಲ್ದಾಣಗಳನ್ನು ಹೊಂದಿದೆ. ಈ ಮಾರ್ಗದ ಬಗ್ಗೆ ಬೆಂಗಳೂರಿನ ಜನ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಬಗ್ಗೆ ಬಿಎಂಆರ್ ಸಿಎಲ್ ಎಂಡಿ ಮಹತ್ವದ ಅಪ್‌ಡೇಟ್ ನೀಡಿದ್ದಾರೆ. ಈ ಮಾರ್ಗ ಮುಂದಿನ ಆರೇಳು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದಿದ್ದಾರೆ.
ಇನ್ನೂ ಪಿಂಕ್ ಲೈನ್‌ನ ಸುರಂಗ ಮೆಟ್ರೋದ ಟನ್ ಲಿಂಗ್, ಸಿವಿಲ್ ವರ್ಕ್, ಟ್ರ‍್ಯಾಕ್ ಕೆಲಸ ಸಂಪೂರ್ಣವಾಗಿದೆ. ಸಿಗ್ನಲಿಂಗ್ ಹಾಗೂ ಪಿಎಸ್ ಡಿ-(ಫ್ಲಾಟ್ ಫಾರಂ ಸೆಕ್ಯೂರಿಟಿ ಡೋರ್) ಅಳವಡಿಸುವ ಕಾರ್ಯ ನಡೆಯುತ್ತಿದೆ. ಈ ಕೆಲಸಗಳು ಮುಗಿದ ನಂತರ ಸೇಫ್ಟಿ ಟೆಸ್ಟಿಂಗ್, ಟ್ರಯಲ್ ರನ್ ನಡೆಯಲಿದೆ.
ಈ ಸುರಂಗ ಮಾರ್ಗದಲ್ಲಿ ಡೈರಿ ಸರ್ಕಲ್, ಲಕ್ಕಸಂದ್ರ, ರಾಷ್ಟ್ರೀಯ ಮಿಲಿಟರಿ ಶಾಲೆ (ವೆಲ್ಲಾರ ಜಂಕ್ಷನ್), ಎಂ.ಜಿ. ರಸ್ತೆ ಮತ್ತು ಶಿವಾಜಿನಗರ, ಕಾಡುಗೊಂಡನಹಳ್ಳಿ (ಕೆಜಿ ಹಳ್ಳಿ), ಮತ್ತು ನಾಗಾವರ ಸ್ಟೇಷನ್‌ಗಳು ಬರಲಿವೆ. ಒಟ್ಟಿನಲ್ಲಿ ಪಿಂಕ್ ಲೈನ್ ಮೆಟ್ರೋ ಸುರಂಗ ಮಾರ್ಗ 2027ರ ಮೇ ವೇಳೆಗೆ ಸಿದ್ಧಗೊಳ್ಳುವ ಸಾಧ್ಯತೆಯಿದೆ.
Laxmi News 24×7