Breaking News

ನಮ್ಮ ಮೆಟ್ರೋದಲ್ಲಿ ಕೇಂದ್ರದ ಪಾಲು 53.35%, ರಾಜ್ಯದ ಪಾಲು 46.65%: ಕಾಂಗ್ರೆಸ್‌ ಸರ್ಕಾರಕ್ಕೆ ತೇಜಸ್ವಿ ತಿರುಗೇಟು

Spread the love

ಬೆಂಗಳೂರು: ನಮ್ಮ ಮೆಟ್ರೋ ಯೋಜನೆಯ ಅನುದಾನ ಹಂಚಿಕೆ, ಸಾಲ ಮರುಪಾವತಿ ಹಾಗೂ ರೆಡ್ ಲೈನ್ ಯೋಜನೆಯ ವಿಳಂಬಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೆಟ್ರೋ ಅನುದಾನದ ಕುರಿತು ರಾಜ್ಯ ಸರ್ಕಾರ ಜನರಿಗೆ ತಪ್ಪು ಮಾಹಿತಿ ನೀಡುತ್ತಿದೆ ಮತ್ತು ಕ್ರೆಡಿಟ್ ಪಡೆಯಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರವಾಗಲೀ ಅಥವಾ ರಾಜ್ಯ ಸರ್ಕಾರವಾಗಲೀ, ಪ್ರಧಾನಿ ಮೋದಿ ಅವರಾಗಲೀ ಅಥವಾ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಾಗಲೀ ಯಾರೂ ತಮ್ಮ ಜೇಬಿನಿಂದ ಹಣ ಖರ್ಚು ಮಾಡುವುದಿಲ್ಲ. ಎಲ್ಲರೂ ಖರ್ಚು ಮಾಡುವುದು ಜನರ ತೆರಿಗೆ ಹಣವನ್ನೇ ಎಂದು ತೇಜಸ್ವಿ ಸೂರ್ಯ ಹೇಳಿದರು.

ಕೇಂದ್ರ ಸರ್ಕಾರದ ಗ್ಯಾರಂಟಿ ಮೇಲೆ ವಿದೇಶಿ ಸಂಸ್ಥೆಗಳು ನೀಡುವ 29 ಸಾವಿರ ಕೋಟಿ ರೂ. ಸಾಲದ ಮೊತ್ತವನ್ನು ರಾಜ್ಯ ಸರ್ಕಾರ ತನ್ನ ಖಾತೆಗೆ ಸೇರಿಸಿಕೊಂಡು, ತಮ್ಮ ಪಾಲು ಹೆಚ್ಚಿದೆ ಎಂದು ಸುಳ್ಳು ಹೇಳುತ್ತಿದೆ. ಆ ಸಾಲವನ್ನು ಬಿಎಂಆರ್‌ಸಿಎಲ್ ಸಂಸ್ಥೆಯೇ ಮರುಪಾವತಿಸುತ್ತದೆಯೇ ಹೊರತು ರಾಜ್ಯ ಸರ್ಕಾರವಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ನಮ್ಮ ಮೆಟ್ರೋ ಯೋಜನೆಯು 50:50 ಇಕ್ವಿಟಿ ಶೇರ್ ಒಪ್ಪಂದದಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಮಾಲೀಕತ್ವದಲ್ಲಿದೆ. ಈ ಒಪ್ಪಂದದ ಪ್ರಕಾರ ಆರಂಭಿಕವಾಗಿ ಎರಡೂ ಸರ್ಕಾರಗಳು ತಲಾ 9,164 ಕೋಟಿ ರೂ. ಹೂಡಿಕೆ ಮಾಡಿವೆ. ಒಪ್ಪಂದದ ನಿಯಮದಂತೆ ಭೂಸ್ವಾಧೀನ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಬೇಕಾಗಿದ್ದು, ಆ ಆಧಾರದ ಮೇಲೆ ರಾಜ್ಯ ಸರ್ಕಾರ 19 ಸಾವಿರ ಕೋಟಿ ರೂ. ವೆಚ್ಚ ಮಾಡಿದೆ ಎಂದು ಸೂರ್ಯ ವಿವರಿಸಿದರು.

ಕೇಂದ್ರವನ್ನು ದೂರುವ ಬದಲು ಕೇಂದ್ರದ 16% ಅನುದಾನವನ್ನು ನೀವೇ ಭರಿಸಬಹುಲ್ವೇ ಎಂಬ ಪಬ್ಲಿಕ್‌ ಟಿವಿ ಮುಖ್ಯಸ್ಥ ಹೆಚ್‌ಆರ್‌ ರಂಗನಾಥ್‌ ಅವರ ಅಭಿಪ್ರಾಯವನ್ನು ಉಲ್ಲೇಖಿಸಿದ ಅವರು, ಕೇಂದ್ರ ಸರ್ಕಾರ ಕೊಡಿಸಿರುವ ಸಾಲವೂ ಸೇರಿದಂತೆ ಕೇಂದ್ರದ ಪಾಲು 41,558 ಕೋಟಿ (53.35%) ಆಗಿದ್ದರೆ, ರಾಜ್ಯ ಸರ್ಕಾರದ ಪಾಲು 36,333 ಕೋಟಿ (46.65%) ಮಾತ್ರ ಆಗಿದೆ. ಆದರೆ ರಾಜ್ಯ ಸರ್ಕಾರ ಈ ಬಗ್ಗೆ ಸುಳ್ಳು ಮಾಹಿತಿ ನೀಡುತ್ತಿದೆ. ಕೇಂದ್ರ ಸರ್ಕಾರ ಕೇವಲ ಶೇ.16ರಷ್ಟು ಮಾತ್ರ ಹಣ ನೀಡುತ್ತಿದೆ ಎನ್ನುವುದಾದರೆ, ಆ ಹಣವನ್ನು ಬಿಟ್ಟು ನೀವೇ ಯೋಜನೆ ಮಾಡಿ ತೋರಿಸಿ ಕೊಡಿ ಎಂದು ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದರು.

ಮೆಟ್ರೋ ರೆಡ್ ಲೈನ್ ಯೋಜನೆ ವಿಳಂಬವಾಗಲು ರಾಜ್ಯ ಸರ್ಕಾರದ ಸುರಂಗ ಮಾರ್ಗ ಯೋಜನೆಯೇ ಕಾರಣ ಎಂದು ಸಂಸದರು ದೂರಿದರು. ಮೆಟ್ರೋ ಪ್ರಸ್ತಾವಿತ ಮಾರ್ಗದಲ್ಲೇ ಟನಲ್ ರೋಡ್ ಬರುತ್ತಿದ್ದು, ಇದರ ಜೊತೆಗೆ ಮೆಟ್ರೋ ನಿಲ್ದಾಣಗಳ ಉದ್ದವನ್ನು ಕಡಿಮೆ ಮಾಡಿ ಪ್ರಸ್ತಾವನೆ ಕಳುಹಿಸಲಾಗಿದೆ.

ರಾಜ್ಯ ಸರ್ಕಾರದ ಅವೈಜ್ಞಾನಿಕ ಸುರಂಗ ಮತ್ತು ಮೇಲ್ಸೇತುವೆ ಪ್ರಸ್ತಾವನೆಗಳಿಂದಾಗಿ ನಮ್ಮ ಮೆಟ್ರೋ ಹಂತ 3ಎ (ಆರೆಂಜ್ ಲೈನ್) ಯೋಜನೆ ವಿಳಂಬವಾಗಿದೆ. ರಾಜ್ಯ ಸರ್ಕಾರ ಈ ಯೋಜನೆಗೆ 28,405 ಕೋಟಿ ರೂ. ಅಂದಾಜು ವೆಚ್ಚ ಪ್ರಸ್ತಾಪಿಸಿ ಸಮಗ್ರ ಯೋಜನಾ ವರದಿ(DPR) ಕಳುಹಿಸಿತ್ತು. ಆದರೆ ಕೇಂದ್ರ ಸರ್ಕಾರದ ನೇತೃತ್ವದ ಪರಿಶೀಲನಾ ಸಮಿತಿಯು ಇದನ್ನು 25,999 ಕೋಟಿ ರೂ.ಗೆ ಇಳಿಸಿದ್ದು, ಇದರಿಂದ ತೆರಿಗೆದಾರರ 2,406 ಕೋಟಿ ರೂ. ಹಣ ಉಳಿತಾಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಹೇಳಿದ್ದು ಏನು?
ವಿದೇಶಿ ಸಾಲಗಳನ್ನು ರಾಜ್ಯ ಸರ್ಕಾರವೊಂದೇ ಮರುಪಾವತಿಸುತ್ತದೆ ಎಂಬುದು ಸುಳ್ಳು. ಕೇಂದ್ರ ಸರ್ಕಾರದ ಸಾರ್ವಭೌಮ ಖಾತರಿಯ (Sovereign Guarantee) ಮೂಲಕ ಪಡೆಯಲಾದ 28,958 ಕೋಟಿ ರೂ. ವಿದೇಶಿ ಸಾಲವನ್ನು ಸ್ವತಃ ಬಿಎಂಆರ್‌ಸಿಎಲ್ ಸಂಸ್ಥೆಯೇ ಪಡೆದು ಮರುಪಾವತಿಸುತ್ತದೆ.

ಬಿಎಂಆರ್‌ಸಿಎಲ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ 50:50 ಜಂಟಿ ಸಹಭಾಗಿತ್ವದ ಸಂಸ್ಥೆಯಾಗಿದೆ. ಕರ್ನಾಟಕದ ಪಾಲು 84% ಮತ್ತು ಕೇಂದ್ರದ ಪಾಲು 16% ಎಂಬ ಕಾಂಗ್ರೆಸ್ ವಾದ ಸತ್ಯಕ್ಕೆ ದೂರವಾದದ್ದು. ಅನುಮೋದಿತ ಯೋಜನೆಯ ಪ್ರಕಾರ ಕರ್ನಾಟಕದ ಪಾಲು 46.65% (36,333 ಕೋಟಿ ರೂ.) ಹಾಗೂ ಕೇಂದ್ರದ ಪಾಲು 53.35% (41,558 ಕೋಟಿ ರೂ.) ಆಗಿದೆ. ಮೊದಲ ಹಂತದಲ್ಲಿ 48.5% ಇದ್ದ ಕೇಂದ್ರದ ಪಾಲು, 3ನೇ ಹಂತದಲ್ಲಿ 57.9% ಕ್ಕೆ ಏರಿಕೆಯಾಗಿದೆ.

ಕೇಂದ್ರ ಸರ್ಕಾರ ಪ್ರತಿ ಕಿ.ಮೀ.ಗೆ ಕೇವಲ 57 ಕೋಟಿ ರೂ. ನೀಡುತ್ತಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಅವರು, ಕೇಂದ್ರ-ಪ್ರಾಯೋಜಿತ ವಿದೇಶಿ ಸಾಲವನ್ನೂ ಒಳಗೊಂಡಂತೆ ಬಿಎಂಆರ್‌ಸಿಎಲ್ ಯೋಜನೆಯಲ್ಲಿ ಕೇಂದ್ರಕ್ಕೆ ಪ್ರತಿ ಕಿ.ಮೀ.ಗೆ 189 ಕೋಟಿ ರೂ. ಮತ್ತು ರಾಜ್ಯ ಸರ್ಕಾರಕ್ಕೆ 165 ಕೋಟಿ ರೂ. ನಿಗದಿಪಡಿಸಲಾಗಿದೆ ಎಂದರು.

ರಾಜ್ಯ ಸರ್ಕಾರ ಪ್ರಸ್ತಾಪಿಸಿರುವ ಉತ್ತರ-ದಕ್ಷಿಣ ಸುರಂಗ ಮಾರ್ಗವು ನಮ್ಮ ಮೆಟ್ರೋ ‘ರೆಡ್ ಲೈನ್’ ಮಾರ್ಗದೊಂದಿಗೆ ಅತಿಕ್ರಮಣಗೊಳ್ಳುತ್ತಿದೆ. ಇದರಿಂದ ಯೋಜನೆಯ ಮರು-ವಿನ್ಯಾಸ ಅನಿವಾರ್ಯವಾಗಿದ್ದು, ಹೆಬ್ಬಾಳ ಸುರಂಗ ಪ್ರಸ್ತಾವನೆಯ ಬಗ್ಗೆ ಸ್ವತಃ ರಾಜ್ಯ ಹಣಕಾಸು ಇಲಾಖೆಯೇ ಆಕ್ಷೇಪ ವ್ಯಕ್ತಪಡಿಸಿದೆ. ಇದರಿಂದ ಪಶುವೈದ್ಯಕೀಯ ಕಾಲೇಜು ಮೆಟ್ರೋ ನಿಲ್ದಾಣವನ್ನು ಕೈಬಿಡಲಾಗುತ್ತಿದ್ದು, ಇದರಿಂದ ಪ್ರತಿ ದಿಕ್ಕಿನಲ್ಲಿ ಗಂಟೆಗೆ 18,000 ಪ್ರಯಾಣಿಕರ ಸಂಚಾರಕ್ಕೆ ತೊಂದರೆಯಾಗಲಿದೆ. ಯೋಜನೆಯ ಪೂರ್ಣಗೊಳ್ಳುವ ಅವಧಿ 2031ರಿಂದ 2033ಕ್ಕೆ ಮುಂದೂಡಲ್ಪಟ್ಟಿದೆ. ಈ ವಿಳಂಬದಿಂದಾಗಿ ಸುಮಾರು 2,628 ಕೋಟಿ ರೂ. ಹೆಚ್ಚುವರಿ ವೆಚ್ಚದ ಹೊರೆ ಬೀಳಲಿದೆ.

ಬೆಂಗಳೂರಿಗೆ ಸಮಗ್ರ ನಗರ ಯೋಜನೆಯ ಅಗತ್ಯವಿದೆಯೇ ಹೊರತು, ಒಂದಕ್ಕೊಂದು ವಿರುದ್ಧವಾಗಿ ಕೆಲಸ ಮಾಡುವ ಮೂಲಸೌಕರ್ಯ ಯೋಜನೆಗಳಲ್ಲ. ಮೆಟ್ರೋ ವಿಳಂಬಕ್ಕೆ ರಾಜ್ಯ ಸರ್ಕಾರ


Spread the love

About Laxminews 24x7

Check Also

ಅಡುಗೆ ಎಣ್ಣೆ ಮರುಬಳಕೆಗೆ ಸರ್ಕಾರ ನಿರ್ಬಂಧ – ಶೀಘ್ರದಲ್ಲೇ ಹೊಸ ಆ್ಯಪ್ ಬಿಡುಗಡೆ

Spread the loveಬೆಂಗಳೂರು: ಅಡುಗೆ ಎಣ್ಣೆ  ಮರುಬಳಕೆ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ  ದಿಟ್ಟ ಹೆಜ್ಜೆ ಇಟ್ಟಿದೆ. ಹೋಟೆಲ್‌ಗಳಲ್ಲಿ ಇನ್ಮುಂದೆ ಅಡುಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ