ಡಾ. ಪ್ರಭಾಕರ್ ಕೋರೆ ಅವರು ಶ್ರೇಷ್ಠ ಸಾಧಕರು: ಎಸ್.ಎ ಗೋಠೆ
ಮಹಾಲಿಂಗಪುರ: ಡಾ. ಪ್ರಭಾಕರ್ ಕೋರೆಯವರು, ಸಾಧಕರು ಬೆರಳು ಕಚ್ಚುವಂತ ಸಾಧನೆ ಮಾಡಿದ್ದಾರೆ. ಸಾಮಾಜಿಕ ಹೊಣೆಗಾರಿಕೆ ಮತ್ತು ಜವಾಬ್ದಾರಿ ಇರುವವರು ಮಾತ್ರ ಶ್ರೇಷ್ಠ ಸಾಧಕರಾಗುತ್ತಾರೆ. ಇದಕ್ಕೆ ಡಾ. ಪ್ರಭಾಕರ್ ಕೋರೆ ಉತ್ತಮ ಉದಾಹರಣೆ ಎಂದು ಅಥಣಿಯ ಎಸ್ ಸಿ ಕಿತ್ತೂರು ಪ್ರೌಢಶಾಲೆಯ ಕನ್ನಡ ಶಿಕ್ಷಕರಾದ ಎಸ್.ಎ ಗೋಠೆ ಹೇಳಿದರು.
ಪಟ್ಟಣದ ಕೆಎಲ್ಇ ಸಂಸ್ಥೆಯ ಅಂಗ ಸಂಸ್ಥೆಗಳು, ಎಸ್.ಸಿ.ಪಿ ಕಲಾ, ವಿಜ್ಞಾನ & ಡಿಡಿಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ, 111ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿ,
42 ವರ್ಷಗಳಲ್ಲಿ 270ಕ್ಕೂ ಹೆಚ್ಚು ಅಂಗ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದಾರೆ. ಶಿಕ್ಷಣಕಷ್ಟೇ ಸೀಮಿತವಾಗದೆ ಆರೋಗ್ಯ, ಸಹಕಾರಿ ಸೇರಿ ಹೀಗೆ ಹಲವು ಕ್ಷೇತ್ರಗಳಲ್ಲಿ ಈ ಸಂಸ್ಥೆ ವಿಸ್ತರಿಸಿದೆ. ಕೆಎಲ್ಇ ಆಸ್ಪತ್ರೆಯನ್ನು ಇಡೀ ಜಗತ್ತೇ ಮೆಚ್ಚಿಕೊಂಡಿದೆ ಎಂದರು.
ಕೆಎಲ್ಇ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯರಾದ ಎಸ್.ಐ ಕುಂದಗೋಳ ಮಾತನಾಡಿ, ಕೆಎಲ್ಇ ಸಂಸ್ಥೆ ಕರ್ನಾಟಕದ ಕಿರೀಟ, ಬೆಳಗಾವಿ ಕರ್ನಾಟಕದಲ್ಲಿ ಉಳಿಯಲು ಕೆಎಲ್ಇ ಸಂಸ್ಥೆ ಮತ್ತು ಸಪ್ತಋಷಿಗಳು ಮುಖ್ಯ ಕಾರಣ. ಇವರು ಈ ಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿ ಮುಖ್ಯ ಪಾತ್ರವಹಿಸಿದ್ದಾರೆ ಎಂದು ಹೇಳಿದರು. ಪದವಿ ಕಾಲೇಜಿನ ಪ್ರಾಚಾರ್ಯ ಎನ್.ಬಿ ಪಾಟೀಲ ಪ್ರಾಸ್ತಾವಿಕ ಮಾತನಾಡಿ, ಕೆಎಲ್ಇ ಸಂಸ್ಥೆ ಸಮಾಜಕ್ಕೆ ಶಿಕ್ಷಣವೆಂಬ ಶಕ್ತಿ ಮತ್ತು ಆರೋಗ್ಯವೆಂಬ ಭಾಗ್ಯ ನೀಡುವ ಕಾಮಧೇನು ಎಂದರು.
ಸ್ಥಾನಿಕ ಆಡಳಿತ ಮಂಡಳಿ ಸದಸ್ಯರು ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಲ್.ಬಿ ತುಪ್ಪದ, ಉಪನ್ಯಾಸಕ ಎಸ್.ವಿ ಸಿದ್ನಾಳ್, ಐಟಿಐ ಕಾಲೇಜಿನ ಪ್ರಾಚಾರ್ಯ ಎಸ್.ಎಸ್ ಅಂಗಡಿ, ಪ್ರೌಢಶಾಲೆ ಉಪ ಪ್ರಾಚಾರ್ಯ ಬಿ.ಎನ್ ಅರಕೇರಿ, ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಅಮೀತ ಚಮಕೇರಿ ಹಾಗೂ ಕೆಎಲ್ಇ ಸಂಸ್ಥೆಯ ಎಲ್ಲ ಶಿಕ್ಷಕರು, ವಿದ್ಯಾರ್ಥಿಗಳು, ಸಿಬ್ಬಂದಿ ಇದ್ದರು. ಉಪನ್ಯಾಸಕರಾದ ಎಸ್.ಎಚ್ ಮೆಳವಂಕಿ ನಿರೂಪಿಸಿದರು.
ಫೋಟೋ 01: ಸಪ್ತಋಷಿಗಳ ಭಾವಚಿತ್ರಕ್ಕೆ ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
Laxmi News 24×7