Breaking News

ಜಿಯೋ ಗ್ರಾಹಕರಿಗೆ ಮತ್ತೊಂದು ಬಂಪರ್ ಆಫರ್

Spread the love

ಜಿಯೋ ತನ್ನ ಗ್ರಾಹಕರಿಗೆ ಮತ್ತೊಂದು ಬಂಪರ್ ಆಫರ್ ನೀಡಿದೆ. ಇನ್ಮುಂದೆ ಒಂದು ತಿಂಗಳ ರೀಚಾರ್ಜ್ ಮಾಡಿಸಿದರೆ ಸಾಕು ಮುಂದಿನ ತಿಂಗಳೂ ಉಚಿತವಾಗಿ ಮೊಬೈಲ್ ಸೇವೆ ಪಡೆಯುವ ಅವಕಾಶ ಸಿಗಲಿದೆ.

ರಿಲಯನ್ಸ್ ಜಿಯೋ ತನ್ನ ಆಯ್ದ ಗ್ರಾಹಕರಿಗೆ ‘ಬೈ ಒನ್ ಗೆಟ್ ಒನ್’  ವಿಶೇಷ ಆಫರ್ ಪರಿಚಯಿಸಿದೆ. ಈ ಆಫರ್ ಮೂಲಕ ಗ್ರಾಹಕರು ಒಂದು ರೀಚಾರ್ಜ್‌ನಲ್ಲೇ ಎರಡು ತಿಂಗಳ ಪ್ರಯೋಜನ ಪಡೆಯಬಹುದು.

ಸಾಮಾನ್ಯವಾಗಿ ಪ್ರತಿ 28 ದಿನಗಳಿಗೊಮ್ಮೆ ರೀಚಾರ್ಜ್ ಮಾಡಿಸಬೇಕಾದ ಅನಿವಾರ್ಯತೆ ಇರುತ್ತದೆ. ಇದರಿಂದ ಮೊಬೈಲ್ ಬಳಕೆಗೆ ಪ್ರತಿತಿಂಗಳು ಹಣ ಖರ್ಚಾಗುತ್ತದೆ. ಆದರೆ ಜಿಯೋದ ಈ ಹೊಸ ಆಫರ್ ಲಭ್ಯವಿರುವ ಗ್ರಾಹಕರಿಗೆ ಒಂದು ತಿಂಗಳ ರೀಚಾರ್ಜ್ ಮಾಡಿದರೆ ಮತ್ತೊಂದು ತಿಂಗಳ ರೀಚಾರ್ಜ್ ಉಚಿತವಾಗಿ ದೊರೆಯಲಿದೆ. ಇದರಿಂದ ರೀಚಾರ್ಜ್ ವೆಚ್ಚದಲ್ಲಿ ಹಣ ಉಳಿಸಬಹುದು.

ಈ ಆಫರ್ ಪಡೆಯಲು ಕೆಲವು ಷರತ್ತುಗಳು ಅನ್ವಯವಾಗುತ್ತವೆ. ಮುಖ್ಯವಾಗಿ, ಗ್ರಾಹಕರು ಮೈ ಜಿಯೋ (MyJio) ಆ್ಯಪ್ ಮೂಲಕವೇ ರೀಚಾರ್ಜ್ ಮಾಡಿಸಬೇಕು. ಗೂಗಲ್ ಪೇ, ಫೋನ್‌ಪೇ ಸೇರಿದಂತೆ ಇತರ ಯುಪಿಐ ಆ್ಯಪ್‌ಗಳ ಮೂಲಕ ರೀಚಾರ್ಜ್ ಮಾಡಿದರೆ ಈ ಆಫರ್ ಅನ್ವಯಿಸುವುದಿಲ್ಲ. ಈ ಕುರಿತು ಜಿಯೋ ಆಯ್ದ ಗ್ರಾಹಕರಿಗೆ ಎಸ್‌ಎಂಎಸ್ ಮೂಲಕವೂ ಮಾಹಿತಿ ನೀಡುತ್ತಿದೆ.

₹299, ₹349 ಪ್ಲಾನ್‌ಗಳಿಗೆ ಆಫರ್:
ಜಿಯೋ ತನ್ನ ₹299 ಮತ್ತು ₹349 ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್‌ಗಳಿಗೆ ಈ ವಿಶೇಷ ಆಫರ್ ನೀಡುತ್ತಿದೆ. ಈ ಪ್ಲಾನ್‌ಗಳ ಸಾಮಾನ್ಯ ವ್ಯಾಲಿಡಿಟಿ 28 ದಿನಗಳು. ಬೈ ಒನ್ ಗೆಟ್ ಒನ್ ಆಫರ್ ಲಭ್ಯವಿದ್ದರೆ ಒಂದು ರೀಚಾರ್ಜ್‌ಗೆ ಮತ್ತೊಂದು ಉಚಿತ ರೀಚಾರ್ಜ್ ಸೌಲಭ್ಯ ಸಿಗುತ್ತದೆ.


Spread the love

About Laxminews 24x7

Check Also

ಪ್ರೀತಿಸಿ ಮದುವೆಯಾದ ನವವಿವಾಹಿತೆ ಆತ್ಮಹತ್ಯೆ – ವರದಕ್ಷಿಣೆ ಕಿರುಕುಳ ಆರೋಪ

Spread the loveಬೆಂಗಳೂರು: ಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತೆ ಮದುವೆಯಾಗಿ ವರ್ಷ ಕಳೆಯುವ ಮುನ್ನವೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ