Breaking News

ರಾಹುಲ್‌ ಗಾಂಧಿ ಪ್ರಯಾಣಿಸುತ್ತಿದ್ದ ಏರ್‌ ಇಂಡಿಯಾ ವಿಮಾನ 10 ನಿಮಿಷ ಆಗಸದಲ್ಲೇ ಗಿರಕಿ – 2ನೇ ಪ್ರಯತ್ನದಲ್ಲಿ ಸೇಫ್‌ ಲ್ಯಾಂಡಿಂಗ್!

Spread the love

ಲಕ್ನೋ: ಲೋಕಸಭೆಯ ವಿಪಕ್ಷದ ನಾಯಕ ರಾಹುಲ್ ಗಾಂಧಿ  ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನವು ಮಂಗಳವಾರ (ಇಂದು) ಲಕ್ನೋ ವಿಮಾನ ನಿಲ್ದಾಣದಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ಮೊದಲ ಲ್ಯಾಂಡಿಂಗ್ ಪ್ರಯತ್ನ ಸ್ಥಗಿತಗೊಳಿಸಿ ‘ಗೋ-ಅರೌಂಡ್’  ಮಾಡಿದೆ. ಬಳಿಕ 2ನೇ ಪ್ರಯತ್ನದಲ್ಲಿ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ ಎಂದು ವರದಿಗಳು ತಿಳಿಸಿವೆ.

‘ಗೋ-ಅರೌಂಡ್’ ಎಂದರೆ ವಿಮಾನವು ಲ್ಯಾಂಡಿಂಗ್‌ಗೆ ಮುನ್ನ ಇಳಿಯುವ ಪ್ರಕ್ರಿಯೆಯನ್ನ ಸ್ಥಗಿತಗೊಳಿಸಿ ಮತ್ತೆ ಮೇಲಕ್ಕೆ ಏರಿ, ಪರಿಸ್ಥಿತಿ ಅನುಕೂಲಕರವಾದ ನಂತರ ಮತ್ತೊಮ್ಮೆ ಲ್ಯಾಂಡಿಂಗ್‌ಗೆ ಪ್ರಯತ್ನಿಸುವ ಪ್ರಕ್ರಿಯೆ.

ದೆಹಲಿ–ಲಕ್ನೋ ಮಾರ್ಗದಲ್ಲಿ ಸಂಚರಿಸುತ್ತಿದ್ದ ಏರ್ ಇಂಡಿಯಾ AI-1717 ಸಂಖ್ಯೆ ವಿಮಾನವು ಮಂಗಳವಾರ ಮಧ್ಯಾಹ್ನ ಸುಮಾರು 3.45ಕ್ಕೆ ಲಕ್ನೋ ವಿಮಾನ ನಿಲ್ದಾಣದಲ್ಲಿ ಇಳಿಯಲು ಮುಂದಾಗಿತ್ತು. ಆದ್ರೆ ಆ ವೇಳೆ ಬೀಸುತ್ತಿದ್ದ ಬಲವಾದ ಗಾಳಿಯ ಪರಿಸ್ಥಿತಿಯನ್ನ ವಿಮಾನದ ಸಿಬ್ಬಂದಿ ಪರಿಶೀಲಿಸಿ, ಮೊದಲ ಲ್ಯಾಂಡಿಂಗ್ ಪ್ರಯತ್ನ ಕೈಬಿಟ್ಟರು.

ಸುಮಾರು 10 ನಿಮಿಷಗಳ ಬಳಿಕ, 3.55ಕ್ಕೆ ವಿಮಾನವು 2ನೇ ಪ್ರಯತ್ನದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.

ವಿಮಾನ ಲ್ಯಾಂಡ್ ಆದ ಬಳಿಕ ಎಲ್ಲಾ ಪ್ರಯಾಣಿಕರು ಯಾವುದೇ ತೊಂದರೆಯಿಲ್ಲದೆ ಸಾಮಾನ್ಯ ರೀತಿಯಲ್ಲಿ ವಿಮಾನದಿಂದ ಇಳಿದಿದ್ದಾರೆ. ಘಟನೆಯ ಕುರಿತು ಏರ್ ಇಂಡಿಯಾ ಸಂಸ್ಥೆ ಇನ್ನೂ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.


Spread the love

About Laxminews 24x7

Check Also

ಅಂಗನವಾಡಿ ಕಾರ್ಯಕರ್ತೆಯರ ವೇತನ 4,000 ರೂ. ಹೆಚ್ಚಳ – 5 ಲಕ್ಷದವರೆಗೆ ಆರೋಗ್ಯ ಸೇವೆ; ಸಿಎಂ ಯೋಗಿ ಬಂಪರ್‌ ಗಿಫ್ಟ್‌!

Spread the loveಅಯೋಧ್ಯೆ: ಉತ್ತರ ಪ್ರದೇಶದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  ಬಂಪರ್‌ ಗಿಫ್ಟ್‌ ಕೊಟ್ಟಿದ್ದಾರೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ