Breaking News

ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಕಣ್ಣೀರಿಡುತ್ತಾ ವಿಷ ಕುಡಿದ ಪತಿ

Spread the love

ಹಾಸನ: ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ವ್ಯಕ್ತಿಯೊಬ್ಬ ವಿಡಿಯೋ ಮಾಡಿಟ್ಟು ವಿಷ ಕುಡಿದು ಆತ್ಮಹತ್ಯೆಗೆ ಶರಣಾದ ಘಟನೆ ಚನ್ನರಾಯಪಟ್ಟಣ  ತಾಲೂಕಿನ ಹಿರಿಸಾವೆಯಲ್ಲಿ ನಡೆದಿದೆ.

ಬೆಳಗಿಹಳ್ಳಿ ಗ್ರಾಮದ ದೊರೆ (27) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಈತ ತಿಪಟೂರು ತಾಲೂಕಿನ ನೊಣವಿನಕೆರೆ ಗ್ರಾಮದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಕಳೆದ 15 ದಿನಗಳ ಹಿಂದೆ ಪತ್ನಿ ಮನೆ ಬಿಟ್ಟು ತವರು ಮನೆ ಸೇರಿದ್ದಳು ಎಂದು ತಿಳಿದುಬಂದಿದೆ.

ದೊರೆ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ವಿಡಿಯೋ ಮಾಡಿಟ್ಟಿದ್ದು, ಅದರಲ್ಲಿ ಪತ್ನಿಗೆ ಪರಪುರುಷನ ಜೊತೆ ಅಕ್ರಮ ಸಂಬಂಧ ಇದೆ ಎಂದು ಆರೋಪಿಸಿದ್ದಾನೆ. ಈ ವಿಚಾರ ಆಕೆಯ ಪೋಷಕರಿಗೆ ತಿಳಿದ್ದರೂ, ಮಗಳ ಪರವಾಗಿ ಮಾತನಾಡುತ್ತಿದ್ದರು. ನಾನು ಪ್ರೀತಿಯಿಂದ ನೋಡಿಕೊಳ್ಳುತ್ತಿದೆ. ಆದರೂ ಆಕೆ ನನಗೆ ದ್ರೋಹ ಬಗೆದಿದ್ದಾಳೆ. ನನ್ನ ಮೇಲೆ ಮಾಟ-ಮಂತ್ರ ಮಾಡಿಸಿದ್ದಾಳೆ ಎಂದು ಆರೋಪಿಸಿದ್ದಾನೆ.

ಪೊಲೀಸರು ವಿಡಿಯೋ ಸಾಕ್ಷ್ಯದ ಆಧಾರದಲ್ಲಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ನಾನು ಕರ್ನಾಟಕ ಪೊಲೀಸ್‌ಗೆ ಹೇಳ್ತಾ ಇದ್ದೀನಿ, ಈ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಬೇಡಿ. ನನ್ನ ಮಾತು ಕೇಳಿ, ಅವಳ ಫೋನ್ ರೆಕಾರ್ಡಿಂಗ್ ತಗೊಳಿ, ಅವಳನ್ನ ಮಾತ್ರ ಬಿಡ್ಬೇಡಿ. ನನ್ನಂತ ಮುಗ್ಧ ಮನಸ್ಸಿನವನಿಗೆ ಮೋಸ ಮಾಡಿದ್ದಾಳೆ. ಈ ವಿಷಯದಲ್ಲಿ ಪೊಲೀಸ್ ಮೇಲೆ ನಂಬಿಕೆ ಇದೆ ಎಂದು ಕಣ್ಣೀರಿಡುತ್ತಾ ವಿಡಿಯೋದಲ್ಲಿ ಹೇಳಿದ್ದಾನೆ. ಸೆಲ್ಪಿ ವಿಡಿಯೋ ಮಾಡಿದ ನಂತರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.


Spread the love

About Laxminews 24x7

Check Also

ಗದಗ KRIDL ಎಇಇ ನಾಪತ್ತೆ ಕೇಸ್‌ – ಅಧಿಕಾರಿ ಪತ್ತೆಗಾಗಿ 5 ತಂಡ ರಚನೆ; ವಿಜಯವಾಡದಲ್ಲಿ ಲೊಕೇಷನ್‌ ಪತ್ತೆ!

Spread the loveಗದಗ: ರಾಜ್ಯ ಸರ್ಕಾರದಿಂದ ಅನುದಾನ ಬಂದಿಲ್ಲ, ಗುತ್ತಿಗೆದಾರರು ಕಿರುಕುಳ ಕೊಡ್ತಾರೆ ಅಂತಾ ನೊಂದು ಗದಗ ಕೆಆರ್‌ಐಡಿಎಲ್ ಇಲಾಖೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ