Breaking News

ಆರ್ಕೆಸ್ಟ್ರಾ ನೋಡ್ತಿದ್ದ ವೇಳೆ ದುರಂತ – ಲೈಟ್ ಕಂಬ ಬಿದ್ದು ಓರ್ವ ಸಾವು, ಮತ್ತೋರ್ವ ಗಂಭೀರ

Spread the love

ಬೆಂಗಳೂರು: ರಸ್ತೆ ಬದಿ ಲೈಟ್ ಕಂಬ  ಬಿದ್ದು ನೇಪಾಳ ಮೂಲದ ಒಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನಲ್ಲಿ  ನಡೆದಿದೆ.

ಶುಕ್ರವಾರ ನಗರದ ಮಾರತ್ತಹಳ್ಳಿಯ ಸಂಜಯನಗರದಲ್ಲಿ ಗಣೇಶ ವಿಸರ್ಜನೆಗೆ ಮೆರವಣಿಗೆ ನಡೆಯುತ್ತಿತ್ತು. ಈ ವೇಳೆ ಆರ್ಕೆಸ್ಟ್ರಾ ಕೂಡ ನಡೆಯುತ್ತಿತ್ತು. ರಾತ್ರಿ ಹನ್ನೊಂದು ಗಂಟೆ ವೇಳೆಯಲ್ಲಿ ಜನ ರಸ್ತೆಯ ಪಕ್ಕದಲ್ಲಿ ನಿಂತು ನೋಡುತ್ತಿದ್ದರು. ಈ ವೇಳೆ ಏಕಾಏಕಿ ಕಂಬ ಬಿದ್ದು, ಅವಘಡ ಸಂಭವಿಸಿದೆ.

ಲೈಟ್ ಕಂಬ ಹಳೆಯದಾಗಿದ್ದು, ಕರೆಂಟ್ ಕನೆಕ್ಷನ್ ಇರಲಿಲ್ಲ. ಕಂಬ ಮಾತ್ರ ಹಾಗೇ ಬಿಡಲಾಗಿತ್ತು. ಜಿಬಿಎ ಅಧಿಕಾರಿಗಳಿಗೆ ತುಂಬಾ ದಿನದಿಂದ ತೆರವು ಮಾಡುವಂತೆ ಮನವಿ ಮಾಡಿದ್ರೂ, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು ಎನ್ನಲಾಗಿದೆ. ಸದ್ಯ ಸಾವನ್ನಪ್ಪಿದ್ದ ವ್ಯಕ್ತಿ ನೇಪಾಳದವನಾಗಿದ್ದು, ಆತನ ಗುರುತು ಪತ್ತೆ ಮಾಡಲು ಮುಂದಾಗಿದ್ದಾರೆ. ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.


Spread the love

About Laxminews 24x7

Check Also

ರಾಜ್ಯದಲ್ಲಿ ಬರ – 177 ತಾಲೂಕುಗಳಲ್ಲಿ 46,324 ಕೋಟಿ ಬೆಳೆ ನಷ್ಟ , 7,142 ಕೋಟಿ ನೆರವಿಗೆ ಮನವಿ

Spread the loveಬೆಂಗಳೂರು: ರಾಜ್ಯದ 240 ತಾಲೂಕುಗಳ ಪೈಕಿ 217 ತಾಲೂಕುಗಳನ್ನ ಬರಪೀಡಿತ  ಎಂದು ಘೋಷಿಸಲಾಗಿದ್ದು, ಬರ ಪರಿಸ್ಥಿತಿ ಹಿನ್ನೆಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ