Breaking News

ಇಂದು ರಾತ್ರಿ iphone 18 Pro ರಿಲೀಸ್ – ಫೋಲ್ಡೇಬಲ್ ಫೋನ್‌ಗೆ ಹೆಸರು `ಐಫೋನ್ ಡ್ಯುವೋ’

Spread the love

ವಾಷಿಂಗ್ಟನ್: ಆಪಲ್  ಕಂಪನಿಯು ಐಫೋನ್‌ನ ಮುಂಬರುವ 18ರ ಸರಣಿಯನ್ನು ಇಂದು  ಬಿಡುಗಡೆ ಮಾಡಲಿದೆ.

ಇಂದು ರಾತ್ರಿ 9:30ಕ್ಕೆ (ಭಾರತೀಯ ಕಾಲಮಾನ) ಲಾಂಚ್ ಈವೆಂಟ್ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಐಫೋನ್ 18 ಪ್ರೋ, ಐಫೋನ್ 18 ಪ್ರೋ ಮ್ಯಾಕ್ಸ್ ಹಾಗೂ ಬಹುನಿರೀಕ್ಷಿತ ಐಫೋನ್‌ನ ಫೋಲ್ಡೇಬಲ್ ಫೋನ್ ರಿಲೀಸ್ ಆಗುವ ನಿರೀಕ್ಷೆಯಿದೆ. ಇದರ ಜೊತೆಗೆ ಏರ್‌ಪಾಡ್ಸ್, ಆಪಲ್ ವಾಚ್ ಹಾಗೂ ಹಲವು ಹೊಸ ಪ್ರಾಡಕ್ಟ್‌ಗಳು ರಿಲೀಸ್ ಆಗಲಿದೆ.

ಫೋಲ್ಡೇಬಲ್ ಫೋನ್‌ಗೆ ಐಫೋನ್ ಡ್ಯುವೋ ಎಂದು ಹೆಸರು:
ಇಂದಿನ ಈವೆಂಟ್‌ನಲ್ಲಿ ಬಹುನಿರೀಕ್ಷಿತ ಐಫೋನ್‌ನ ಫೋಲ್ಡೇಬಲ್ ಫೋನ್ `ಐಫೋನ್ ಡ್ಯುವೋ’ ರಿಲೀಸ್ ಆಗುವ ನಿರೀಕ್ಷೆಯಿದೆ. ಈ ಫೋಲ್ಡೇಬಲ್ ಫೋನ್‌ಗೆ `ಐಫೋನ್ ಡ್ಯುವೋ’ ಅಥವಾ ಐಫೋನ್ ಅಲ್ಟ್ರಾ ಎಂದು ಕರೆಯುತ್ತಾರೆ. ಇದು ಪುಸ್ತಕದಂತೆ ತೆರೆಯುವ (Book-style) ಡಿಸ್ಪ್ಲೇ ಹಾಗೂ ಅತ್ಯಾಧುನಿಕ ಫೀಚರ್‌ಗಳನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಐಫೋನ್ ಫೋಲ್ಡೇಬಲ್ ಫೋನ್‌ನ ಫೋಟೋಗಳು ವೈರಲ್ ಆಗಿದೆ.

ಕ್ಯಾಲಿಫೋರ್ನಿಯಾದ ಕ್ಯುಪರ್ಟಿನೋ ಆಪಲ್ ಪಾರ್ಕ್‌ನಲ್ಲಿ `ಸರ್ಪ್ರೈಸ್ ಅಂಡ್ ಶೈನ್’ ಎಂಬ ಟ್ಯಾಗ್‌ಲೈನ್‌ನೊಂದಿಗೆ ಈ ಈವೆಂಟ್ ನಡೆಯಲಿದ್ದು, ಹೊಸ ಸಿಇಓ ಜಾನ್ ಟೆರ್ನಸ್ ಹೊಸ ಪ್ರಾಡಕ್ಟ್‌ಗಳನ್ನು ಲಾಂಚ್ ಮಾಡಲಿದ್ದಾರೆ. ಈ ಕಾರ್ಯಕ್ರಮವನ್ನು ಆಪಲ್‌ನ ಅಧಿಕೃತ ವೆಬ್‌ಸೈಟ್, ಆಪಲ್ ಯೂಟ್ಯೂಬ್ ಚಾನೆಲ್ ಹಾಗೂ ಆಪಲ್ ಟಿವಿ ಆಪ್‌ನಲ್ಲಿ ನೇರಪ್ರಸಾರ ವೀಕ್ಷಿಸಬಹುದು. ಈಗಾಗಲೇ ಈ ಕುರಿತು ಆಪಲ್ ಕಂಪನಿಯು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

ಬಿಡುಗಡೆಯಾಗುವ ಪ್ರಾಡಕ್ಟ್‌ಗಳ ಸಂಭಾವ್ಯ ಪಟ್ಟಿ:
ಐಫೋನ್ 18 ಪ್ರೋ, ಐಫೋನ್ 18 ಪ್ರೋ ಮ್ಯಾಕ್ಸ್, ಐಫೋನ್ ಫೋಲ್ಡೇಬಲ್, ಆಪಲ್ ವಾಚ್ ಸೀರಿಸ್ 12, ಆಪಲ್ ವಾಚ್ ಅಲ್ಟ್ರಾ 4, ಏರ್‌ಪಾಡ್ 6, ಐಪ್ಯಾಡ್ ಮಿನಿ, ಹೋಮ್‌ಪಾಡ್ ಮಿನಿ 2, ಆಪಲ್ ಟಿವಿ 4ಕೆ, ಆಪಲ್ ಹೋಮ್ ಹಬ್ ಬಿಡುಗಡೆಯಾಗುವ ಸಾಧ್ಯತೆಯಿದೆ.


Spread the love

About Laxminews 24x7

Check Also

ತಮಿಳುನಾಡಿಗೆ ನೀರು ಹರಿಸುವ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ

Spread the loveಬೆಂಗಳೂರು: ತಮಿಳುನಾಡಿಗೆ ಪ್ರತಿದಿನ 6 ಸಾವಿರ ಕ್ಯೂಸೆಕ್ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ  …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ