Breaking News

ಒಬ್ಬ ಆಟಗಾರನಿಗೆ 40 ಕೋಟಿ ಡಿಮ್ಯಾಂಡ್‌ – ಐಪಿಎಲ್‌ನ ಸ್ಟಾರ್ ಆಟಗಾರರಿಂದ ಫ್ರಾಂಚೈಸಿಗಳಿಗೆ ಬಿಗ್ ಶಾಕ್?

Spread the love

ಮುಂಬೈ: ಮುಂಬರುವ ಐಪಿಎಲ್ ಮೆಗಾ ಹರಾಜಿಗೂಮುನ್ನ ಆಟಗಾರರ ರಿಟೆನ್ಷನ್ವಿಚಾರವಾಗಿ ಫ್ರಾಂಚೈಸಿಗಳ ನಡುವೆ ದುಬಾರಿ ಪೈಪೋಟಿ ಏರ್ಪಡುವ ಸಾಧ್ಯತೆ ಎದುರಾಗಿದೆ.

ಐಪಿಎಲ್‌ನ ಕೆಲವು ಸ್ಟಾರ್ ಆಟಗಾರರು ತಮ್ಮನ್ನ ತಂಡದಲ್ಲೇ ಉಳಿಸಿಕೊಳ್ಳಲು ಬರೋಬ್ಬರಿ 40 ಕೋಟಿ ರೂಪಾಯಿ ಸಂಭಾವನೆ ನೀಡುವಂತೆ ಬೇಡಿಕೆಯಿಟ್ಟಿದ್ದಾರೆ ಎಂದು ಹೇಳಲಾಗ್ತಿದೆ. ಈ ಅಸಾಧಾರಣ ಮೊತ್ತದ ಬೇಡಿಕೆ ಫ್ರಾಂಚೈಸಿಗಳ (Franchises) ತಂಡದ ಸಂಯೋಜನೆ ಹಾಗೂ ಆಟಗಾರರ ಖರೀದಿ ತಂತ್ರಗಾರಿಕೆಯನ್ನೇ ಬದಲಿಸುವ ಸಾಧ್ಯತೆಯಿದೆ.

ವರದಿಯ ಪ್ರಕಾರ, ಕನಿಷ್ಠ ಇಬ್ಬರು ಪ್ರಮುಖ ಆಟಗಾರರು ತಮ್ಮ ತಮ್ಮ ಫ್ರಾಂಚೈಸಿಗಳಿಗೆ 40 ಕೋಟಿ ರೂ. ಸಂಭಾವನೆ ಬೇಡಿಕೆಯಿಟ್ಟಿದ್ದಾರೆ. ಈ ಮೊತ್ತಕ್ಕೆ ಒಪ್ಪಿದರಷ್ಟೇ ತಂಡದಲ್ಲೇ ಮುಂದುವರಿಯುತ್ತೇವೆ ಎನ್ನುವ ಖಡಕ್‌ ಸಂದೇಶವನ್ನೂ ಮುಟ್ಟಿಸಿದ್ದಾರೆ. ಇನ್ನುಳಿದ ಕೆಲವು ಹೈಪ್ರೊಫೈಲ್ ಆಟಗಾರರು ಕೂಡ ಇದೇ ಹಾದಿ ಹಿಡಿಯುವ ಸಾಧ್ಯತೆಯಿದೆ. ಹರಾಜಿನಲ್ಲಿ ಹೆಚ್ಚು ಮೊತ್ತ ಗಳಿಸಬಹುದು ಎಂಬ ಲೆಕ್ಕಾಚಾರವೂ ಈ ಬೇಡಿಕೆಯ ಹಿಂದಿದೆ. ಇನ್ನೊಂದು ಕೇಸಲ್ಲಿ ಆಟಗಾರನ ನಾಯಕತ್ವದ ಜವಾಬ್ದಾರಿಗೂ ಈ ಬೃಹತ್ ಸಂಭಾವನೆಗೂ ನಂಟಿದೆ ಎನ್ನಲಾಗಿದೆ.

2025ರ ಮೆಗಾ ಹರಾಜಿನಲ್ಲೂ ಸ್ಟಾರ್ ಆಟಗಾರರಾದ ಶ್ರೇಯಸ್ ಅಯ್ಯರ್ ಹಾಗೂ ರಿಷಭ್ ಪಂತ್ ತಮ್ಮ ಹಿಂದಿನ ತಂಡಗಳಲ್ಲಿ ರಿಟೈನ್ ಆಗದೇ ಹರಾಜಿನ ಕಣಕ್ಕಿಳಿದಿದ್ದರು. ಈ ವೇಳೆ ಇಬ್ಬರ ಮೇಲೂ ಫ್ರಾಂಚೈಸಿಗಳು ಹಣದ ಹೊಳೆಯನ್ನೇ ಹರಿಸಿದ್ದವು. ಶ್ರೇಯಸ್ ಅಯ್ಯರ್ ಬರೋಬ್ಬರಿ 26.75 ಕೋಟಿ ರೂಪಾಯಿಗೆ ಖರೀದಿಯಾದ್ರೆ, ರಿಷಭ್ ಪಂತ್ 27 ಕೋಟಿ ರೂಪಾಯಿ ಪಡೆದು ಐಪಿಎಲ್ ಇತಿಹಾಸದಲ್ಲೇ ದುಬಾರಿ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು.

2028ರ ಐಪಿಎಲ್‌ ವೇಳೆ ಹೆಚ್ಚಾಗಲಿದೆ ಪರ್ಸ್‌ ಮೊತ್ತ
ಮುಂಬರುವ ಹರಾಜಿನಲ್ಲಿ ಫ್ರಾಂಚೈಸಿಗಳ ಆರ್ಥಿಕ ಸಾಮರ್ಥ್ಯ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. 2027ರ ಐಪಿಎಲ್ ಋತುವಿಗೆ ತಂಡಗಳ ಆಟಗಾರರ ಖರೀದಿ ಪರ್ಸ್ 130 ಕೋಟಿ ರೂಪಾಯಿಗಳಷ್ಟು ಇರಲಿದೆ. 2028ರ ವೇಳೆಗೆ ಈ ಮೊತ್ತ ಸುಮಾರು 150 ಕೋಟಿ ರೂಪಾಯಿಗೆ ಏರಿಕೆಯಾಗುವ ಸಾಧ್ಯತೆಯಿದೆ.

ಒಬ್ಬ ಆಟಗಾರನಿಗೆ 40 ಕೋಟಿ ರೂಪಾಯಿ ನೀಡಬೇಕಾದರೆ, ಫ್ರಾಂಚೈಸಿಯ ಒಟ್ಟು ಪರ್ಸ್‌ನ ಶೇಕಡಾ 25ಕ್ಕಿಂತಲೂ ಹೆಚ್ಚು ಮೊತ್ತವನ್ನು ಒಬ್ಬರಿಗೇ ಮೀಸಲಿಡಬೇಕಾಗುತ್ತದೆ. ಒಂದು ವೇಳೆ ಇದು ಆಗಲೇಬೇಕೆಂದ್ರೆ ಪ್ರಮುಖ ಆಟಗಾರರನ್ನು ಫ್ರಾಂಚೈಸಿಗಳು ಹೊರದಬ್ಬುವ ಸಾಧ್ಯತೆಯಿದೆ. ಇತ್ತ ಕೆಲ ಆಟಗಾರರನ್ನ ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆಗಳೂ ಇರೋದ್ರಿಂದ 2028ರ ಐಪಿಎಲ್‌ಗೆ ನಡೆಯಲಿರುವ ಮೆಗೆ ಹರಾಜು ಭಾರೀ ಕುತೂಹಲ ಕೆರಳಿಸಿದೆ.


Spread the love

About Laxminews 24x7

Check Also

ಡಿ.2 ರಿಂದ 11 ರವರೆಗೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ

Spread the loveಬೆಂಗಳೂರು: ಡಿಸೆಂಬರ್ 2 ರಿಂದ 11 ರವರೆಗೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ಅಧಿವೇಶನ ಕುರಿತು ವಿಧಾನಸಭೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ