Breaking News

LPU Rape Rumour | ‘ರೇಪ್‌ ವದಂತಿ’ ಸ್ಪಷ್ಟೀಕರಣ ವಿಡಿಯೋದಲ್ಲಿ ಹೇಳಿಕೆ ಬಳಕೆ – ಅನುಮತಿ ಪಡೆಯದೇ ವಿಡಿಯೋ ಪ್ರಸಾರ ಆರೋಪ

Spread the love

ಚಂಡೀಗಢ: ಪಂಜಾಬ್‌ನ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ  ಕ್ಯಾಂಪಸ್‌ನಲ್ಲಿ ನಡೆದಿದೆ ಎನ್ನಲಾಗುತ್ತಿರುವ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಹರಿದಾಡಿದ್ದ ವದಂತಿಗಳ ಬಗ್ಗೆ ಮತ್ತಷ್ಟು ಪ್ರಶ್ನೆಗಳು ಈಗ ಹುಟ್ಟಿಕೊಂಡಿವೆ.

ವಿಶ್ವವಿದ್ಯಾಲಯದ  ಆಡಳಿತ ಮಂಡಳಿಯೇ ಬಿಡುಗಡೆ ಮಾಡಿದ್ದ ಸ್ಪಷ್ಟೀಕರಣ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ಮೂವರು ವಿದ್ಯಾರ್ಥಿನಿಯರು, ತಮಗೆ ಏನು ಹೇಳಬೇಕು ಎಂಬುದನ್ನ ಆಡಳಿತ ಮಂಡಳಿಯೇ ಸೂಚಿಸಿತ್ತು ಎಂದು ಆರೋಪಿಸಿದ್ದಾರೆ. ಅಲ್ಲದೇ, ನಮ್ಮ ಅನುಮತಿಯಿಲ್ಲದೇ ಹೇಳಿಕೆಯ ಕೆಲ ಭಾಗಗಳನ್ನ ಕತ್ತರಿಸಿ ವಿಡಿಯೋ ಪ್ರಸಾರ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ವಿಡಿಯೋನಲ್ಲಿ ಏನಿತ್ತು?
ಕ್ಯಾಂಪಸ್‌ನಲ್ಲಿ ಪ್ರತಿಭಟನೆಗಳು ತೀವ್ರಗೊಂಡಿದ್ದ ಹೊತ್ತಿನಲ್ಲಿ ಎಲ್‌ಪಿಯು ರಿಜಿಸ್ಟ್ರಾರ್ ಡಾ. ಮೋನಿಕಾ ಗುಲಾಟಿ ಅವರು ವಿಡಿಯೋವೊಂದನ್ನ ಬಿಡುಗಡೆ ಮಾಡಿದ್ದರು. ಈ ವಿಡಿಯೋದಲ್ಲಿ ಬಾಲಕಿಯರ ಹಾಸ್ಟೆಲ್‌-3 (GH3)ಯ ರೂಂ ನಂಬರ್ 504ರಲ್ಲಿ ವಾಸಿಸುತ್ತಿದ್ದ ಮೂವರು ವಿದ್ಯಾರ್ಥಿನಿಯರು  ಕಾಣಿಸಿಕೊಂಡಿದ್ದರು. ವಿದ್ಯಾರ್ಥಿನಿಯರನ್ನ ಪರಿಚಯಿಸುವ ವೇಳೆ ಡಾ. ಗುಲಾಟಿ, ರೂಂ ನಂಬರ್ 504ರಲ್ಲಿರುವ ವಿದ್ಯಾರ್ಥಿನಿಯರು ನಮಗೆ ಏನು ಹೇಳಿದ್ದಾರೆ ಎಂಬುದನ್ನು ನೀವೇ ಕೇಳಿ ಎಂದು ಹೇಳಿದ್ದರು.

ವಿಡಿಯೋದಲ್ಲಿ ಓರ್ವ ವಿದ್ಯಾರ್ಥಿನಿ, ನಾವು ರೂಂ ನಂಬರ್ 504ರ ವಾಸಿಗಳು. ನಮ್ಮ ಕೊಠಡಿಯಲ್ಲಿ ಅಂತಹ ಯಾವುದೇ ಘಟನೆ ನಡೆದಿಲ್ಲ. ಕಳೆದ 2 ತಿಂಗಳಿಂದ ನಾವು ಇಲ್ಲಿದ್ದೇವೆ. ದಯವಿಟ್ಟು ಪೊಲೀಸರು ಮತ್ತು ವಿದ್ಯಾರ್ಥಿಗಳು ನಮಗೆ ತೊಂದರೆ ಕೊಡಬೇಡಿ. ನಮ್ಮ ಕೊಠಡಿಯಲ್ಲಿ ಅಂತಹ ಯಾವುದೇ ಘಟನೆ ನಡೆದಿಲ್ಲ. ಇದರಲ್ಲಿ ನಮಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದರು.

ಮತ್ತೋರ್ವ ವಿದ್ಯಾರ್ಥಿನಿ, ಇಂದು ನಾವು ತುಂಬಾ ಮಾನಸಿಕವಾಗಿ ತೊಂದರೆಗೊಳಗಾಗಿದ್ದೇವೆ. ಮುಂದೆ ನಮಗೆ ಯಾವುದೇ ತೊಂದರೆ ನೀಡಿದರೆ ನಮ್ಮ ಪೋಷಕರನ್ನು ಸಂಪರ್ಕಿಸುತ್ತೇವೆ. ದಯವಿಟ್ಟು ನಮ್ಮನ್ನು ಕಿರುಕುಳ ನೀಡಬೇಡಿ ಎಂದು ಹೇಳಿದ್ದರು. 3ನೇ ವಿದ್ಯಾರ್ಥಿನಿ, ಪೊಲೀಸರು ಕೂಡ ಪದೇಪದೇ ನಮ್ಮ ಕೊಠಡಿಗೆ ಬರುವುದನ್ನು ನಿಲ್ಲಿಸಬೇಕು. ಇಲ್ಲವಾದರೆ ನಾವು ನಮ್ಮ ಪೋಷಕರನ್ನು ಕರೆಸಿಕೊಳ್ಳುತ್ತೇವೆ ಎಂದಿದ್ದರು.

ವಿಡಿಯೋ ಕೊನೆಯಲ್ಲಿ ಡಾ. ಮೋನಿಕಾ ಗುಲಾಟಿ, ವಿಶ್ವವಿದ್ಯಾಲಯದ ವಿರುದ್ಧ ಕಟ್ಟುಕಥೆಯ ವದಂತಿಗಳನ್ನು ಹರಡಿ ಕ್ಯಾಂಪಸ್‌ನಲ್ಲಿ ಪ್ರತಿಭಟನೆ ಹಾಗೂ ಅಶಾಂತಿ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ. ಸಮಾಜವಿರೋಧಿ ಶಕ್ತಿಗಳು ಹಾಗೂ ಸ್ವಾರ್ಥಪರ ಹಿತಾಸಕ್ತಿ ಹೊಂದಿರುವ ವ್ಯಕ್ತಿಗಳು ಇದರ ಹಿಂದಿದ್ದಾರೆ ಎಂದು ಅವರು ಹೇಳಿದ್ದರು. ಈ ಬೆನ್ನಲ್ಲೇ ಇದೀಗ ವಿದ್ಯಾರ್ಥಿನಿಯರು ಮತ್ತೊಂದು ವಿಡಿಯೋ ವನ್ನ ಹಂಚಿಕೊಂಡಿದ್ದು, ಆಡಳಿತ ಮಂಡಳಿಗೆ ತಿರುಗೇಟು ನೀಡಿದ್ದಾರೆ.

‘ಏನ್‌ ಹೇಳಬೇಕು ಅಂತ ಆಡಳಿತವೇ ಸೂಚಿಸಿತ್ತು’
ಇದಾದ ಬಳಿಕ ಇದೇ ಮೂವರು ವಿದ್ಯಾರ್ಥಿನಿಯರು ಮತ್ತೊಂದು ವಿಡಿಯೋವನ್ನ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ, ಆಡಳಿತವು ತಮ್ಮನ್ನು ವಿಡಿಯೋ ರೆಕಾರ್ಡ್ ಮಾಡಿ ಕೆಲವು ಹೀಗೇ ಹೇಳಬೇಕು ಎಂದು ಆಡಳಿತ ಮಂಡಳಿ ಸೂಚಿಸಿತ್ತು ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

ಓರ್ವ ವಿದ್ಯಾರ್ಥಿನಿ, LPU ಆಡಳಿತವೇ ಈ ಎಲ್ಲವನ್ನು ರೆಕಾರ್ಡ್ ಮಾಡಿ, ಅವರ ಪರವಾಗಿ ಹೇಳುವಂತೆ ನಮಗೆ ಸೂಚಿಸಿತ್ತು. ವಿದ್ಯಾರ್ಥಿಗಳು ಮತ್ತು ಇತರರು ನಮಗೆ ತೊಂದರೆ ನೀಡುತ್ತಿದ್ದಾರೆ ಎಂದು ಹೇಳುವಂತೆ ತಿಳಿಸಿದ್ದರು. ನಮ್ಮ ವಿಡಿಯೋವನ್ನು ಅರ್ಧಕ್ಕೆ ಕಟ್‌ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಹಾಕಲಾಗಿದೆ. ಇದರ ಬಗ್ಗೆ ನಮಗೆ ಯಾವುದೇ ಮಾಹಿತಿ ಇರಲಿಲ್ಲ. ನಮ್ಮ ಅನುಮತಿಯನ್ನೂ ಪಡೆಯಲಾಗಿಲ್ಲ. ನಮಗೆ ತಿಳಿಸದೇ ಈ ಕೆಲಸ ಮಾಡಲಾಗಿದೆ. ಇದೀಗ ನಿಂದನೆ ಮತ್ತು ಕಿರುಕುಳ ಎದುರಿಸಬೇಕಾಗಿದೆ ಎಂದು ಹೇಳಿಕೊಂಡಿದ್ದಾರೆ.

ಮತ್ತೊಬ್ಬ ವಿದ್ಯಾರ್ಥಿನಿ, ಈ ವಿಡಿಯೋಗೂ ನಮಗೂ ಯಾವ್ದೇ ಸಂಬಂಧ ಇಲ್ಲ. ಯಾವುದೋ ಒಂದು ರೋಮ್‌ ಆಯ್ಕೆ ಮಾಡಿಕೊಂಡು ಅದರ ಹೆಸರನ್ನು ಹೇಳಲಾಗಿದೆ. ಇದರಲ್ಲಿ ನಮಗೆ ಯಾವುದೇ ಪಾತ್ರವಿಲ್ಲ. ದಯವಿಟ್ಟು ನಮ್ಮನ್ನು ಬಿಟ್ಟುಬಿಡಿ ಎಂದು ಹೇಳಿದ್ದಾರೆ. ಆದ್ರೆ ವೈರಲ್‌ ಆಗಿರೋ ವಿಡಿಯೋ ಅಸಲಿಯೋ? ನಕಲಿಯೋ? ವಿದ್ಯಾರ್ಥಿನಿಯರ ಆರೋಪ ಎಷ್ಟು ಸತ್ಯ ಅನ್ನೋದು ಇನ್ನಷ್ಟೇ ತಿಳಿಯಬೇಕಿದೆ.

ಲವ್ಲಿ ವಿವಿಯಲ್ಲಿ ವಿವಾದ ಆರಂಭವಾಗಿದ್ದು ಹೇಗೆ?
LPUನಲ್ಲಿ ಉಂಟಾದ ಅಶಾಂತಿಗೆ ಕಾರಣ, ಓರ್ವ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ಬಳಿಕ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಆರೋಪಗಳು. ಈ ಆರೋಪಗಳ ಹಿನ್ನೆಲೆ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಗಳು ತೀವ್ರಗೊಂಡಿದ್ದವು. ಪ್ರತಿಭಟನೆಯ ವೇಳೆ ವಿಶ್ವವಿದ್ಯಾಲಯದ ಕೆಲವು ಭಾಗಗಳಲ್ಲಿ ಧ್ವಂಸ ಮತ್ತು ಹಾನಿ ಸಂಭವಿಸಿದ್ದು, ಕಟ್ಟಡದ ಕೆಲವು ಭಾಗಗಳಿಗೆ ಬೆಂಕಿ ಹಚ್ಚಿದ ಘಟನೆಗಳೂ ನಡೆದಿವೆ. ವಿಶ್ವವಿದ್ಯಾಲಯದಿಂದ ಹೊರಬಂದ ವಿಡಿಯೋಗಳಲ್ಲಿ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ಘೋಷಣೆಗಳನ್ನು ಕೂಗುತ್ತಾ ನ್ಯಾಯಕ್ಕಾಗಿ ಆಗ್ರಹಿಸುತ್ತಿರುವುದು ಕಂಡುಬಂದಿದೆ.


Spread the love

About Laxminews 24x7

Check Also

ಬಿಳಿಗಿರಿರಂಗನ ಬೆಟ್ಟದ ಕಾಡಲ್ಲಿ ಗಾಂಜಾ ಬೆಳೆದ ಕಿಡಿಗೇಡಿಗಳು – 292 ಗಿಡಗಳು ಪತ್ತೆ!

Spread the loveಚಾಮರಾಜನಗರ: ಬಿಳಿಗಿರಿರಂಗನ ಬೆಟ್ಟದ  ಅರಣ್ಯ ಭಾಗದಲ್ಲಿ ಕಿಡಿಗೇಡಿಗಳು ಗಾಂಜಾ ಬೆಳೆದಿರುವುದು ಪತ್ತೆಯಾಗಿದೆ. ಸುಮಾರು 292 ಗಾಂಜಾ ಗಿಡಗಳು  …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ