Breaking News

ಮಹಾಮಾನವ ಫೋನ್ ಕದ್ದಾಲಿಕೆ ಮಾಡ್ತಿರೋದು ಹೊಸದಲ್ಲ – ರಾಹುಲ್‌ ಗಾಂಧಿ ಹೇಳಿಕೆ ಸಮರ್ಥಿಸಿಕೊಂಡ ಹರಿಪ್ರಸಾದ್‌

Spread the love

ಬೆಂಗಳೂರು: ʻಪ್ರಧಾನಿ ನರೇಂದ್ರ ಮೋದಿ ನಮ್ಮ ಫೋನ್‌ ಕದ್ದಾಲಿಕೆ ಮಾಡುತ್ತಿದ್ದಾರೆʼ ಎನ್ನುವ ರಾಹುಲ್‌ ಗಾಂಧಿ ಅವರ ಹೇಳಿಕೆಯನ್ನ ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್‌  ಸಮರ್ಥಿಸಿಕೊಂಡಿದ್ದಾರೆ.

ʻಸ್ನೂಪ್ ಗೇಟ್ʼ ಅಂತಲೇ ಕುಖ್ಯಾತಿ ಆಗಿತ್ತು
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ  ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಹಾ ಮಾನವ ಟೆಲಿಫೋನ್ ಕದ್ದಾಲಿಕೆ ಮಾಡ್ತಿರೋದು ಹೊಸದಲ್ಲ. ಗುಜರಾತಿನ ಮುಖ್ಯಮಂತ್ರಿಗಳಾಗಿದ್ದಾಗ ಕೆಲವು ಮಹಿಳೆಯರನ್ನು ಸೇರಿಸಿ ಎಸ್‌ಟಿಎಫ್‌ ಕೂಡ ರಚಿಸಿ, ಫೋನ್ ಕದ್ದಾಲಿಕೆ ಮಾಡಿದ್ದು ಬಹಳ ಕುಖ್ಯಾತಿಯಾಗಿತ್ತು. ʻಸ್ನೂಪ್ ಗೇಟ್ʼ ಅಂತಲೇ ಅದು ಕುಖ್ಯಾತಿ ಆಗಿತ್ತು. ನಮ್ಮ ನಾಯಕರಾದ ರಾಹುಲ್ ಗಾಂಧಿಯವರು   ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

ʻವಿರೋಧ ಪಕ್ಷದವರು ಅರ್ಬನ್ ನಕ್ಸಲ್ಸ್, ದೇಶವಿರೋಧಿ ಚಟುವಟಿಕೆಗಳಲ್ಲಿ ಇದ್ದಾರೆʼ ಅಂತ ಮಹಾಮಾನವ ಬಹಳ ಗಂಭೀರವಾದ ಆರೋಪ ಮಾಡಿದ್ದರು. ರಾಹುಲ್ ಗಾಂಧಿಯವರು ಬಹಿರಂಗವಾದ ಚರ್ಚೆಗೆ ಆಹ್ವಾನ ನೀಡಿದ್ದಾರೆ, ಬಹಿರಂಗ ಚರ್ಚೆ ಆದ ದಿನವೇ ಅವರ ರಾಜಕೀಯ ಜೀವನ ಕೊನೆಯಾಗುತ್ತೆ ಅಂತ ಸವಾಲನ್ನೂ ಸಹ ಹಾಕಿದ್ದಾರೆ. ಆ ಸವಾಲನ್ನು ಸ್ವೀಕರಿಸದೇ ಮಹಾಮಾನವ ಈ ಸಣ್ಣತನಕ್ಕೆ ಕೈ ಹಾಕಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಯಾರು ವಿದೇಶಿ ಶಕ್ತಿಗಳ ಕೈಗೊಂಬೆ?
ಯಾರು ದೇಶದ್ರೋಹಿಗಳು? ದೇಶಕ್ಕೆ ಯಾರಿಂದ ತೊಂದರೆ ಆಗ್ತಾ ಇದೆ? ವಿದೇಶಿ ಶಕ್ತಿಗಳು ಯಾರನ್ನು ಕೈಗೊಂಬೆಯಾಗಿ ಆಡಿಸ್ತಾ ಇದ್ದಾರೆ ಅನ್ನೋದು ಸಾಬೀತಾಗಬೇಕಾದ್ರೆ ಅಥವಾ ವಿದೇಶಿ ಶಕ್ತಿಗಳು ಯಾರಿಗೆ ಬೆಂಬಲ ಕೊಡ್ತಾ ಇದ್ದಾರೆ ಅನ್ನೋದು ಸಾಬೀತಾಗಬೇಕಾದ್ರೆ ಬಹಿರಂಗ ಚರ್ಚೆ ಆಗಬೇಕು. ರಾಹುಲ್‌ ಗಾಂಧಿ ಅವರು ಬಹಿರಂಗ ಚರ್ಚೆಗೆ ಆಹ್ವಾನ ಕೊಟ್ಟಿದ್ದಾರೆ. ಮಹಾಮಾನವನಿಗೆ ಏನಾದರೂ 56 ಎದೆಲಿ, ಧೈರ್ಯ ಇದ್ರೆ, ಬಹಿರಂಗ ಚರ್ಚೆಗೆ ಬರಲಿ. ಈ ಕದ್ದಾಲಿಕೆಗಳಿಂದ ಕಾಂಗ್ರೆಸ್ ಪಕ್ಷದ ನಾಯಕರನ್ನ ಬೆದರಿಸೋಕೆ ಆಗಲ್ಲ ಎಂದು ಗುಡುಗಿದ್ದಾರೆ.

ನನ್ನ ಫೋನ್‌ ಕೂಡ ಟ್ಯಾಪ್‌ ಆಗಿತ್ತು
ರಾಹುಲ್ ಗಾಂಧಿಯವರು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ, ಯಾವ ದಿವಸ ಬಹಿರಂಗವಾದ ಚರ್ಚೆಗೆ ಮಹಾಮಾನವ ಬರ್ತಾರೆ? ಅವತ್ತೇ ನರೇಂದ್ರ ಮೋದಿ ಅವರ ರಾಜಕೀಯ ಜೀವನ ಕೊನೆಯಾಗುತ್ತೆ. ಯಾರು ವಿದೇಶಿ ಶಕ್ತಿಗಳ ಕೈಗೊಂಬೆ ಆಗಿದ್ದಾರೆ ಅನ್ನೋದು ಸಾಬೀತಾಗುತ್ತೆ, ಅದಕ್ಕೋಸ್ಕರ ಈ ಕದ್ದಾಲಿಕೆ ಮಾಡ್ತಾ ಇದ್ದಾರೆ, ಕದ್ದಾಲಿಕೆ ಮಾಡಿರುವ ಪ್ರಸಂಗ ಹೊಸದಲ್ಲ. ಕರ್ನಾಟಕ ರಾಜ್ಯದಲ್ಲೇ ರಾಮಕೃಷ್ಣ ಹೆಗಡೆ ಅವರ ವಿರುದ್ಧ ಕದ್ದಾಲಿಕೆ ಆರೋಪ ಬಂದಾಗ ಅವರು ರಾಜೀನಾಮೆ ಕೊಟ್ಟರು. ಅದರಲ್ಲಿ ನನ್ನದು ಸಹ ಫೋನ್ ಕದ್ದಾಲಿಕೆ ಆಗಿತ್ತು. ಸಾರ್ವಜನಿಕ ಕ್ಷೇತ್ರದಲ್ಲಿ ಬಹಳ ಸ್ಪಷ್ಟತೆ ಇರಬೇಕು ಮತ್ತು ಪಾರದರ್ಶಕತೆ ಇರಬೇಕು. ಪಾರದರ್ಶಕತೆ ಇರಬೇಕಾದರೆ ಅವರು ಬಹಿರಂಗ ಚರ್ಚೆಗೆ ಬಂದರೆ ಎಲ್ಲವೂ ಸಹ ಬಗೆಹರಿಯುತ್ತೆ ಆ ಮಹಾಮಾನವನಿಗೆ ಆ ಧೈರ್ಯ ಇಲ್ಲ. ಅದಕ್ಕೋಸ್ಕರ ಕದ್ದಾಲಿಕೆ ಮಾಡ್ತಿರೋದು ಎಂದು ಲೇವಡಿ ಮಾಡಿದ್ದಾರೆ.


Spread the love

About Laxminews 24x7

Check Also

ದೇಸೂರು ಶಾಲೆಗೆ 5 ಎಕರೆ ಜಮೀನು ಕೊಡಿಸಲು ಪ್ರಯತ್ನ: ಲಕ್ಷ್ಮೀ ಹೆಬ್ಬಾಳಕರ್

Spread the loveಬೆಳಗಾವಿ: ದೇಸೂರು ಗ್ರಾಮದ ಸರ್ಕಾರಿ ಆದರ್ಶ ಪೂರ್ವ ಪ್ರಾಥಮಿಕ ಮರಾಠಿ ಶಾಲೆಯ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದ ಶಾಸಕಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ