Breaking News

ಕೇದಾರನಾಥದಲ್ಲಿ ಏಕಾಏಕಿ ಭೂಕುಸಿತ – 5 ವರ್ಷದ ಬಾಲಕ ಸಾವು, 1,500 ಯಾತ್ರಿಕರ ಸ್ಥಳಾಂತರ

Spread the love

ಡೆಹ್ರಾಡೂನ್: ಕೇದಾರನಾಥ  ಮಾರ್ಗದ ಚಿರ್ಬಾಸಾ ಬಳಿ ಏಕಾಏಕಿ ಸಂಭವಿಸಿದ ಭೂಕುಸಿತದಿಂದಾಗಿ 5 ವರ್ಷದ ಬಾಲಕ ಸಾವನ್ನಪ್ಪಿದ್ದು, 1,500 ಯಾತ್ರಿಕರನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗಿದೆ.

ಭಾನುವಾರ (ಸೆ.27) ತಡರಾತ್ರಿ ಗೌರಿಕುಂಡದಿಂದ ಸುಮಾರು 3 ಕಿ.ಮೀ ದೂರದಲ್ಲಿರುವ ಚಿರ್ಬಾಸಾ ಬಳಿಯ ಮಾರ್ಗದಲ್ಲಿ ಬೆಟ್ಟದಿಂದ ಬಂಡೆ, ಶಿಲಾಖಂಡದ ರಾಶಿಗಳು ಏಕಾಏಕಿ ಕೂಸಿದಿವೆ. ಪರಿಣಾಮ ಕಲ್ಲು ಬಡಿದು ಉತ್ತರ ಪ್ರದೇಶದ ಇಟಾ ಮೂಲದ ಬಾಲಕ ಯಶ್(5) ಸಾವನ್ನಪ್ಪಿದ್ದು, ಹಲವು ಯಾತ್ರಿಕರು ಸಿಲುಕಿಕೊಂಡಿದ್ದರು.

ಮಾಹಿತಿ ತಿಳಿದ ಕೂಡಲೇ ಸಬ್ ಇನ್ಸ್ಪೆಕ್ಟರ್ ಆಶಿಶ್ ಡಿಮ್ರಿ ನೇತೃತ್ವದ ರಾಜ್ಯ ವಿಪತ್ತು ನಿರ್ವಹಣಾ ಪಡೆಗಳ ಜಂಟಿ ತಂಡವು ಸ್ಥಳಕ್ಕೆ ದೌಡಾಯಿಸಿದ್ದು, ರಾತ್ರಿಯಿಡಿ ರಕ್ಷಣಾ ಕಾರ್ಯಾಚರಣೆ ನಡೆಸಿ, 1,500 ಯಾತ್ರಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದ್ದಾರೆ.

ಯಾತ್ರಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದ ರಕ್ಷಣಾ ತಂಡಗಳು, ಭೂಕುಸಿತದ ಪ್ರದೇಶದ ಮೂಲಕ ಯಾತ್ರಿಕರನ್ನು ಎಚ್ಚರಿಕೆ ಸ್ಥಳಾಂತರ ಮಾಡಿವೆ. ಸದ್ಯ ಅವರನ್ನು ಗೌರಿಕುಂಡದತ್ತ ಕರೆತರಲಾಗಿದೆ.


Spread the love

About Laxminews 24x7

Check Also

ಬಿಳಿಗಿರಿರಂಗನ ಬೆಟ್ಟದ ಕಾಡಲ್ಲಿ ಗಾಂಜಾ ಬೆಳೆದ ಕಿಡಿಗೇಡಿಗಳು – 292 ಗಿಡಗಳು ಪತ್ತೆ!

Spread the loveಚಾಮರಾಜನಗರ: ಬಿಳಿಗಿರಿರಂಗನ ಬೆಟ್ಟದ  ಅರಣ್ಯ ಭಾಗದಲ್ಲಿ ಕಿಡಿಗೇಡಿಗಳು ಗಾಂಜಾ ಬೆಳೆದಿರುವುದು ಪತ್ತೆಯಾಗಿದೆ. ಸುಮಾರು 292 ಗಾಂಜಾ ಗಿಡಗಳು  …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ