ಬೆಂಗಳೂರು: ಕೆಮಿಕಲ್ ತುಂಬಿದ್ದ ಬಕೆಟ್‌ಗೆ ಬಿದ್ದು ಮಗು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಶ್ರೀರಾಮಪುರದಲ್ಲಿ ನಡೆದಿದೆ.
ಸುಬ್ರಮಣಿ (9) ಸಾವನ್ನಪ್ಪಿದ ಮಗು.
ನ.2ರಂದು ಘಟನೆ ನಡೆದಿದೆ. ಮಗು ವಾಸವಿದ್ದ ಮನೆಯ ಪಕ್ಕದಲ್ಲಿ ಕೆಮಿಕಲ್ ಫ್ಯಾಕ್ಟರಿ ಇತ್ತು. ಮಗು ಆಟವಾಡುತ್ತಾ ಕೆಮಿಕಲ್ ಫ್ಯಾಕ್ಟರಿಗೆ ಬಂದಿದ್ದು, ಈ ವೇಳೆ ಏಕಾಏಕಿ ಬಕೆಟ್ ಬಿದ್ದಿತ್ತು. ಕೂಡಲೇ ಅಲ್ಲಿದ್ದವರು ಮಗುವನ್ನು ಎತ್ತಿಕೊಂಡಿದ್ದರು.
ಮಗುವನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ. ಮಗು ಕೆಮಿಕಲ್ ಬಕೆಟ್‌ಗೆ ಬಿದ್ದ ದೃಶ್ಯ ಫ್ಯಾಕ್ಟರಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Laxmi News 24×7