Breaking News

ಬೆಳಗಾವಿ ಮಾದರಿಯಲ್ಲಿ 3,600 ರೂ. ದರ ನಿಗದಿಗೆ ಹಾವೇರಿ ಕಬ್ಬು ಬೆಳೆಗಾರರ ಒತ್ತಾಯ – ಇಂದು ಮಹತ್ವದ ಸಭೆ

Spread the love

ಹಾವೇರಿ: ಕಬ್ಬಿಗೆ ಬೆಳಗಾವಿಯಲ್ಲಿ ದರ ನಿಗದಿ ಮಾಡಿದಂತೆ ಟನ್‌ಗೆ 3,600 ರೂ. ದರ ನೀಡುವಂತೆ ಹಾವೇರಿ  ಕಬ್ಬು ಬೆಳೆಗಾರರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಈ ಸಂಬಂಧ ಹಾವೇರಿ ಡಿಸಿ ನೇತೃತ್ವದಲ್ಲಿ ಇಂದು ಮಹತ್ವದ ಸಭೆ ನಡೆಯಲಿದೆ. ಚೂನಪ್ಪ ಪೂಜೇರಿ, ಶಶಿಕಾಂತ ಗುರೂಜಿ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಜಿಲ್ಲೆಯ ಜಿಎಂ ಶುಗರ್ಸ್ ಹಾಗೂ ವಿಎನ್‌ಪಿ ಸಕ್ಕರೆ ಕಾರ್ಖಾನೆ ಮಾಲೀಕರು ಟನ್‌ಗೆ ಕೇವಲ 3000 ರೂ. ಕೊಡುವುದಾಗಿ ಹೇಳಿದ್ದಾರೆ. 3600 ರೂ. ಬೆಲೆ ನೀಡದಿದ್ದರೆ ಜಿಲ್ಲೆಯಲ್ಲಿರೋ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಕಳಿಸಲ್ಲ. ಸೂಕ್ತ ಬೆಲೆ ನೀಡುವ ಕಾರ್ಖಾನೆಗಳಿಗೆ ಕಬ್ಬು ಕಳಿಸುತ್ತೇವೆ. ನಮ್ಮ ಬೇಡಿಕೆ ಈಡೇರದಿದ್ದರೆ ಹೋರಾಟ ನಡೆಸುತ್ತೇವೆ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಟನ್ ಕಬ್ಬಿಗೆ 3600 ರೂ.ಗೂ ಹೆಚ್ಚಿನ ಬೆಲೆ ನೀಡುತ್ತಿದ್ದಾರೆ. ಬೆಳಗಾವಿ ಮಾದರಿಯಲ್ಲೇ ದರ ನಿಗದಿ ಮಾಡುವಂತೆ ಹಾವೇರಿ ರೈತರು ಒತ್ತಾಯಿಸಿದ್ದಾರೆ. ಈ ಸಂಬಂಧ ಹಾವೇರಿ ಡಿಸಿ ಕಚೇರಿಯಲ್ಲಿ ಇಂದು ಮದ್ಯಾಹ್ನ 3 ಗಂಟೆಗೆ ಸಭೆ ನಡೆಯಲಿದೆ. ಸಕ್ಕರೆ ಕಾರ್ಖಾನೆ ಮಾಲೀಕರು ಸಹ ಸಭೆಗೆ ಬರುವಂತೆ ಆಹ್ವಾನ ನೀಡಲಾಗಿದೆ.

ಪ್ರತಿ ಸಲ ಕಾರ್ಖಾನೆ ಮಾಲೀಕರದ ಬದಲಿಗೆ ಅವರ ಕಾರ್ಖಾನೆ ಸಿಬ್ಬಂದಿ ಸಭೆಗೆ ಬರುತ್ತಾರೆ. ಹೀಗಾಗಿ ಕಾರ್ಖಾನೆ ಮಾಲೀಕರೇ ಖುದ್ದು ಸಭೆಗೆ ಬರುವಂತೆ ರೈತರು ಆಗ್ರಹಿದ್ದಾರೆ. ಜಿಲ್ಲಾಡಳಿತ, ಕಾರ್ಖಾನೆ ಮಾಲೀಕರು, ಹಾಗೂ ರೈತರ ಎದುರೇ ಬೆಲೆ ನಿಗದಿ ಆಗಬೇಕೆಂದು ರೈತರು ಪಟ್ಟು ಹಿಡಿದಿದ್ದಾರೆ.


Spread the love

About Laxminews 24x7

Check Also

ಬೆಂಗಳೂರು ವಕೀಲ ಮಂಜುನಾಥ್ ಶೂಟೌಟ್ ಪ್ರಕರಣ – ಪ್ರಮುಖ ಆರೋಪಿ ಬಂಧನ

Spread the loveಬೆಂಗಳೂರು: ಬೆಂಗಳೂರಿನ ವಕೀಲ ಮಂಜುನಾಥ್ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಅಮಿತ್ ಕುಮಾರ್ ದುಬೆಯನ್ನು ವೈಟ್‌ಫೀಲ್ಡ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ