Breaking News

ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಅನುಮಾನಾಸ್ಪದ ಸಾವು – ಪ್ರಿಯಕರನಿಂದ ಕೊಲೆ ಶಂಕೆ

Spread the love

ಚಿಕ್ಕಬಳ್ಳಾಪುರ: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ  ತಾಲೂಕು ಚೊಕ್ಕಹಳ್ಳಿ  ಗ್ರಾಮದ ಬಾಡಿಗೆ ಮನೆಯಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ ತಾಲೂಕು ಇನಮಿಂಚೇನಹಳ್ಳಿಯ ನಿವಾಸಿ ಚೈತ್ರಾ ಮೃತ ಮಹಿಳೆ. ಚೈತ್ರಾ 7-8 ವರ್ಷಗಳ ಹಿಂದೆ ಗಂಡನನ್ನ ಬಿಟ್ಟು ಬೇರೆ ಮನೆಯಲ್ಲಿ ವಾಸವಾಗಿದ್ದರು. 10 ಹಾಗೂ 12 ವರ್ಷದ ಮಕ್ಕಳೊಂದಿಗೆ ಚೈತ್ರಾ ಬೇರೆ ವಾಸವಾಗಿದ್ದರು.

ಕೋಲಾರ ಮೂಲದ ಪ್ರಿಯಕರ ಶಬ್ಬೀರ್ ಎಂಬಾತನ ವಿರುದ್ಧ ಹಲ್ಲೆ, ಕೊಲೆ ಆರೋಪ ಕೇಳಿಬಂದಿದೆ. ಚೈತ್ರಾಳನ್ನ ಪಕ್ಕದ ಮನೆಯವರ ಸಹಾಯದಿಂದ ಆಸ್ಪತ್ರೆಗೆ ಕಳುಹಿಸಿ ಶಬ್ಬೀರ್ ಎಸ್ಕೇಪ್ ಆಗಿದ್ದಾನೆ. ಚೈತ್ರಾಳ ಮೊಬೈಲ್ ತೆಗೆದುಕೊಂಡು ಪ್ರಿಯಕರ ಶಬ್ಬೀರ್ ಪರಾರಿಯಾಗಿದ್ದಾನೆ. ನಂದಿಗಿರಿಧಾಮ ಪೊಲೀಸರು ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Spread the love

About Laxminews 24x7

Check Also

ಶಿವಮೊಗ್ಗ ದಸರಾದಲ್ಲಿ ಅಂಬಾರಿ ಆನೆ ರಂಪಾಟ – ಅಧಿಕಾರಿಗಳಿಗೆ ಕ್ಲೀನ್‌ಚಿಟ್

Spread the loveಶಿವಮೊಗ್ಗ: ದಸರಾ ಮೆರವಣಿಗೆಯಲ್ಲಿ  ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ರಂಪಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಕ್ಲೀನ್‌ಚಿಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ