Breaking News

ಆಸ್ತಿಗಾಗಿ ತಮ್ಮನನ್ನೇ ಚಾಕು ಇರಿದು ಹತ್ಯೆಗೈದ ಅಣ್ಣ

Spread the love

ಹಾಸನ: ಸಹೋದರರ ನಡುವೆ ಜಮೀನಿಗಾಗಿ ನಡೆದ ಜಗಳ ತಮ್ಮನ ಕೊಲೆಯಲ್ಲಿ ಅಂತ್ಯವಾಗಿದ ಘಟನೆ ಬೇಲೂರು ತಾಲೂಕಿನ ಸೋಂಪುರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರಘು (44) ಅಣ್ಣನಿಂದಲೇ ಕೊಲೆಯಾದ ವ್ಯಕ್ತಿ. ದೇವರಾಜ್ (46) ಕೊಲೆಗೈದಆರೋಪಿಯಾಗಿದ್ದಾನೆ. ಸೆ.24 ರಂದು ಜಮೀನು ವಿವಾದ ಹಾಗೂ ನ್ಯಾಯಬೆಲೆ ಅಂಗಡಿಯಿಂದ ಪಡಿತರ ತಂದ ವಿಚಾರಕ್ಕೆ ಸಹೋದರರ ನಡುವೆ ಜಗಳ ನಡೆದಿತ್ತು.

ಜಗಳ ವಿಕೋಪಕ್ಕೆ ತಿರುಗಿ ತಮ್ಮ ರಘುಗೆ ಅಣ್ಣ ದೇವರಾಜ್ ಚಾಕುವಿನಿಂದ ಇರಿದಿದ್ದ. ತೀವ್ರವಾಗಿ ಗಾಯಗೊಂಡಿದ್ದ ರಘು ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ರಘು ಸಾವನ್ನಪ್ಪಿದ್ದಾನೆ.

ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.


Spread the love

About Laxminews 24x7

Check Also

ದೇಸೂರು ಶಾಲೆಗೆ 5 ಎಕರೆ ಜಮೀನು ಕೊಡಿಸಲು ಪ್ರಯತ್ನ: ಲಕ್ಷ್ಮೀ ಹೆಬ್ಬಾಳಕರ್

Spread the loveಬೆಳಗಾವಿ: ದೇಸೂರು ಗ್ರಾಮದ ಸರ್ಕಾರಿ ಆದರ್ಶ ಪೂರ್ವ ಪ್ರಾಥಮಿಕ ಮರಾಠಿ ಶಾಲೆಯ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದ ಶಾಸಕಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ