Breaking News

ಬೆಳಗಾವಿ ಜಿಲ್ಲೆಯ ಪಡಿತರ ಚೀಟಿದಾರರ ಗಮನಕ್ಕೆ

Spread the love

ಬೆಳಗಾವಿ: ಅಂತ್ಯೋದಯ ಪಡಿತರ ಚೀಟಿದಾರರಿಗೆ ಕುಟುಂಬ ಸದಸ್ಯರ ಸಂಖ್ಯೆಯನ್ನು ಆಧರಿಸಿ ಉಚಿತವಾಗಿ ಆಹಾರ ಧಾನ್ಯ ವಿತರಿಸಲಾಗುತ್ತಿದ್ದು, 1 ರಿಂದ 3 ಸದಸ್ಯರು 0 ಕೆ.ಜಿ, 4 ಸದಸ್ಯರು 10 ಕೆ.ಜಿ, 5 ಸದಸ್ಯರು 30 ಕೆ.ಜಿ, 6 ಸದಸ್ಯರು 50 ಕೆ.ಜಿ, 7 ಸದಸ್ಯರು 70 ಕೆ.ಜಿ, 8 ಸದಸ್ಯರು 90 ಕೆ.ಜಿ, 9 ಸದಸ್ಯರು 110 ಕೆ.ಜಿ, 10 ಸದಸ್ಯರಿಗೆ 130 ಕೆ.ಜಿ ಅಕ್ಕಿಯನ್ನು ನೀಡಲಾಗುತ್ತಿದೆ.

ರಾಜ್ಯ/ಕೇಂದ್ರ ಆದ್ಯತಾ (PHH) ಪಡಿತರ ಚೀಟಿದಾರರು ಪ್ರತಿ ಸದಸ್ಯರಿಗೆ 5 ಕೆ.ಜಿ + 5 ಕೆ.ಜಿ = 10 ಕೆ.ಜಿ ಅಕ್ಕಿ ನೀಡಲಾಗುತ್ತಿದ್ದು, ಪಡಿತರ ಚೀಟಿದಾರರು ತಮ್ಮ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಬಯೋಮೆಟ್ರಿಕ್ ಧೃಡೀಕರಣದ ಮೂಲಕ ಆಹಾರ ಧಾನ್ಯವನ್ನು ಪಡೆಯಬೇಕು.

ಜಿಲ್ಲೆಯಲ್ಲಿ ಕಳೆದ 5 ವರ್ಷಗಳ ಹಿಂದೆ ಇ-ಕೆವೈಸಿ ಆಗಿರುವ ಒಟ್ಟು ಪಡಿತರ ಚೀಟಿದಾರರ ಸಂಖ್ಯೆ 22,29,900 ಇದ್ದು, ಇಲ್ಲಿಯವರೆಗೆ ಒಟ್ಟು-13,68,236 ಪಡಿತರ ಚೀಟಿದಾರರ ಇ-ಕೆವೈಸಿ ಪೂರ್ಣಗೊಂಡಿದೆ. ಉಳಿದಿರುವ 8,61,664 ಪಡಿತರ ಚೀಟಿದಾರರ ಇ-ಕೆವೈಸಿ ಕಾರ್ಯ ಬಾಕಿ ಇರುತ್ತದೆ. ಇಲ್ಲಿಯವರೆಗೆ ಇ-ಕೆವೈಸಿ ಆಗದೇ ಇರುವ ಆದ್ಯತಾ (ಬಿ.ಪಿ.ಎಲ್) ಹಾಗೂ ಆದ್ಯತೇತರ (ಎ.ಪಿ.ಎಲ್) ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ಚೀಟಿಯಲ್ಲಿರುವ ಎಲ್ಲ ಸದಸ್ಯರ ಆಧಾರ್ ಕಾರ್ಡ ಮತ್ತು ಆಧಾರ್ ಕಾರ್ಡಗೆ ಲಿಂಕ್ ಆಗಿರುವ ಮೊಬೈಲ್ ನಂಬರ ತೆಗೆದುಕೊಂಡು ಹೋಗಿ ಕಡ್ಡಾಯವಾಗಿ ಇ-ಕೈವೆಸಿ ಮಾಡಿಸಬೇಕು.

ಪಡಿತರ ವಿತರಣೆಯಲ್ಲಿ ಯಾವುದೇ ತೊಂದರೆ ಕಂಡು ಬಂದಲ್ಲಿ ಸಂಬಂಧಿಸಿದ ಆಹಾರ ನಿರೀಕ್ಷಕರು, ತಹಶೀಲ್ದಾರರು ಅಥವಾ ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.


Spread the love

About Laxminews 24x7

Check Also

ಮಹರ್ಷಿ ವಾಲ್ಮೀಕಿ ನಮ್ಮ ಜೀವನಕ್ಕೆ ದಾರಿದೀಪ: ಎನ್. ಬಿ.ಪಾಟೀಲ

Spread the loveಮಹಾಲಿಂಗಪುರ: ರಾಮಾಯಣ ಮಹಾಕಾವ್ಯದ ಮೂಲಕ ಸತ್ಯ, ಧರ್ಮ, ತ್ಯಾಗ, ಕರ್ತವ್ಯ ಮತ್ತು ಮಾನವೀಯ ಮೌಲ್ಯಗಳ ಮಹತ್ವವನ್ನು ಜಗತ್ತಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ