ದಾವಣಗೆರೆ: ಇಲ್ಲಿನ ಬಿ.ಡಿ ಲೇಔಟ್‌ನಲ್ಲಿ ಹಫ್ತಾ ವಸೂಲಿ ಪ್ರಶ್ನಿಸಿದ್ದ ಕುಟುಂಬದ ಮೇಲೆ ಹಲ್ಲೆ ನಡೆಸಿ, ಯುವಕನ ಸಾವಿಗೆ ಕಾರಣನಾಗಿದ್ದ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಎರಡು ತಿಂಗಳ ಬಳಿಕ ಬಂಧಿಸಿದ್ದಾರೆ.
ಅಮಾನುಲ್ಲಾ(49) ಬಂಧಿತ ಆರೋಪಿ. ಈತ ಹುಬ್ವಳ್ಳಿಯ ಇಸ್ಲಾಂಪೂರ್‌ನಲ್ಲಿ ತಲೆ ಮರೆಯಿಸಿಕೊಂಡಿದ್ದ. ಕಳೆದ ಸೆ.6 ರಂದು ಹಫ್ತಾ ನೀಡುತ್ತಿಲ್ಲ ಎಂದು ಕಿಡಿಗೇಡಿಗಳು ಕುಟುಂಬವೊಂದರ ಮೇಲೆ ತಲ್ವಾರ್, ದೊಣ್ಣೆಯಿಂದ ಹಲ್ಲೆ ನಡೆಸಿದ್ದರು. ಈ ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಗಲಾಟೆಯಲ್ಲಿ ಯುವಕ ಜಿಷಾನ್ ಗಂಭೀರವಾಗಿ ಗಾಯಗೊಂಡು, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದ. ಅಜಾದ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು.
ಹಲ್ಲೆ ನಡೆಸಿದ 15 ಜನರ ವಿರುದ್ಧ ದೂರು ದಾಖಲಾಗಿತ್ತು. ಅದರಲ್ಲಿ ಇಲ್ಲಿಯವರೆಗೂ 5 ಜನ ಅರೋಪಿಗಳನ್ನು ಬಂಧಿಸಲಾಗಿತ್ತು. ಇಂದು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದು, ಬಂಧಿತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.
Laxmi News 24×7