ಯಾಣಿಕರ ಗಮನಕ್ಕೆ ರಾಜ್ಯದಲ್ಲಿ ಪ್ರಮುಖ ಎರಡು ರೈಲುಗಳು ತಾತ್ಕಾಲಿಕವಾಗಿ ರದ್ದಾಗಿದ್ದು, ಏಳು ರೈಲುಗಳ ಸಂಚಾರದಲ್ಲಿ ವ್ಯತ್ಯವವುಂಟಾಗಲಿದೆ.
ಅಕ್ಟೋಬರ್ 23 ರಿಂದ ನವೆಂಬರ್ 7 ರ ನಡುವೆ ಕೆಲ ರೈಲು ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಹಾಗೂ ಕಾಮಗಾರಿ ಹಿನ್ನೆಲೆಯಲ್ಲಿ 2 ಮೆಮು ರೈಲುಗಳನ್ನು 12 ದಿನಗಳ ಕಾಲ ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.
ತುಮಕೂರು ರೈಲು ನಿಲ್ದಾಣದ ಯಾರ್ಡ್ನಲ್ಲಿ ಪುನರಾಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಅಕ್ಟೋಬರ್ 23 ರಿಂದ ನವೆಂಬರ್ 7 ರ ನಡುವೆ ರೈಲು ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಬೆಂಗಳೂರು-ತುಮಕೂರು ನಡುವಿನ 2 ಮೆಮು ರೈಲುಗಳನ್ನು 12 ದಿನ ರದ್ದುಗೊಳಿಸಲಾಗಿದೆ.
ಜತೆಗೆ, ಶಿವಮೊಗ್ಗ, ಧಾರವಾಡ ಸೇರಿದಂತೆ ಹಲವು ಪ್ರಮುಖ ಎಕ್ಸ್ಪ್ರೆಸ್ ರೈಲುಗಳ ನಿರ್ಗಮನ ಸಮಯ ಮರುನಿಗದಿಪಡಿಸಲಾಗಿದ್ದು, ಇನ್ನು ಕೆಲವು ರೈಲುಗಳು ಮಾರ್ಗಮಧ್ಯೆ ತಡವಾಗಿ ಸಂಚರಿಸಲಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
2 ಮೆಮು ರೈಲುಗಳ ಸೇವೆಯನ್ನು ಒಟ್ಟು 12 ದಿನಗಳ ಕಾಲ ರದ್ದುಗೊಳಿಸಲಾಗುತ್ತದೆ. ಅಂದರೆ, ಅಕ್ಟೋಬರ್ 23ರಿಂದ 25ರವರೆಗೆ, ಅಕ್ಟೋಬರ್ 28ರಿಂದ ನವೆಂಬರ್ 1ರವರೆಗೆ ಹಾಗೂ ನವೆಂಬರ್ 4ರಿಂದ 7ರವರೆಗೆ ಈ ರೈಲುಗಳು ಸಂಚರಿಸುವುದಿಲ್ಲ.
ರೈಲು ಸಂಖ್ಯೆ 66572: ತುಮಕೂರು – ಕೆಎಸ್ಆರ್ ಬೆಂಗಳೂರು ಮೆಮು ರೈಲು.
ರೈಲು ಸಂಖ್ಯೆ 66571: ಕೆಎಸ್ಆರ್ ಬೆಂಗಳೂರು – ತುಮಕೂರು ಮೆಮು ರೈಲುಗಳು ರದ್ದಾಗಲಿವೆ.
ಈ ಕೆಳಗಿನ ರೈಲುಗಳ ಸಂಚಾರದಲ್ಲಿ ವ್ಯತ್ಯಯ;
ಅಕ್ಟೋಬರ್ 23ರಿಂದ 25ರವರೆಗೆ, ಅಕ್ಟೋಬರ್ 28ರಿಂದ ನವೆಂಬರ್ 1ರವರೆಗೆ ಹಾಗೂ ನವೆಂಬರ್ 4ರಿಂದ 7ರವರೆಗೆ ಕೆಳಕಂಡ ರೈಲುಗಳ ನಿರ್ಗಮನ ಸಮಯವನ್ನು ಮರುನಿಗದಿಪಡಿಸಲಾಗುತ್ತದೆ.
ರೈಲು ಸಂಖ್ಯೆ 20689 – ಯಶವಂತಪುರ – ಶಿವಮೊಗ್ಗ ಟೌನ್ ಎಕ್ಸ್ಪ್ರೆಸ್ : ಯಶವಂತಪುರದಿಂದ ಈ ರೈಲಿನ ನಿರ್ಗಮನವನ್ನು 75 ನಿಮಿಷಗಳ ಕಾಲ ವಿಳಂಬಗೊಳಿಸಲಾಗುತ್ತದೆ.
ರೈಲು ಸಂಖ್ಯೆ 12725 – ಕೆಎಸ್ಆರ್ ಬೆಂಗಳೂರು – ಧಾರವಾಡ ಎಕ್ಸ್ಪ್ರೆಸ್: ಕೆಎಸ್ಆರ್ ಬೆಂಗಳೂರಿನಿಂದ ಈ ರೈಲಿನ ನಿರ್ಗಮನವನ್ನು 30 ನಿಮಿಷಗಳ ಕಾಲ ವಿಳಂಬಗೊಳಿಸಲಾಗುತ್ತದೆ.
ಈ ರೈಲುಗಳ ಮಾರ್ಗಮಧ್ಯೆ ನಿಯಂತ್ರಣ
ರೈಲು ಸಂಖ್ಯೆ 20652 – ತಾಳಗುಪ್ಪ – ಕೆಎಸ್ಆರ್ ಬೆಂಗಳೂರು ಎಕ್ಸ್ಪ್ರೆಸ್: ಅಕ್ಟೋಬರ್ 23ರಿಂದ 25ರವರೆಗೆ, ಅಕ್ಟೋಬರ್ 28ರಿಂದ ನವೆಂಬರ್ 1ರವರೆಗೆ ಹಾಗೂ ನವೆಂಬರ್ 4ರಿಂದ 7ರವರೆಗೆ ಮಾರ್ಗಮಧ್ಯೆ 40 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
ರೈಲು ಸಂಖ್ಯೆ 66567 – ಕೆಎಸ್ಆರ್ ಬೆಂಗಳೂರು – ತುಮಕೂರು ಮೆಮು ರೈಲು: ಅಕ್ಟೋಬರ್ 23ರಿಂದ 25ರವರೆಗೆ, ಅಕ್ಟೋಬರ್ 28ರಿಂದ ನವೆಂಬರ್ 1ರವರೆಗೆ ಹಾಗೂ ನವೆಂಬರ್ 4ರಿಂದ 7ರವರೆಗೆ ಮಾರ್ಗಮಧ್ಯೆ 30 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
ರೈಲು ಸಂಖ್ಯೆ 17310 – ವಾಸ್ಕೋ ಡ ಗಾಮಾ – ಯಶವಂತಪುರ ಎಕ್ಸ್ಪ್ರೆಸ್: ಅಕ್ಟೋಬರ್ 22ರಿಂದ 24ರವರೆಗೆ, ಅಕ್ಟೋಬರ್ 27ರಿಂದ 31ರವರೆಗೆ ಹಾಗೂ ನವೆಂಬರ್ 3ರಿಂದ 6ರವರೆಗೆ ಮಾರ್ಗಮಧ್ಯೆ 15 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
ರೈಲು ಸಂಖ್ಯೆ 20676 – ಮೈಸೂರು – ಬೆಳಗಾವಿ ಎಕ್ಸ್ಪ್ರೆಸ್: ಅಕ್ಟೋಬರ್ 23ರಿಂದ 25ರವರೆಗೆ, ಅಕ್ಟೋಬರ್ 28ರಿಂದ ನವೆಂಬರ್ 1ರವರೆಗೆ ಹಾಗೂ ನವೆಂಬರ್ 4ರಿಂದ 7ರವರೆಗೆ ಮಾರ್ಗಮಧ್ಯೆ 15 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
ರೈಲು ಸಂಖ್ಯೆ 19667 – ಉದಯಪುರ ಸಿಟಿ – ಮೈಸೂರು ಎಕ್ಸ್ಪ್ರೆಸ್: ಅಕ್ಟೋಬರ್ 26 ಮತ್ತು ನವೆಂಬರ್ 2ರಂದು ಮಾರ್ಗಮಧ್ಯೆ 30 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
Laxmi News 24×7