ದಾವಣಗೆರೆ: ನಗರಕ್ಕೆ ಬರುತ್ತಿದ್ದ KSRTC ಬಸ್ಸಿನಲ್ಲಿ ಮಹಿಳೆಯೊಬ್ಬರು ಬಿಟ್ಟು ಹೋಗಿದ್ದ 4 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಚಾಲಕ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಚಿತ್ರದುರ್ಗದಿಂದ ದಾವಣಗೆರೆಗೆ ಬರುವಾಗ ಬಸ್ನಲ್ಲಿ ಮಹಿಳೆಯೊಬ್ಬರು ಬ್ಯಾಗ್ ಬಿಟ್ಟು ಹೋಗಿದ್ದರು. ಬ್ಯಾಗ್ನಲ್ಲಿ ಚಿನ್ನದ ಆಭರಣ ಇರುವುದನ್ನ ಕಂಡ ಚಾಲಕ ಮಂಜುನಾಥ್, ಡಿಪೋ ಮ್ಯಾನೇಜರ್ ಸಿದ್ದೇಶ್ ಸಿದ್ದನಮಠ ಅವರಿಗೆ ಹಸ್ತಾಂತರಿಸಿದ್ದರು. ಬಳಿಕ ಬ್ಯಾಗ್ ಪರಿಶೀಲನೆ ನಡೆಸಿದಾಗ ಒಂದು ಮಾಂಗಲ್ಯ ಸರ, ಎರಡು ಕಿವಿಯೋಲೆ ಹಾಗೂ ಮೊಬೈಲ್ ನಂಬರ್ ಪತ್ತೆಯಾಗಿತ್ತು.
ಮೊಬೈಲ್ ನಂಬರ್ಗೆ ಕರೆ ಮಾಡಿದಾಗ, ಚನ್ನಗಿರಿ ತಾಲೂಕಿನ ಚಿರಡೋಣಿಗೆ ಹೋಗುತ್ತಿದ್ದ ಚಿತ್ರದುರ್ಗ ಮೂಲದ ಲಕ್ಷ್ಮಿ ಎಂಬವರಿಗೆ ಸೇರಿದ ಬ್ಯಾಗ್ ಇದು ಎಂಬುದು ಗೊತ್ತಾಗಿತ್ತು. ಮಹಿಳೆಯನ್ನು ಕಚೇರಿಗೆ ಕರೆಸಿ ಚಿನ್ನದ ಆಭರಣ ಇರುವ ಬ್ಯಾಗ್ನ್ನು ಅಧಿಕಾರಿಗಳು ಹಸ್ತಾಂತರಿಸಿದ್ದಾರೆ.
Laxmi News 24×7