Breaking News

ಸಿದ್ರಾಮಯ್ಯ, ಪರಮೇಶ್ವರ್ ವಿಡಿಯೋ ಬರಬಹುದು ಅಂತ 2024ರಲ್ಲೇ ರಮೇಶ್ ಜಾರಕಿಹೊಳಿ ಎಚ್ಚರಿಸಿದ್ರು: ಹೆಚ್‌ಡಿಕೆ

Spread the love

ಬೆಂಗಳೂರು: ರಾಜ್ಯದಲ್ಲಿ `ಸ್ಟಿಂಗ್ ಆಪರೇಷನ್’  ಕೋಲಾಹಲ ತಾರಕಕ್ಕೇರಿದೆ. ತನಿಖೆಗೆ ಆಗ್ರಹಿಸಿದ ಬೆನ್ನಲ್ಲೇ ಟಾರ್ಗೆಟ್ ಪಾಲಿಟಿಕ್ಸ್ ಶುರುವಾಗಿದೆ ಅಂತಾ ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ  ಬೆಂಕಿ ಉಗುಳಿದ್ದಾರೆ. ಮೂರನೇ ಕಣ್ಣಿಗೆ ಮೂಲವೇ ಮುಖ್ಯಮಂತ್ರಿ ಎಂದಿರುವ ಹೆಚ್‌ಡಿಕೆ, ಸಿಎಂ ಡಿಕೆಶಿಯೇ ಸ್ಟಿಂಗ್ ಸಾಮ್ರಾಟ್ ಅಂತಾ ದೂಷಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಎಚ್‌ಡಿಕೆ, ಸಿಎಂ ಡಿಕೆ ಶಿವಕುಮಾರ್ ವಿರುದ್ಧ ಸಾಲು ಸಾಲು ಬಾಂಬ್ ಸಿಡಿಸಿದ್ದಾರೆ. ನಾನು ಯಾವುದಕ್ಕೂ ಜಗ್ಗಲ್ಲ, ಬಗ್ಗಲ್ಲ ಎನ್ನುತ್ತಲೇ ಸಿಎಂಗೆ ಸವಾಲ್ ಎಸೆದಿದ್ದಾರೆ

ಸ್ಟಿಂಗ್ ಆಪರೇಷನ್ ಬೆನ್ನಲ್ಲೇ ಇಬ್ಬರು ಜೆಡಿಎಸ್ ಕಾರ್ಯಕರ್ತರು ಸಿಸಿಬಿ ಪೊಲೀಸರ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ರು. ಜೆಡಿಎಸ್ ಐಟಿ ಸೆಲ್‌ನ ಶಂಕರ್, ಕ್ಲರ್ಕ್ ಮೋಹನ್ ಸೇರಿದಂತೆ ಮೂವರನ್ನು ವಿಚಾರಣೆಗೊಳಪಡಿಸಲಾಯ್ತು. ಅಜ್ಞಾತ ಸ್ಥಳದಲ್ಲಿ ಡಿಸಿಪಿ ರ‍್ಯಾಂಕ್ ಅಧಿಕಾರಿಯಿಂದ ವಿಚಾರಣೆ ನಡೆಸಿದ್ದು, ಸ್ಟಿಂಗ್ ಹಿಂದಿನ ಸೂತ್ರಧಾರಿಯ ಪತ್ತೆಗೆ ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ. ಸಿದ್ದರಾಮಯ್ಯ ದೂರಿನ ಅನ್ವಯ ದಾಖಲಾಗಿದ್ದ ಎಫ್‌ಐಆರ್ ಹಿನ್ನೆಲೆ ತನಿಖೆ ನಡೆಸಿದ್ದು, ಜೆಡಿಎಸ್ ಕಾರ್ಯಕರ್ತರೇ ಟಾರ್ಗೆಟ್ ಯಾಕೆ ಅಂತಾ ಕೇಂದ್ರ ಸಚಿವ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

2024ರಲ್ಲೇ ಮಹಾನಾಯಕನ ಬಗ್ಗೆ ವಾರ್ನಿಂಗ್; ನಿರ್ಲಕ್ಷ್ಯ
ಇನ್ನು, ಸ್ಟಿಂಗ್ ಆಪರೇಷನ್‌ ಕಳ್ಳಾಟ ಇಂದು ನಿನ್ನೆಯದ್ದಲ್ಲ. ಕಳೆದ 2024ರ ಆಗಸ್ಟ್ 2ರಂದೇ ರಮೇಶ್ ಜಾರಕಿಹೊಳಿ ಎಚ್ಚರಿಕೆ ಕೊಟ್ಟಿದ್ದರು. ಪ್ರಜ್ವಲ್ ರೇವಣ್ಣ ನಂತರದಲ್ಲಿ ಸಿದ್ದರಾಮಯ್ಯ, ಡಾ.ಜಿ ಪರಮೇಶ್ವರ್ ಅವರ ವಿಡಿಯೋಗಳೂ ಬರಬಹುದು. ಆ ಮಹಾನಾಯಕನನ್ನ ಈಗಲೇ ಇಳಿಸಿ ಅಂತ ರಮೇಶ್ ಜಾರಕಿಹೋಳಿ ಹೇಳಿದ್ರು. ವಿಡಿಯೋ ಪ್ರಕರಣಕ್ಕೆ ಇತಿಶ್ರೀ ಹಾಡಿ ಅಂತ ಎಚ್ಚರಿಕೆಯನ್ನೂ ಕೊಟ್ಟಿದ್ದರು. ಆದರೆ, ಅಂದು ನಿರ್ಲಕ್ಷ್ಯ ಮಾಡಿದ್ದಕ್ಕೆ ಇಂದು ಈ ಪರಿಸ್ಥಿತಿ ಎದುರಾಗಿದೆ ಅಂತಾ ಕುಮಾರಸ್ವಾಮಿ ಕಿಡಿಕಾರಿದರು.

ಇದೇ ವೇಳೆ ಯಾವುದೋ ಮಹಿಳೆ ಮುಖಕ್ಕೆ ಟವಲ್ ಕಟ್ಟಿ ಛೂ ಬಿಟ್ರೆ ಬಲೆಗೆ ಬೀಳೋಕೆ ನನ್ನೇನು ರೇವಣ್ಣ ಅಂದುಕೊಂಡ್ರಾ. ಅವರನ್ನೇನೋ 5 ದಿನ ಜೈಲಿಗೆ ಕಳುಹಿಸಿದ್ರಲ್ಲಪ್ಪ. ನನ್ನನ್ನೂ ಹಾಗೇ ಅಂದುಕೊಂಡಿದ್ದೀರಾ ಎಂದು ಕುಟುಕಿದರು.


Spread the love

About Laxminews 24x7

Check Also

ಸಿಜೆಪಿಯಿಂದ ತಿರಂಗಾ ಯಾತ್ರೆ: ದೆಹಲಿಯಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ಮಾರ್ಗಸೂಚಿ

Spread the loveನವದೆಹಲಿ: ಅ.16ರಂದು ಸಿಜೆಪಿಯು ಕನ್ನಾಟ್ ಪ್ಲೇಸ್‌ನ ಸೆಂಟ್ರಲ್ ಪಾರ್ಕ್‌ನಲ್ಲಿ ತಿರಂಗಾ ಯಾತ್ರೆ ಹಮ್ಮಿಕೊಂಡಿರುವ ಹಿನ್ನೆಲೆ ದೆಹಲಿ ಪೊಲೀಸರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ