ನವದೆಹಲಿ: ಅ.16ರಂದು ಸಿಜೆಪಿಯು ಕನ್ನಾಟ್ ಪ್ಲೇಸ್ನ ಸೆಂಟ್ರಲ್ ಪಾರ್ಕ್ನಲ್ಲಿ ತಿರಂಗಾ ಯಾತ್ರೆ ಹಮ್ಮಿಕೊಂಡಿರುವ ಹಿನ್ನೆಲೆ ದೆಹಲಿ ಪೊಲೀಸರು ಟಾಫ್ರಿಕ್ ತಪ್ಪಿಸಲು ಸಂಚಾರಿ ಸಲಹೆ ಬಿಡುಗಡೆ ಮಾಡಿದ್ದಾರೆ.
`ಲೆಹ್ರಾ ದೋ ತಿರಂಗಾ’ ಘೋಷಣೆಯಡಿ ಸೆಂಟ್ರಲ್ ಪಾರ್ಕ್ನಲ್ಲಿ ಸಭೆ ನಡೆಸುವುದರೊಂದಿಗೆ ರಾಷ್ಟ್ರಧ್ವಜವನ್ನು ಹಾರಿಸುವಂತೆ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಕಾರ್ಯಕರ್ತರು ಮತ್ತು ಇತರ ಸಂಘಟನೆಗಳು ಕರೆ ನೀಡಿವೆ. ಹೀಗಾಗಿ ಇಂದು (ಅ.16) ಮಧ್ಯಾಹ್ನ 3 ಗಂಟೆಯಿಂದ ಒಟ್ಟು 21 ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಬಹುದು. ಹೀಗಾಗಿ ಪರಿಸ್ಥಿತಿಗೆ ತಕ್ಕಂತೆ ವಾಹನಗಳ ಸಂಚಾರ ಮಾರ್ಗ ಬದಲಾವಣೆ ಮಾಡಲಾಗುತ್ತದೆ ಎಂದು ದೆಹಲಿ ಸಂಚಾರಿ ಪೊಲೀಸರು ತಿಳಿಸಿದ್ದಾರೆ.
ಈ ಕೆಳಗಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಸಾಧ್ಯತೆ:
ಸಂಸದ್ ಮಾರ್ಗ್, ಬಾಬಾ ಖರಕ್ ಸಿಂಗ್ ಮಾರ್ಗ್, ಶಹೀದ್ ಭಗತ್ ಸಿಂಗ್ ಮಾರ್ಗ್, ಪಂಚಕುಯಿಯಾನ್ ರಸ್ತೆ, ಬಸಂತ್ ಲೇನ್, ಚೆಲ್ಮ್ಸ್ಫೋರ್ಡ್ ರಸ್ತೆ, ಮಿಂಟೋ ರಸ್ತೆ, ಬಾರಾಖಂಬಾ ರಸ್ತೆ ಮತ್ತು ಕಸ್ತೂರಿಬಾ ಗಾಂಧಿ ಮಾರ್ಗ್. ಜನಪಥ್, ರೈಲ್ ಭವನ, ರಫಿ ಮಾರ್ಗ್, ಸಿ-ಹೆಕ್ಸಾಗನ್, ಮಂಡಿ ಹೌಸ್, ಪಟೇಲ್ ಚೌಕ್, ವಿಂಡ್ಸರ್ ಪ್ಲೇಸ್, ಗೋಲ್ ದಾಕ್ ಖಾನಾ, ಅಶೋಕ್ ರಸ್ತೆ, ಟಾಲ್ಸ್ಟಾಯ್ ಮಾರ್ಗ್ ಮತ್ತು ಸಿಕಂದರಾ ರಸ್ತೆ. ಈ ರಸ್ತೆಗಳಲ್ಲಿ ಸಂಚರಿಸುವುದನ್ನು ತಪ್ಪಿಸಲು ಸಂಚಾರಿ ಪೊಲೀಸರು ಸೂಚನೆ ನೀಡಿದ್ದಾರೆ.
ಸಂಚಾರಿ ಪೊಲೀಸರು ಕೆಲ ಪ್ರಮುಖ ಸಲಹೆಗಳನ್ನು ಬಿಡುಗಡೆ ಮಾಡಿದ್ದಾರೆ. ಹೊರಡುವ ಮುನ್ನ ರಸ್ತೆ ಸ್ಥಿತಿಗತಿಗಳನ್ನು ಪರಿಶೀಲಿಸಿ. ದೆಹಲಿ ಟ್ರಾಫಿಕ್ ಪೊಲೀಸ್ ಅಧಿಕೃತ ವೆಬ್ಸೈಟ್ ಅಥವಾ ಅವರ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿಯನ್ನು ಪಡೆಯಬಹುದು. ತುರ್ತು ಸಹಾಯಕ್ಕಾಗಿ ದೆಹಲಿ ಟ್ರಾಫಿಕ್ ಪೊಲೀಸ್ ಸಹಾಯವಾಣಿ ಸಂಖ್ಯೆ 1095 ಅಥವಾ 011-25844444ಗೆ ಕರೆ ಮಾಡಬಹುದು ಎಂದು ತಿಳಿಸಿದ್ದಾರೆ.
Laxmi News 24×7