ಗದಗ: ರಾಜ್ಯ ಸರ್ಕಾರದಿಂದ ಅನುದಾನ ಬಂದಿಲ್ಲ, ಗುತ್ತಿಗೆದಾರರು ಕಿರುಕುಳ ಕೊಡ್ತಾರೆ ಅಂತಾ ನೊಂದು ಗದಗ ಕೆಆರ್ಐಡಿಎಲ್ ಇಲಾಖೆ ಎಇಇ ಅಧಿಕಾರಿ ಪತ್ರ ಬರೆದು ನಾಪತ್ತೆಯಾಗಿದ್ದಾರೆ. ಅಧಿಕಾರಿ ಪತ್ತೆ ಕಾರ್ಯಕ್ಕಾಗಿ ಗದಗ ಎಸ್ಪಿ ಮಾರ್ಗದರ್ಶನದಲ್ಲಿ ಪೊಲೀಸ್ ಅಧಿಕಾರಿಗಳ 5 ತಂಡ ರಚನೆ ಮಾಡಲಾಗಿದೆ.
ಕರ್ನಾಟಕ ಅಷ್ಟೇ ಅಲ್ಲಾ ಹೊರ ರಾಜ್ಯದಲ್ಲೂ ಪೋಲಿಸ್ ಪತ್ತೆ ಕಾರ್ಯ ಚುರುಕುಗೊಂಡಿದೆ. ಆ ಎಂಜಿನಿಯರ್ ನಾಪತ್ತೆ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ.
ಗದಗದ ಕೆಆರ್ಐಡಿಎಲ್ ಎಇಇ ಅಧಿಕಾರಿ ಫರ್ವೇಜ್ ಧಾರವಾಡ ನಾಪತ್ತೆ ಪ್ರಕರಣ ಅಧಿಕಾರಿಗಳು ಹಾಗೂ ರಾಜಕೀಯ ವಲಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ. ಸರ್ಕಾರದಿಂದ ಅನುದಾನ ಬಾರದಕ್ಕೆ ಗುತ್ತಿಗೆದಾರರು ಕಿರುಕುಳ ಕೊಡ್ತಿದ್ದಾರೆ ಎಂದು ನೊಂದು ಇಲಾಖೆ ಎಂಡಿಗೆ ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದಾರೆ. ಸೆ.13ರಂದು ಬೆಂಗಳೂರು ಇಲಾಖೆ ಮೀಟಿಂಗ್ ಹೋಗುವುದಾಗಿ ಮನೆಯಿಂದ ಹೋಗಿದ್ದಾರೆ. ಫೋನ್ ಸ್ವಿಚ್ ಆಫ್ ಆಗಿದ್ದು, ಮರಳಿ ಬಾರದಿದ್ದಕ್ಕೆ ಕಳೆದ 16ರಂದು ಗದಗನ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆ ಮಿಸ್ಸಿಂಗ್ ಪ್ರಕರಣ ದಾಖಲಾಗಿದೆ.
ಪೊಲೀಸ್ ಸದ್ಯದ ಮಾಹಿತಿ ಪ್ರಕಾರ, ಎಂಜಿನಿಯರ್ ಫರ್ವೇಜ್ ಗದಗನಿಂದ ಬೆಂಗಳೂರಿಗೆ ಹೋಗಿದ್ದಾರೆ. ನಂತರ ಆಂಧ್ರಪ್ರದೇಶದ ವಿಜಯವಾಡ ಕಡೆಗೆ ಹೋಗಿರುವ ಬಗ್ಗೆ ಮಾಹಿತಿ ʻಪಬ್ಲಿಕ್ ಟಿವಿʼಗೆ ಲಭ್ಯವಾಗಿದೆ. ಈ ಮಾಹಿತಿ ಆಧರಿಸಿ ಪೊಲೀಸರು ಅಧಿಕಾರಿ ಪತ್ತೆಗೆ ಇಳಿದಿದ್ದಾರೆ.
ಎಂಜಿನಿಯರ್ ಫರ್ವೇಜ್ ಹೋಗಿದ್ದೆಲ್ಲಿಗೆ?
ಗದಗದಿಂದ ಬೆಂಗಳೂರಿಗೆ ಬಂದಿದ್ದ ಫರ್ವೇಜ್ ಬೆಂಗಳೂರಿನಿಂದ ಆಂಧ್ರಪ್ರದೇಶದ ವಿಜಯವಾಡದತ್ತ ಹೋದ ಮಾಹಿತಿ ಸಿಕ್ಕಿದೆ. ಅವರ ಫೋನ್ ಕೊನೆಯ ಲೊಕೇಷನ್ ವಿಜಯವಾಡ ಎಂದು ಗೊತ್ತಾಗಿದೆ. ಫರ್ವೇಜ್ ಮನೆಯಿಂದಲೇ 40 ಸಾವಿರ ನಗದು ಕೊಂಡೊಯ್ದಿದ್ದಾರೆ. ಆದ್ರೆ ಸದ್ಯದವರೆಗೆ ಫರ್ವೇಜ್ ಎಟಿಎಂ ಕಾರ್ಡ್, ಮೊಬೈಲ್ ಎಲ್ಲೂ ಬಳಕೆಯಾಗಿಲ್ಲ. ಆ ಟೆಕ್ನಿಕಲ್ ಸುಳಿವಿನಿಂದ ಗದಗ ಪೊಲೀಸರು ಆಂಧ್ರದತ್ತ ಪತ್ತೆ ಕಾರ್ಯಕ್ಕೆ ಹೋಗಿದ್ದಾರೆ. ಎಸ್ಪಿ ಮಿಥುನ್ ಎಚ್.ಎನ್ ಮಾರ್ಗದರ್ಶನ, ಡಿವೈಎಸ್ಪಿ ಮೇಲ್ವಿಚಾರಣೆಯಲ್ಲಿ ಅಧಿಕಾರಿ ಪತ್ತೆಗಾಗಿ 5 ತಂಡಗಳಿಂದ ಶೋಧ ನಡೀತಿದೆ.
2024ರಲ್ಲೂ ಈ ಅಧಿಕಾರಿ 4-5 ದಿನ ಎಸ್ಕೇಪ್ ಆಗಿದ್ದ
ಇನ್ನು 2024 ಫೆಬ್ರವರಿನಲ್ಲೂ ಈ ಅಧಿಕಾರಿ 4-5 ದಿನಗಳ ವರೆಗೆ ಎಸ್ಕೇಪ್ ಆಗಿದ್ದ. ಆಗ ಕೆಲಸ ಒತ್ತಡ ಹಾಗೂ ಹಿರಿಯ ಅಧಿಕಾರಿಗಳ ಕಿರುಕುಳ ನೆಪವಿಟ್ಟುಕೊಂಡು ನಾಪತ್ತೆಯಾಗಿದ್ದ. ಹುಡುಕಾಟ ನಡೆಸಿದಾಗ ರಾಜಸ್ಥಾನದ ಅಜ್ಮಿರ್ನಲ್ಲಿ ಪತ್ತೆಯಾಗಿದ್ರು. ಈಗ 2ನೇ ಬಾರಿ ನಾಪತ್ತೆಯಾಗಿದ್ದಾರೆ.
ಸರ್ಕಾರದ ಅನುದಾನ ಬಗ್ಗೆ ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದು, ಅಧಿಕಾರಿಗಳು ಹಾಗೂ ರಾಜಕಾರಣದಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ.
Laxmi News 24×7