Breaking News

ಮಹಿಳಾ ಮೀಸಲಾತಿ ಸನ್ನಿಹಿತ – ತುಮಕೂರಿನಲ್ಲಿ ಪುತ್ರಿಯರನ್ನು ರಾಜಕೀಯ ಅಖಾಡಕ್ಕೆ ಅಣಿಗೊಳಿಸುತ್ತಿರುವ ನಾಯಕರು

Spread the love

ತುಮಕೂರು: ಕೇಂದ್ರದ ಮಹತ್ವಾಕಾಂಕ್ಷೆಯ ಮಹಿಳಾ ಮೀಸಲಾತಿ ಮಸೂದೆ ಕಾನೂನಾಗುವ ಎಲ್ಲಾ ಲಕ್ಷಣ ಇದೆ ಎಂಬ ಸುಳಿವು ಸಿಕ್ಕಿದೆ. ಇದರಿಂದ ಅಲರ್ಟ್ ಆದ ತುಮಕೂರು ಜಿಲ್ಲೆಯ ರಾಜಕೀಯ ನಾಯಕರುಗಳು ತಮ್ಮ ಪುತ್ರಿಯರನ್ನು ರಾಜಕೀಯ ಚಟುವಟಿಕೆಯಲ್ಲಿ ಸಕ್ರಿಯಗೊಳಿಸುತಿದ್ದಾರೆ.

ವಿಪಕ್ಷಗಳ ಅಸಹಕಾರದಿಂದ ಮೊದಲ ಪ್ರಯತ್ನದಲ್ಲಿ ಕೇಂದ್ರದ ಮಹಿಳಾ ರಾಜಕೀಯ ಮೀಸಲಾತಿ ಮಸೂದೆ ಸೋತಿರಬಹುದು. ಆದರೂ ಮೋದಿ ಮತ್ತು ಅಮಿತ್ ಶಾ ಟೀಂ ಈ ಕಾನೂನನ್ನೂ ರೂಪಿಸಿಯೇ ತಿರುತ್ತಾರೆ ಎಂಬ ಅಚಲ ವಿಶ್ವಾಸ ಬಿಜೆಪಿಗಿಂತ ಕಾಂಗ್ರೆಸ್ ನಾಯಕರಲ್ಲೇ ಹೆಚ್ಚಿದೆ. ರಾಜಣ್ಣ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರುಗಳು ತಮ್ಮ ಮಡದಿಯರನ್ನು, ಪುತ್ರಿಯರನ್ನು ಈಗಿನಿಂದಲೇ ಸಿದ್ಧಗೊಳಿಸುತ್ತಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಇಬ್ಬರು ಪ್ರಭಾವಿ ನಾಯಕರು ತಮ್ಮ ಪುತ್ರಿಯರನ್ನು ಈಗಾಲೇ ರಾಜಕೀಯ ಚಟುವಟಿಕೆಯಲ್ಲಿ ಸಕ್ರಿಯಗೊಳಿಸಿದ್ದಾರೆ.

ಮೊದಲನೆಯಾದಾಗಿ ಮಾಜಿ ಸಚಿವ ಕೆ.ಎನ್.ರಾಜಣ್ಣ ತಮ್ಮ ಪುತ್ರಿ ರಶ್ಮಿ ಅವರಿಗೆ ರಾಜಕೀಯ ಪಟ್ಟುಗಳನ್ನು ಕಲಿಸುತ್ತಿದ್ದಾರೆ. ತಮ್ಮ ಮುದ್ದಿನ ಮಗಳಿಗೆ ಪ್ರಮುಖ ರಾಜಕೀಯ ನಾಯಕರ ಪರಿಚಯ ಮಾಡಿಕೊಡುತ್ತಿರುವ ರಾಜಣ್ಣ ರಾಜಕೀಯ ನಕ್ಷೆಯನ್ನು ಈಗಾಲೇ ಹಾಕಿ ಕೊಟ್ಟಿದ್ದಾರೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನಡೆಯುವ ಎಲ್ಲಾ ರಾಜಕೀಯ ವೇದಿಕೆ ಮೇಲೆ ರಶ್ಮಿ ರಾಜಣ್ಣ ವಿರಾಜಮಾನರಾಗುತ್ತಿರೋದು ರಾಜಕೀಯ ಪಡಸಾಲೆಯಲ್ಲಿ ಚರ್ಚೆಯ ವಿಷಯವಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ ಪ್ರಮುಖ ನಾಯಕರ ಮಸ್ತಕದಲ್ಲಿ ರಶ್ಮಿ ರಾಜಣ್ಣ ಈಗಾಲೇ ಅಚ್ಚೊತ್ತಿದ್ದಾರೆ. ತಮ್ಮ ಪ್ರೀತಿಯ ಮಗಳನ್ನು ಚುನಾವಣೆ ನಿಲ್ಲಿಸುವ ಇಂಗಿತವನ್ನು ರಾಜಣ್ಣ ಈಗಾಲೇ ಸಿದ್ದರಾಮಯ್ಯರ ಬಳಿ ಹೇಳಿಕೊಂಡಿದ್ದಾರೆ. ಅಲ್ಲದೇ ಕೇಂದ್ರದ ಮಹಿಳಾ ಮೀಸಲಾತಿ ಮಸೂದೆ ಬಂದೇ ಬರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ ರಾಜಣ್ಣ.

ಇನ್ನೊಂದು ಕಡೆ ಬಿಜೆಪಿಯ ಫೈರ್ ಬ್ರಾಂಡ್ ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ ತಮ್ಮ ಪುತ್ರಿ ಐಶ್ವರ್ಯರನ್ಜು ಅಣಿಗೊಳಿಸುತಿದ್ದಾರೆ. ತುಮಕೂರು ಗ್ರಾಮಾಂತರ ಕ್ಷೇತ್ರ ಸೇರಿದಂತೆ ಜಿಲ್ಲೆಯಲ್ಲಿ ನಡೆಯುವ ಬಿಜೆಪಿ ಕಾರ್ಯಕ್ರಮಗಳು, ಹಿಂದೂ ಸಂಘಟನೆಗಳ ಉತ್ಸವ, ಮೆರವಣಿಗೆಯಲ್ಲಿ ಐಶ್ವರ್ಯ ಗೌಡ ಸಕ್ರಿಯವಾಗುತಿದ್ದಾರೆ. ಬಿಜೆಪಿಯಲ್ಲಿ ಜಿಲ್ಲಾ ಮಹಿಳಾ ಕಾರ್ಯಕಾರಿಣಿಯ ಸದಸ್ಯೆಯಾಗಿರುವ ಐಶ್ವರ್ಯ ನಾಯಕತ್ವದ ಗುಣ ಹೊಂದಿದ್ದಾರೆ. ಮಗದೊಂದು ಕಡೆ ಮಾಜಿ ಎಮ್‌ಎಲ್‌ಸಿ, ಸಜ್ಜನ ವ್ಯಕ್ತಿ ಡಾ. ಹುಲಿನಾಯ್ಕರ್ ಪುತ್ರಿ ಅಂಬಿಕಾ ಕೂಡ ಮುಂಚೂಣಿಯಲ್ಲಿ ಇದ್ದಾರೆ. ಈಗಾಲೇ ರಾಜ್ಯ ಬಿಜೆಪಿ ಮತ್ತು ಜಿಲ್ಲಾ ಬಿಜೆಪಿಯಲ್ಲಿ ವಿವಿಧ ಹುದ್ದೆ ನಿಭಾಯಿಸಿ ಸೈ ಎನಿಸಿಕೊಂಡಿರುವ ಅಂಬಿಕಾ ಹುಲಿನಾಯ್ಕರ್ ರಾಜ್ಯ ನಾಯಕರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಮೂವರೂ ಯುವ ಮಹಿಳಾ ಮಣಿಗಳು ಉನ್ನತ ವ್ಯಾಸಾಂಗ ಮಾಡಿದವರು. ಐಶ್ವರ್ಯ ಗೌಡ ಯು.ಎಸ್.ನಲ್ಲಿ ಎಮ್.ಬಿ.ಎ ಹಾಗೂ ಎಮ್ ಎಸ್ ಉನ್ನತ ಪದವಿ ಮಾಡಿದ್ರೆ ಪೊಲೀಸ್ ಇಲಾಖೆಯ ಕೆಎಸ್ಪಿಎಸ್ ಅಧಿಕಾರಿಯನ್ನು ವರಿಸಿದ್ದಾರೆ. ಹಾಗೇ ತಂದೆ ಸುರೇಶ್ ಗೌಡರಂತೆ ಹೋರಾಟದ ಮನೋಭಾವ, ಮುನ್ನುಗ್ಗುವ ಛಾತಿ ಮತ್ತು ಲೀಡರ್ ಶಿಪ್ ಕ್ವಾಲಿಟಿ ಹೊಂದಿದ್ದಾರೆ. ಅದೇ ರೀತಿ ರಶ್ಮಿ ರಾಜಣ್ಣ ಅವರು, ಎಲ್‌ಎಲ್‌ಎಮ್ ಪದವಿ ಮುಗಿಸಿ ರಾಜ್ಯದ ಐಪಿಎಸ್ ಅಧಿಕಾರಿಯ ಜೊತೆ ವಿವಾಹವಾಗಿದ್ದಾರೆ. ನೇರ ಮತ್ತು ನಿಷ್ಠುರವಾದಿಯಾಗಿರುವ ತಂದೆ ರಾಜಣ್ಣ ರಶ್ಮಿ ಅವರ ಸಲಹೆ ಯಾವತ್ತೂ ತಳ್ಳಿಹಾಕಿದೋರಲ್ಲ. ಸದಾ ನಗು ಮೊಗದ ರಶ್ಮಿ ಅಷ್ಟೇ ಶಾಂತ ಸ್ವರೂಪಿ ಕೂಡ. ಎಲ್ಲರೊಂದಿಗೆ ಬೆರೆಯುವ ತಮ್ಮ ಗುಣದಿಂದ ರ ರಶ್ಮಿ ರಾಜಣ್ಣ ಜನರನ್ನು ಸೂಜಿಗಲ್ಲಿನಂತೆ ಸೆಳೆದಿದ್ದಾರೆ.

ಹಾಗೇ ಇನ್ನೋರ್ವ ಯುವ ಮಹಿಳಾ ಲೀಡರ್ ಅಂಬಿಕಾ ಹುಲಿನಾಯ್ಕರ್ ಹಲವು ಪದವಿ ಮುಗಿಸಿ ಮುಂಚೂಣಿಯಲ್ಲಿದ್ದಾರೆ. ಬಿ.ಇ, ಎಲ್‌ಎಲ್‌ಬಿ, ಎಂಬಿಎ ವ್ಯಾಸಾಂಗ ಮಾಡಿರುವ ಅಂಬಿಕಾ ಹುಲಿನಾಯ್ಕರ್ ತಂದೆ ಅವರಂತೆ ಸೌಮ್ಯ ಸ್ವಭಾವದವರಾಗಿದ್ದಾರೆ. ಕಾರ್ಯ ನಿಷ್ಠೆ ಹೊಂದಿರುವ ಅಂಬಿಕಾ ಬಿಜೆಪಿಯಲ್ಲಿ ತಮ್ಮದೇ ಸ್ಥಾನ ಪಡೆದಿದ್ದಾರೆ. ಮಹಿಳಾ ಮೀಸಲಾತಿ ವಿಚಾರ ಹೊಸ ಭರವಸೆ ಮೂಡಿಸಿದ್ದು, ಜಿಲ್ಲೆಯ ಮಹಿಳಾ ಮಣಿಗಳು ಅಧಿಕಾರದ ಚುಕ್ಕಾಣಿ ಹಿಡಿಯಲು ಅಣಿಯಾಗುತ್ತಿದ್ದಾರೆ.


Spread the love

About Laxminews 24x7

Check Also

ಲವ್ವರ್‌ ಮದುವೆಯಾಗಲು 21 ವಯಸ್ಸಾಗುವವರೆಗೆ ಕಾಯುವಂತೆ ಹೇಳಿದ ತಂದೆಯನ್ನೇ ಗುಂಡಿಕ್ಕಿ ಕೊಂದ 18 ವರ್ಷದ ಪುತ್ರ

Spread the loveಚಂಡೀಗಢ: ನಿನಗಿನ್ನೂ 18 ವರ್ಷ. ನಿನ್ನ ಲವ್ವರ್‌ನ ಮದುವೆ ಆಗೋಕೆ 21 ವಯಸ್ಸಾಗುವವರೆಗೆ ಕಾಯಿ ಎಂದು ಬುದ್ದಿಮಾತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ