Breaking News

45 ಲಕ್ಷ ವೆಚ್ಚದ ಮದುವೆ, 116.64 ಗ್ರಾಂ ಚಿನ್ನ ಗಿಫ್ಟ್‌; ಆದರೂ ತಪ್ಪದ ವರದಕ್ಷಿಣೆ ಕಿರುಕುಳ – ಟೆಕ್ಕಿ ಆತ್ಮಹತ್ಯೆ

Spread the love

ಮುಂಬೈ: 45 ಲಕ್ಷ ವೆಚ್ಚದಲ್ಲಿ ಮದುವೆ ಮಾಡಿಕೊಟ್ಟು, 116.64 ಗ್ರಾಂ ಚಿನ್ನ ಉಡುಗೊರೆಯಾಗಿ ನೀಡಿದ್ರೂ, ಕಾರು ಖರೀದಿಗೆ 5 ಲಕ್ಷ ರೂ. ವರದಕ್ಷಿಣೆಗೆ  ಪತಿ ಪೀಡಿಸಿದ್ದಕ್ಕೆ 4 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಪುಣೆಯ  ಟೆಕ್ಕಿಯೊಬ್ಬರು  ಆತ್ಮಹತ್ಯೆಗೆ ಶರಣಾಗಿದ್ದಾರೆ.

ವೈಷ್ಣವಿ ಓಂಕಾರ್ ಗಿಸ್ರೆ (24) ಆತ್ಮಹತ್ಯೆಗೆ ಶರಣಾದ ಮಹಿಳೆ. ಭಾರೀ ವೆಚ್ಚದಲ್ಲಿ ಮದುವೆ ಮಾಡಿಕೊಟ್ಟರೂ, ಚಿನ್ನ ನೀಡಿದರೂ ಕಾರು ಖರೀದಿಸಲು ಇನ್ನೂ 5 ಲಕ್ಷ ರೂ. ನೀಡುವಂತೆ ಪತಿ ಮತ್ತು ಅತ್ತೆ-ಮಾವ ಒತ್ತಾಯಿಸುತ್ತಿದ್ದರು. ಇದೇ ಕಾರಣಕ್ಕೆ ಸೀಲಿಂಗ್‌ ಫ್ಯಾನ್‌ಗೆ ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಪುರಂದರ ತಾಲೂಕಿನ ನಿವಾಸಿಯಾಗಿರುವ ಮಹಿಳೆಯ ತಂದೆ ಪ್ರವೀಣ್ ರಘುನಾಥ್ ಜರಂಡೆ (51) ಮಗಳ ಆತ್ಮಹತ್ಯೆ ಬಗ್ಗೆ ದೂರು ದಾಖಲಿಸಿದ್ದಾರೆ. ದೂರಿನಲ್ಲಿ, ವೈಷ್ಣವಿ ಅವರು ಈ ವರ್ಷ ಮೇ 9 ರಂದು ಓಂಕಾರ್ ಸಂಜಯ್ ಗಿಸ್ರೆ (28) ಅವರನ್ನು ವಿವಾಹವಾಗಿದ್ದರು. ಮದುವೆಗೆ ಸುಮಾರು 45 ಲಕ್ಷ ರೂ. ಖರ್ಚು ಮಾಡಿದ್ದಾಗಿ ಮತ್ತು 10 ತೊಲೆ ಚಿನ್ನವನ್ನು ಉಡುಗೊರೆಯಾಗಿ ನೀಡಿದ್ದಾಗಿ ಉಲ್ಲೇಖಿಸಿದ್ದಾರೆ.

ಮದುವೆ ನಂತರ ಕಾರು ಖರೀದಿಗೆ ಹಣ ತರುವಂತೆ ವೈಷ್ಣವಿಗೆ ಪದೇ ಪದೇ ಒತ್ತಾಯಿಸಲಾಗುತ್ತಿತ್ತು. ಆಕೆಗೆ ಮಾನಸಿಕ ಮತ್ತು ದೈಹಿಕ ಕಿರುಕುಳವನ್ನೂ ನೀಡಲಾಗುತ್ತಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪೊಲೀಸರು ಮಹಿಳೆಯ ಪತಿ, ಮಾವ ಸಂಜಯ್ ಮಹಾದೇವ್ ಗಿಸ್ರೆ (49) ಮತ್ತು ಅತ್ತೆ ರೂಪಾಲಿ ಸಂಜಯ್ ಗಿಸ್ರೆ (42) ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.


Spread the love

About Laxminews 24x7

Check Also

ಸಿಎಂ ಆಗಿದ್ದಾಗಲೇ ನೈಸ್‌ ರದ್ದು ಮಾಡಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ: ಹೆಚ್‌ಡಿಕೆಗೆ ಕೃಷ್ಣ ಬೈರೇಗೌಡ ತಿರುಗೇಟು

Spread the loveಬೆಂಗಳೂರು: ಹೆಚ್‌ಡಿ ಕುಮಾರಸ್ವಾಮಿ ಅವರೇ ಈ ಹಿಂದೆ ಮುಖ್ಯಮಂತ್ರಿಯಾಗಿದ್ದರು. ಪೆನ್ನು-ಪೇಪರ್ ಕೈಯಲ್ಲಿದ್ದಾಗಲೇ ನೈಸ್‌ ಯೋಜನೆಯನ್ನು  ರದ್ದು ಮಾಡಿದ್ದರೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ