Breaking News

ಸೂರತ್‌ನ ತ್ಯಾಜ್ಯ ಬಟ್ಟೆ ಗೋದಾಮಿನಲ್ಲಿ ಭಾರಿ ಬೆಂಕಿ ಅವಘಡ

Spread the love

ಗಾಂಧೀನಗರ: ಸೂರತ್‌ನ ಸಚಿನ್‌ನ ಪಾಟಿಯಾದಲ್ಲಿರುವ ತ್ಯಾಜ್ಯ ಬಟ್ಟೆ ಗೋದಾಮಿನಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದೆ.

ತ್ಯಾಜ್ಯ ಬಟ್ಟೆಗಳನ್ನು ಸಂಗ್ರಹಿಸುತ್ತಿದ್ದ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಆತಂಕ ಉಂಟಾಯಿತು. ಎಂಟು ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿ ನೀರನ್ನು ಸಿಂಪಡಿಸುವ ಮೂಲಕ ಬೆಂಕಿಯನ್ನು ಬಹುತೇಕ ನಿಯಂತ್ರಣಕ್ಕೆ ತಂದವು.

ಇದೇ ರೀತಿ, ನವೆಂಬರ್ 7 ರಂದು ಬಾವ್ಲಾ-ಅಹಮದಾಬಾದ್ ರಸ್ತೆಯಲ್ಲಿರುವ ಲೀಮ್ಯಾಕ್ ಕಂಪನಿ ಸ್ಥಾವರದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿತ್ತು. ಅವಘಡದಲ್ಲಿ ಒಬ್ಬರು ಸಾವನ್ನಪ್ಪಿದ್ದರು.

ಚಾಕೊಲೇಟ್ ಉತ್ಪಾದನೆ ನಡೆಯುತ್ತಿದ್ದ ಸೌಲಭ್ಯದ ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಮಾಹಿತಿ ಪಡೆದ ಕೂಡಲೇ ಸನಂದ್, ಬಾವ್ಲಾ ಮತ್ತು ಅಹಮದಾಬಾದ್‌ನಿಂದ ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದವು. ಸತತ ಮೂರು ಗಂಟೆಗಳ ಕಾಲ ಬೆಂಕಿ ನಂದಿಸುವ ಕಾರ್ಯ ನಡೆದಿತ್ತು.


Spread the love

About Laxminews 24x7

Check Also

ನಿಖಿಲ್ ಕುಮಾರಸ್ವಾಮಿಗೆ ದೇಗುಲ ದಿಗ್ಬಂಧನ – ʻಕೈʼ ಕಾರ್ಯಕರ್ತರಿಂದ ದೇವಾಲಯಕ್ಕೆ ಬೀಗ!

Spread the loveರಾಮನಗರ: ಜೆಡಿಎಸ್‌ ಯುವಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅವರಿಗೆ ದೇಗುಲ ಪ್ರವೇಶ ನಿರಾಕರಣೆ ಮಾಡಿರುವ ಘಟನೆ ರಾಮನಗರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ