Breaking News

ಬೆಂಗಳೂರು ಡಿಆರ್‌ಐ ಅಧಿಕಾರಿಗಳ ಕಾರ್ಯಾಚರಣೆ – 180 ನಕ್ಷತ್ರ ಆಮೆಗಳು ವಶಕ್ಕೆ

Spread the love

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಡಿಆರ್‌ಐ ಅಧಿಕಾರಿಗಳು  ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಗಾಂಧಿನಗರದಲ್ಲಿ 180 ನಕ್ಷತ್ರ ಆಮೆಗಳನ್ನು  ವಶಪಡಿಸಿಕೊಂಡಿದ್ದಾರೆ.

ಟ್ರಾಲಿ ಬ್ಯಾಗ್‌ನಲ್ಲಿ ನಕ್ಷತ್ರ ಆಮೆಗಳನ್ನು ಸಾಗಾಟ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಡಿಆರ್‌ಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹತ್ತು ಸಾವಿರಕ್ಕೆ ನಕ್ಷತ್ರ ಆಮೆಗಳನ್ನು ಮಾರಾಟ ಮಾಡಲು ಯತ್ನಿಸಿದ್ದು, ಪ್ರಕರಣ ಸಂಬಂಧ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಓರ್ವ ವ್ಯಕ್ತಿ ಕಲಾಸಿಪಾಳ್ಯದಿಂದ ನಕ್ಷತ್ರ ಆಮೆಗಳನ್ನು ತಂದುಕೊಟ್ಟಿದ್ದ. ಘಟನೆ ಸಂಬಂದ ಪ್ರಕರಣ ದಾಖಲಿಸಿದ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ನಕ್ಷತ್ರ ಆಮೆಗಳನ್ನು ಇಟ್ಟುಕೊಂಡರೆ ಅದೃಷ್ಟ ಬರುತ್ತದೆ ಎಂದು ಆರೋಪಿಗಳು ನಂಬಿಸುತ್ತಿದ್ದರು. ಮಾರಾಟಕ್ಕೆ ಯತ್ನಿಸಿದ ವೇಳೆ ಆಮೆಗಳನ್ನು ಜಪ್ತಿ ಮಾಡಿದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.


Spread the love

About Laxminews 24x7

Check Also

ಮಹರ್ಷಿ ವಾಲ್ಮೀಕಿ ನಮ್ಮ ಜೀವನಕ್ಕೆ ದಾರಿದೀಪ: ಎನ್. ಬಿ.ಪಾಟೀಲ

Spread the loveಮಹಾಲಿಂಗಪುರ: ರಾಮಾಯಣ ಮಹಾಕಾವ್ಯದ ಮೂಲಕ ಸತ್ಯ, ಧರ್ಮ, ತ್ಯಾಗ, ಕರ್ತವ್ಯ ಮತ್ತು ಮಾನವೀಯ ಮೌಲ್ಯಗಳ ಮಹತ್ವವನ್ನು ಜಗತ್ತಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ