Breaking News

ಮದುವೆ ಮನೆಯಲ್ಲೂ ʻಡಿ ಬಾಸ್‌, ಡಿ ಬಾಸ್‌ʼ ಜೈಕಾರ – ಫ್ಯಾನ್ಸ್‌ಗೆ ಬುದ್ಧಿ ಹೇಳಿದ ವಿಜಯಲಕ್ಷ್ಮಿ

Spread the love

ಬೆಂಗಳೂರು: ದರ್ಶನ್ ಅಭಿಮಾನಿಯೊಬ್ಬರ  ಮದುವೆ ಕಾರ್ಯಕ್ರಮಕ್ಕೆ ಇತ್ತೀಚೆಗೆ ವಿಜಯಲಕ್ಷ್ಮಿ ಭೇಟಿ ನೀಡಿದ್ದರು. ಈ ವೇಳೆ ಅಭಿಮಾನಿಗಳು ‘ಡಿ ಬಾಸ್’ ಎಂದು ಜೈಕಾರ ಹಾಕಿದ್ದು, ಇದಕ್ಕೆ ವಿಜಯಲಕ್ಷ್ಮಿ ನಯವಾಗಿ ಆಕ್ಷೇಪ ವ್ಯಕ್ತಪಡಿಸಿ, ‘ಡಿ ಬಾಸ್’ ಎಂಬ ಘೋಷಣೆ ಬೇಡ ಎಂದು ಅಭಿಮಾನಿಗಳಿಗೆ ತಿಳಿ ಹೇಳಿದ್ದಾರೆ.

ವಿಜಯಲಕ್ಷ್ಮಿ ಮದುವೆ ಮನೆಗೆ ಬರುತ್ತಿದ್ದಂತೆ ಅಲ್ಲಿ ಸೇರಿದ್ದ ದರ್ಶನ್ ಅಭಿಮಾನಿಗಳು ‘ಡಿ ಬಾಸ್.. ಡಿ ಬಾಸ್..’ ಎಂದು ಜೈಕಾರ ಹಾಕಿದ್ದಾರೆ. ಈ ವೇಳೆ ವಿಜಯಲಕ್ಷ್ಮಿ ನಗುಮುಖದಲ್ಲೇ ಅಭಿಮಾನಿಗಳಿಗೆ ನಯವಾಗಿ ಬುದ್ಧಿ ಹೇಳಿದ್ದಾರೆ.

ʻಎಲ್ಲಾ ಕಡೆ ಇದೇ ತೊಂದರೆ ಆಗ್ತಿರೋದು. ಇದನ್ನ ನಿಲ್ಲಿಸಬೇಕು ಡಿ ಬಾಸ್ ಅನ್ನೋ ಘೋಷಣೆ ಬೇಡʼ ಎಂದು ವಿಜಯಲಕ್ಷ್ಮಿ ಅಭಿಮಾನಿಗಳಿಗೆ ಹೇಳಿದ್ದಾರೆ.

ವಧು-ವರರಿಗೆ ಶುಭಾಶಯ ಹೇಳಲು ಬಂದಿದ್ದ ವಿಜಯಲಕ್ಷ್ಮಿ ಅವರ ಮುಂದೆ ಅಭಿಮಾನಿಗಳು ದರ್ಶನ್‌ ಪರ ಘೋಷಣೆ ಕೂಗಿದಾಗ, ನಗುತ್ತಲೇ ಆಕ್ಷೇಪ ವ್ಯಕ್ತಪಡಿಸಿ ಅಭಿಮಾನಿಗಳನ್ನು ಸುಮ್ಮನಾಗಿಸಿದ್ದಾರೆ.


Spread the love

About Laxminews 24x7

Check Also

ರಾಜ್ಯದಲ್ಲಿ ಬರ – 177 ತಾಲೂಕುಗಳಲ್ಲಿ 46,324 ಕೋಟಿ ಬೆಳೆ ನಷ್ಟ , 7,142 ಕೋಟಿ ನೆರವಿಗೆ ಮನವಿ

Spread the loveಬೆಂಗಳೂರು: ರಾಜ್ಯದ 240 ತಾಲೂಕುಗಳ ಪೈಕಿ 217 ತಾಲೂಕುಗಳನ್ನ ಬರಪೀಡಿತ  ಎಂದು ಘೋಷಿಸಲಾಗಿದ್ದು, ಬರ ಪರಿಸ್ಥಿತಿ ಹಿನ್ನೆಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ