Breaking News

ಅಕ್ರಮ ಸಂಬಂಧ ಬಿಟ್ಟು ಹೋದ ಮಹಿಳೆ – ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಯುವಕ ಆತ್ಮಹತ್ಯೆ

Spread the love

ಬೆಂಗಳೂರು: ಅಕ್ರಮ ಸಂಬಂಧವನ್ನು ಮಹಿಳೆ ಬಿಟ್ಟು ಹೋದ ಹಿನ್ನೆಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಹನುಮಂತಸಾಗರ ಬಳಿ ನಡೆದಿದೆ.

ಆಂಧ್ರದ ಇಂದುಪುರ ಜಿಲ್ಲೆ ಮೂಲದ ಪವನ್ ಕುಮಾರ್ (28) ಮೃತ ಯುವಕ. ಪವನ್ ನಾಗಮಣಿ ಎಂಬಾಕೆಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ. ಎರಡು ವರ್ಷದ ಹಿಂದೆ ನಾಗಮಣಿ ಗಂಡ, ಮಕ್ಕಳನ್ನ ಬಿಟ್ಟು ಬಂದಿದ್ದಳು. ಬಳಿಕ ನಾಗಮಣಿ ಹಾಗೂ ಪವನ್ ಇಬ್ಬರೇ ರಾಜಾನುಕುಂಟೆ ಸೇರಿದಂತೆ ಹಲವೆಡೆ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಒಂದು ವಾರದ ಹಿಂದೆ ಇಬ್ಬರ ನಡುವೆ ಜಗಳ ನಡೆದಿತ್ತು. ಈ ಹಿನ್ನೆಲೆ ನಾಗಮಣಿ ಹನುಮಂತ ಸಾಗರದ ಬಳಿ ಸಂಬಂಧಿಕರ ಮನೆಗೆ ಬಂದಿದ್ದಳು.

ಈ ವೇಳೆ ಪವನ್ ಪೋನ್ ಮಾಡಿ ಬರುವಂತೆ ಗಲಾಟೆ ಮಾಡಿದ್ದ. ಆದರೆ ಆಕೆ ರೆಸ್ಪಾನ್ಸ್ ಮಾಡದ ಹಿನ್ನೆಲೆ ಪೆಟ್ರೋಲ್ ತಂದಿದ್ದ. ಫೋನ್‌ನಲ್ಲೇ ಜಗಳ ತಾರಕಕ್ಕೇರಿದ ಪರಿಣಾಮ ಪವನ್ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ತಕ್ಷಣವೇ ಸ್ಥಳೀಯರ ಸಹಾಯದಿಂದ ಪವನ್‌ನನ್ನು ವಿಕ್ಟೋರಿಯಾ ಬರ್ನಿಂಗ್ ಸೆಕ್ಷನ್‌ಗೆ ರವಾನಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಯುವಕ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


Spread the love

About Laxminews 24x7

Check Also

ಸಿನಿಮಾ ನಟರ ವಿರುದ್ಧ ಯುಟಿ ಖಾದರ್ ಅಸಮಾಧಾನ

Spread the loveಬೆಂಗಳೂರು: ಸಿನಿಮಾಗಳಲ್ಲಿ ನಟರು ಸಿಗರೇಟ್  ಹಿಡಿದು ಪೋಸ್ ಕೊಡುವುದನ್ನು ನೋಡಿ ಯುವಜನತೆ ಪ್ರೇರಣೆಗೊಂಡು ದಾರಿ ತಪ್ಪಬಾರದು ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ