Breaking News

ಬಿಳಿಗಿರಿರಂಗನ ಬೆಟ್ಟದ ಕಾಡಲ್ಲಿ ಗಾಂಜಾ ಬೆಳೆದ ಕಿಡಿಗೇಡಿಗಳು – 292 ಗಿಡಗಳು ಪತ್ತೆ!

Spread the love

ಚಾಮರಾಜನಗರ: ಬಿಳಿಗಿರಿರಂಗನ ಬೆಟ್ಟದ  ಅರಣ್ಯ ಭಾಗದಲ್ಲಿ ಕಿಡಿಗೇಡಿಗಳು ಗಾಂಜಾ ಬೆಳೆದಿರುವುದು ಪತ್ತೆಯಾಗಿದೆ. ಸುಮಾರು 292 ಗಾಂಜಾ ಗಿಡಗಳು  ಪತ್ತೆಯಾಗಿವೆ.

ಬೈಲೂರು ವಲಯದ ಕೂಳಿಹಟ್ಟಿ, ಬೆಳ್ಳಾಜೆ ಬೀಟ್‌ನಲ್ಲಿ ಅಬಕಾರಿ ಹಾಗೂ ಅರಣ್ಯಾಧಿಕಾರಿಗಳ ಜಂಟೀ ಕಾರ್ಯಾಚರಣೆ ವೇಳೆ ಗಾಂಜಾ ಗಿಡಗಳು ಪತ್ತೆಯಾಗಿವೆ. ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಗಾಂಜಾ ಗಿಡಗಳು ಪತ್ತೆಯಾಗಿವೆ.

ಪತ್ತೆಯಾದ ಗಾಂಜಾ ಗಿಡಗಳ ತೂಕ ಸುಮಾರು 213 ಕೆಜಿ ಇದೆ. ಈ ಪ್ರಮಾಣದ ಗಾಂಜಾ ಗಿಡಗಳು ಪತ್ತೆಯಾಗಿರುವುದು ತೀವ್ರ ಕಳವಳಕ್ಕೂ ಕಾರಣವಾಗಿದೆ.

ಅರಣ್ಯದಲ್ಲಿ ಗಾಂಜಾ ಬೆಳೆದವರು ಯಾರು ಎಂಬುದು ಗೊತ್ತಾಗಿಲ್ಲ. ಕಾಡಿನಲ್ಲಿ ಗಾಂಜಾ ಬೆಳೆದವರು ಯಾರು ಎಂದು ಪತ್ತೆ ಹಚ್ಚಲು ಅಧಿಕಾರಿಗಳು ಕ್ರಮಕೈಗೊಂಡಿದ್ದಾರೆ.


Spread the love

About Laxminews 24x7

Check Also

ಗದಗ KRIDL ಎಇಇ ನಾಪತ್ತೆ ಕೇಸ್‌ – ಅಧಿಕಾರಿ ಪತ್ತೆಗಾಗಿ 5 ತಂಡ ರಚನೆ; ವಿಜಯವಾಡದಲ್ಲಿ ಲೊಕೇಷನ್‌ ಪತ್ತೆ!

Spread the loveಗದಗ: ರಾಜ್ಯ ಸರ್ಕಾರದಿಂದ ಅನುದಾನ ಬಂದಿಲ್ಲ, ಗುತ್ತಿಗೆದಾರರು ಕಿರುಕುಳ ಕೊಡ್ತಾರೆ ಅಂತಾ ನೊಂದು ಗದಗ ಕೆಆರ್‌ಐಡಿಎಲ್ ಇಲಾಖೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ